Indian Language Bible Word Collections
1 Corinthians 3:2
1 Corinthians Chapters
1 Corinthians 3 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
1 Corinthians Chapters
1 Corinthians 3 Verses
1
ಸಹೋದರರೇ, ನಾನಂತೂ ಆತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಲಾರದೆ ಪ್ರಾಪಂಚಿಕರೂ ಕ್ರಿಸ್ತ ನಲ್ಲಿ ಎಳೆಕೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತನಾಡಬೇಕಾಯಿತು.
2
ನಿಮಗೆ ಹಾಲು ಕುಡಿಸಿದೆನು, ಅನ್ನ ಕೊಡಲಿಲ್ಲ; ಅನ್ನ ತಿನು ್ನವದಕ್ಕೆ ನಿಮಗೆ ಶಕ್ತಿ ಇರಲಿಲ್ಲ, ಇಲ್ಲವೆ ಈಗಲಾದರೂ ಶಕ್ತಿಯಿಲ್ಲ;
3
ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೇಕಿಚ್ಚು, ಜಗಳ, ಭೇದಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದು ಮನುಷ್ಯರಂತೆ ನಡೆಯುತ್ತೀರಲ್ಲವೇ?
4
ಒಬ್ಬನು--ನಾನು ಪೌಲನ ವನೆಂದೂ ಮತ್ತೊಬ್ಬನು--ನಾನು ಅಪೊಲ್ಲೋಸನ ವನೆಂದೂ ಹೇಳುತ್ತಿರುವಾಗ ನೀವು ಪ್ರಾಪಂಚಿಕ ರಲ್ಲವೇ?
5
ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ.
6
ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು.
7
ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು.
8
ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು.
9
ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
10
ದೇವರು ನನಗೆ ಕೃಪೆಯನ್ನು ಕೊಟ್ಟ ಪ್ರಕಾರ ನಾನು ಪ್ರವೀಣಶಿಲ್ಪಿಯಂತೆ ಆಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ; ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು.
11
ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
12
ಈ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ಅಮೂಲ್ಯವಾದ ಕಲ್ಲುಗಳು ಕಟ್ಟಿಗೆ ಹುಲ್ಲು ಆಪು ಇವುಗಳಲಿ
13
ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು; ಯಾಕಂದರೆ ಆ ದಿನವು ಬೆಂಕಿ ಯೊಡನೆ ಪ್ರತ್ಯಕ್ಷವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು.
14
ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ದೊರೆಯುವದು;
15
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು. ಆದರೂ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಹಾಗಿರುವನು.
16
ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
17
ಯಾವನಾದರೂ ದೇವರ ಆಲಯವನ್ನು ಹೊಲೆಮಾಡಿದರೆ ದೇವರು ಅವನನ್ನು ನಾಶಮಾಡುವನು; ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
18
ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.
19
ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಯಾಕಂದರೆ--ಆತನು ಜ್ಞಾನಿ ಗಳನ್ನು ಅವರ ಸ್ವಂತತಂತ್ರದಲ್ಲಿಯೇ ಹಿಡು ಕೊಳ್ಳುತ್ತಾನೆಂತಲೂ
20
ಜ್ಞಾನಿಗಳ ಯೋಚನೆಗಳು ನಿಷ್ಪಲವಾದವುಗಳೆಂದೂ ಕರ್ತನು ತಿಳುಕೊಳ್ಳುತ್ತಾನೆ ಬರೆದದೆಯಲ್ಲಾ;
21
ಆದಕಾರಣ ಮನುಷ್ಯ ಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ. ಯಾಕಂದರೆ ಸಮಸ್ತವೂ ನಿಮ್ಮದು;
22
ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ ಲೋಕವಾಗಲಿ ಜೀವವಾಗಲಿ ಮರಣವಾಗಲಿ ಈಗಿನ ಸಂಗತಿ ಗಳಾಗಲಿ ಮುಂದಣ ಸಂಗತಿಗಳಾಗಲೀ ಸಮಸ್ತವೂ ನಿಮ್ಮವೇ;
23
ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು.