1
|
ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ. |
2
|
ನಾನು ಬಂದಾಗ (ಹಣ) ಕೂಡಿಸುವದು ಇರದಂತೆ ದೇವರು ಅಭಿವೃದ್ಧಿ ಪಡಿಸಿದ ಪ್ರಕಾರ ವಾರದ ಮೊದಲನೆಯ ದಿನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಹತ್ತಿರ ಕೂಡಿಟ್ಟುಕೊಳ್ಳಲಿ. |
3
|
ನೀವು ಧಾರಾಳವಾಗಿ ಕೊಟ್ಟದ್ದನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವಂತೆ ನೀವು ನಿಮ್ಮ ಪತ್ರಗಳಿಂದ ಯಾರನ್ನು ಯೋಗ್ಯರೆಂದು ಸೂಚಿಸು ವಿರೋ ಅವರನ್ನು ನಾನು ಕಳುಹಿಸುವೆನು. |
4
|
ನಾನು ಸಹ ಹೋಗುವದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಹೋಗಬಹುದು. |
5
|
ನಾನು ಮಕೆದೋನ್ಯವನ್ನು ಹಾದು ಹೋಗುವಾಗ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನಾನು ಮಕೆದೋನ್ಯವನ್ನು ಹಾದು ಹೋಗಲೇಬೇಕು. |
6
|
ನಿಮ್ಮಲ್ಲಿದ್ದು ಹಿಮಕಾಲ ವನ್ನಾದರೂ ಕಳೆದೇನು; ಆಗ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗ ಕಳುಹಿಸಬಹುದು. |
7
|
ಈಗ ನನ್ನ ಪ್ರಯಾಣದಲ್ಲಿ ನಿಮ್ಮನ್ನು ನೋಡಲು ನನಗೆ ಇಷ್ಟವಿಲ್ಲ, ಕರ್ತನ ಅಪ್ಪಣೆಯಾದರೆ ನಾನು ನಿಮ್ಮೊಂದಿಗೆ ಸ್ವಲ್ಪ ಕಾಲ ಇರುವದಕ್ಕೆ ನಿರೀಕ್ಷಿಸುತ್ತೇನೆ. |
8
|
ಪಂಚಾ ಶತ್ತಮ ದಿನದ ವರೆಗೆ ನಾನು ಎಫೆಸದಲ್ಲಿ ಇರುವೆನು. |
9
|
ಕಾರ್ಯಸಾಧಕವಾಗುವ ದೊಡ್ಡದೊಂದು ಬಾಗಲು ನನಗೋಸ್ಕರ ತೆರೆಯಲ್ಪಟ್ಟಿದೆ, ಅನೇಕ ವಿರೋಧಿಗಳು ಇದ್ದಾರೆ. |
10
|
ತಿಮೋಥೆಯನು ಬಂದರೆ ಅವನು ನಿಮ್ಮ ಬಳಿ ಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಅವನು ಕರ್ತನ ಕೆಲಸವನ್ನು ನಡಿಸುತ್ತಾನೆ. |
11
|
ಆದದರಿಂದ ಯಾರೂ ಅವನನ್ನು ಹೀನೈಸಬಾರದು; ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನ ದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ನಾನು ಎದುರು ನೋಡುತ್ತೇನೆ. |
12
|
ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು. |
13
|
ಸಹೋದರನಾದ ಅಪೊಲ್ಲೋಸನು ಸಹೋದರ ರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ನಾನು ಬಹಳವಾಗಿ ಇಷ್ಟಪಟ್ಟೆನು. ಆದರೆ ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ; ಅನುಕೂಲವಾದ ಸಮಯ ಸಿಕ್ಕಿದಾಗ ಬರುವನು. |
14
|
ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ. |
15
|
ಸ್ತೆಫನನ ಮನೆಯವರು ಅಕಾಯದ ಪ್ರಥಮ ಫಲವೆಂದೂ ಅವರು ಪರಿಶುದ್ಧರ ಸೇವೆಯಲ್ಲಿ ತಮ್ಮನ್ನು ಒಪ್ಪಿಸಿಕೊಟ್ಟಿದ್ದರೆಂದೂ ನಿಮಗೆ ತಿಳಿದದೆ. |
16
|
ಆದದರಿಂದ ಅಂಥವರಿಗೂ ನಮ್ಮೊಂದಿಗೆ ಸಹಾಯ ಮಾಡುತ್ತಾ ಪ್ರಯಾಸಪಡುವ ಪ್ರತಿಯೊಬ್ಬನಿಗೂ ನೀವು ಅಧೀನರಾಗಬೇಕೆಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ. |
17
|
ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷ ವಾಯಿತು. ನೀವು ಇಲ್ಲದ್ದರಿಂದ ಉಂಟಾದ ಕೊರತೆ ಯನ್ನು ಅವರು ನೀಗಿಸಿದರು. |
18
|
ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ. |
19
|
ಆಸ್ಯ ಸಭೆಗಳವರು ನಿಮಗೆ ವಂದನೆ ಹೇಳುತ್ತಾರೆ. ಅಕ್ವಿಲನೂ ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನಲ್ಲಿ ಅನೇಕ ವಂದನೆಗಳನ್ನು ಹೇಳುತ್ತಾರೆ. |
20
|
ಸಹೋದರ ರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. |
21
|
ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆ ಯನ್ನು ಬರೆದಿದ್ದೇನೆ. |
22
|
ಯಾವನಾದರೂ ಕರ್ತನಾದ ಯೇಸು ಕ್ರಿಸ್ತನನ್ನು ಪ್ರೀತಿಸದಿದ್ದರೆ ಅವನು ಅನಾಥಿಮ (ಶಾಪಗ್ರಸ್ತನಾಗಲಿ;) ಮಾರನಾಥ (ನಮ್ಮ ಕರ್ತನು ಬರುತ್ತಾನೆ). |
23
|
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. |
24
|
ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರೊಂದಿಗೆ ನನ್ನ ಪ್ರೀತಿ ಇರಲಿ. ಆಮೆನ್. |
1-Corinthians 16:2 Kannada Language Bible Words basic statistical display
COMING SOON ...