1
|
ಸಹೋದರರೇ, ನಾನಂತೂ ಆತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಲಾರದೆ ಪ್ರಾಪಂಚಿಕರೂ ಕ್ರಿಸ್ತ ನಲ್ಲಿ ಎಳೆಕೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಬೇಕಾಯಿತು. |
2
|
ನಿಮಗೆ ಹಾಲು ಕುಡಿಸಿದೆನು, ಅನ್ನ ಕೊಡಲಿಲ್ಲ; ಅನ್ನ ತಿನು ್ನವದಕ್ಕೆ ನಿಮಗೆ ಶಕ್ತಿ ಇರಲಿಲ್ಲ, ಇಲ್ಲವೆ ಈಗಲಾದರೂ ಶಕ್ತಿಯಿಲ್ಲ; |
3
|
ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೇಕಿಚ್ಚು, ಜಗಳ, ಭೇದಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದು ಮನುಷ್ಯರಂತೆ ನಡೆಯುತ್ತೀರಲ್ಲವೇ? |
4
|
ಒಬ್ಬನು--ನಾನು ಪೌಲನ ವನೆಂದೂ ಮತ್ತೊಬ್ಬನು--ನಾನು ಅಪೊಲ್ಲೋಸನ ವನೆಂದೂ ಹೇಳುತ್ತಿರುವಾಗ ನೀವು ಪ್ರಾಪಂಚಿಕ ರಲ್ಲವೇ? |
5
|
ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ. |
6
|
ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. |
7
|
ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. |
8
|
ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. |
9
|
ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ. |
10
|
ದೇವರು ನನಗೆ ಕೃಪೆಯನ್ನು ಕೊಟ್ಟ ಪ್ರಕಾರ ನಾನು ಪ್ರವೀಣಶಿಲ್ಪಿಯಂತೆ ಆಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ; ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು. |
11
|
ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. |
12
|
ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ |
13
|
ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು; ಯಾಕಂದರೆ ಆ ದಿನವು ಬೆಂಕಿ ಯೊಡನೆ ಪ್ರತ್ಯಕ್ಷವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. |
14
|
ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ದೊರೆಯುವದು; |
15
|
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು. ಆದರೂ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಹಾಗಿರುವನು. |
16
|
ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? |
17
|
ಯಾವನಾದರೂ ದೇವರ ಆಲಯವನ್ನು ಹೊಲೆಮಾಡಿದರೆ ದೇವರು ಅವನನ್ನು ನಾಶಮಾಡುವನು; ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ. |
18
|
ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ. |
19
|
ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಯಾಕಂದರೆ--ಆತನು ಜ್ಞಾನಿ ಗಳನ್ನು ಅವರ ಸ್ವಂತತಂತ್ರದಲ್ಲಿಯೇ ಹಿಡು ಕೊಳ್ಳುತ್ತಾನೆಂತಲೂ |
20
|
ಜ್ಞಾನಿಗಳ ಯೋಚನೆಗಳು ನಿಷ್ಪಲವಾದವುಗಳೆಂದೂ ಕರ್ತನು ತಿಳುಕೊಳ್ಳುತ್ತಾನೆ ಬರೆದದೆಯಲ್ಲಾ; |
21
|
ಆದಕಾರಣ ಮನುಷ್ಯ ಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ. ಯಾಕಂದರೆ ಸಮಸ್ತವೂ ನಿಮ್ಮದು; |
22
|
ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ ಲೋಕವಾಗಲಿ ಜೀವವಾಗಲಿ ಮರಣವಾಗಲಿ ಈಗಿನ ಸಂಗತಿ ಗಳಾಗಲಿ ಮುಂದಣ ಸಂಗತಿಗಳಾಗಲೀ ಸಮಸ್ತವೂ ನಿಮ್ಮವೇ; |
23
|
ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು. |
1-Corinthians 3:1 Telugu Language Bible Words basic statistical display
COMING SOON ...