Bible Languages

Indian Language Bible Word Collections

Bible Versions

Books

Ezekiel Chapters

Ezekiel 41 Verses

Bible Versions

Books

Ezekiel Chapters

Ezekiel 41 Verses

1 ಆಮೇಲೆ ಅವನು ನನಐನುಐ ಪವಿತ್ರಸ್ಥಳಕ್ಕೆ ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿರುವ ಗೋಡೆಯನುಐ ಅವನು ಅಳತೆ ಮಾಡಿದನು. ಆ ಗೋಡೆಗಳು ಆರು ಮೊಳ ದಪ್ಪವಾಗಿದ್ದವು.
2 ಅದರ ಙಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಘದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲಬತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು.
3 ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಙಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನುಐ ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದಾಬರವು ಆರು ಮೊಳ ಅಗಲವಾಗಿತ್ತು.
4 ಆಮೇಲೆ ಆ ಪುರುಷನು ಕೋಣೆಯ ಉದ್ದವನುಐ ಅಳತೆ ಮಾಡಿದನು. ಅದು ಇಪ್ಪತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಾಗಿತ್ತು. ‘ಇದು ಮಹಾ ಪವಿತ್ರಸ್ಥಳ’ ಎಂದು ಅವನು ನನಗೆ ತಿಳಿಸಿದನು.
5 ಆಮೇಲೆ ಆ ಮನುಷ್ಯನು ಆಲಯದ ಗೋಡೆಯನುಐ ಅಳತೆ ಮಾಡಿದನು. ಅದು ಆರು ಮೊಳ ದಪ್ಪವಾಗಿತ್ತು. ಆಲಯದ ಸುತ್ತಲೂ ಕೋಣೆಗಳಿದ್ದವು. ಅವು ನಾಲ್ಕು ಮೊಳ ಅಗಲವಾಗಿದ್ದವು.
6 ಆ ಕೋಣೆಗಳು ಒಂದರ ಮೇಲೊಂದು ಮೂರು ಅಂತಸ್ತಿನಲ್ಲಿದ್ದವು. ಪ್ರತಿ ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು. ಆಲಯದ ಗೋಡೆಯು ಮೆಟ್ಟಿಲು ಮೆಟ್ಟಿಲುಗಳಾಗಿ ಕಟ್ಟಲ್ಪಟ್ಟಿತ್ತು. ಪಕ್ಕದ ಕೋಣೆಗಳು ಈ ಮೆಟ್ಟಿಲುಗಳ ಮೇಲೆ ಆಧಾರಗೊಂಡಿದ್ದವು. ಅವು ಆಲಯದ ಗೋಡೆಯನುಐ ಆಧಾರ ಮಾಡಿಕೊಂಡಿರಲಿಲ್ಲ.
7 ಪ್ರತಿ ಅಂತಸ್ತು ಅದರ ಕೆಳಗಿನ ಅಂತಸ್ತಿಗಿಂತ ಅಗಲವಾಗಿದ್ದವು. ಆಲಯದ ಸುತ್ತ ಇದ್ದ ಕೋಣೆಗಳ ಗೋಡೆಗಳು ಮೇಲಕ್ಕೆ ಹೋದಂತೆ ಕಿರಿದಾಗಿದ್ದವು. ಹೀಗೆ ಕೊನೆ ಅಂತಸ್ತಿನ ಕೋಣೆಗಳು ಕಳಗಣ ಕೋಣೆಗಳಿಗಿಂತ ಹೆಚ್ಚು ಅಗಲವಾಗಿದ್ದವು. ಮಧ್ಯ ಅಂತಸ್ತಿನ ಮೂಲಕ ಒಂದು ನಿಚ್ಚಣಿಕೆಯು ಕೆಳಗಿನ ಅಂತಸ್ತಿನಿಂದ ಕೊನೆಯ ಅಂತಸ್ತಿನವರೆಗೆ ಹೋಗಿತ್ತು.
8 ಆಲಯದ ಸುತ್ತಲೂ ಒಂದು ಜಗಲಿ ಇರುವದನುಐ ನಾನು ಕಂಡೆನು. ಇದು ಪಕ್ಕದ ಕೋಣೆಗಳಿಗೆ ಅಸ್ತಿವಾರವಾಗಿತ್ತು. ಇದು ಒಂದು ಅಳತೆ ಕೋಲಿನಷ್ಟು ಎತ್ತರವಾಗಿತ್ತು.
9 ಆ ಕೋಣೆಗಳ ಹೊರಗಣ ಗೋಡೆಯು ಐದು ಮೊಳ ದಪ್ಪವಾಗಿತ್ತು. ಆಲಯದ ಉದ್ದಕ್ಕೂ ಇದ್ದ ಆ ಕೋಣೆಗಳಿಗೂ
10 ಯಾಜಕರ ಕೋಣೆಗಳಿಗೂ ನಡುವೆ ಆಲಯದ ಸುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.
11 ಆ ಕೋಣೆಗಳ ಙಾಗಿಲುಗಳು ಜಗಲಿಯ ಕಡೆಗೆ ಮುಖಮಾಡಿದ್ದವು. ಅವಕ್ಕೆ ಒಂದು ಙಾಗಿಲು ಉತ್ತರದ ಕಡೆಯಿಂದಲೂ ಇನೊಐಂದು ಙಾಗಿಲು ದಕ್ಷಿಣದ ಕಡೆಯಿಂದಲೂ ಇದ್ದವು. ಆ ಎತ್ತರದ ಜಗಲಿಯು ಸುತ್ತಲೂ ಐದು ಮೊಳ ಅಗಲವಿತ್ತು.
12 ಆಲಯದ ಪಶ್ಚಿಮ ಭಾಗದ ಕಿರಿದಾದ ಸ್ಥಳದಲ್ಲಿ ಒಂದು ಕಟ್ಟಡವಿತ್ತು. ಇದು ಎಪ್ಪತ್ತು ಮೊಳ ಅಗಲವಾಗಿದ್ದು ತೊಂಭತ್ತು ಮೊಳ ಉದ್ದವಾಗಿತ್ತು. ಅದರ ಸುತ್ತಲಿನ ಗೋಡೆಯು ಐದು ಮೊಳ ದಪ್ಪವಾಗಿತ್ತು.
13 ನಂತರ ಅವನು ಆಲಯದ ಅಳತೆ ತೆಗೆದನು. ಆಲಯವು ನೂರು ಮೊಳ ಉದ್ದವಾಗಿತ್ತು. ನಿಯಮಿತದ ಸ್ಥಳ, ಅದರ ಕಟ್ಟಡ ಮತ್ತು ಗೋಡೆಯ ಸಹಿತ ನೂರು ಮೊಳ ಉದ್ದವಾಗಿತ್ತು.
14 ಪೂರ್ವದಿಕ್ಕಿನಲ್ಲಿದ್ದ ನಿಯಮಿತದ ಸ್ಥಳವೂ ನೂರು ಮೊಳ ಉದ್ದವಿತ್ತು.
15 ಆಲಯದ ಹಿಂಭಾಗದಲ್ಲಿದ್ದ ನಿಯಮಿತದ ಸ್ಥಳದಲ್ಲಿ ಕಟ್ಟಿದ್ದ ಕಟ್ಟಡದ ಉದ್ದವನುಐ ಅವನು ಲೆಕ್ಕ ಮಾಡಿದನು. ಅದು ಗೋಡೆಯಿಂದ ಗೋಡೆಗೆ ನೂರು ಮೊಳವಿತ್ತು. ಪವಿತ್ರಸ್ಥಳ, ಮಹಾ ಪವಿತ್ರಸ್ಥಳ ಮತ್ತು ಒಳಗಿನ ಪ್ರಾಕಾರಕ್ಕೆ ಮುಖಮಾಡಿದ್ದ ಕೈಸಾಲೆಯ
16 ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಙಾಗಿಲುಗಳಿಗೆ ಮರದ ಹೊದಿಕೆಯಿತ್ತು. ದಾಬರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.
17 ಙಾಗಿಲಿನ ಮೇಲೆಯೂ ಒಳಗಿನ ಮತ್ತು ಹೊರಗಿನ ಕೋಣೆಗಳ ಗೋಡೆಗಳಲ್ಲಿ
18 ಕೆರೂಬಿದೂತರ ಮತ್ತು ಖರ್ಜೂರ ವೃಕ್ಷಗಳ ಚಿತ್ರ ಬಿಡಿಸಲ್ಪಟ್ಟಿತ್ತು. ಎರಡು ಕೆರೂಬಿದೂತರ ನಡುವೆ ಒಂದು ಖರ್ಜೂರ ವೃಕ್ಷವಿತ್ತು. ಪ್ರತಿ ಕೆರೂಬಿದೂತರಿಗೆ ಎರಡು ಮುಖಗಳಿದ್ದವು.
19 ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನುಐ ದಿಟ್ಟಿಸುತ್ತಿತ್ತು. ಇನೊಐಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನುಐ ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು.
20 ಪವಿತ್ರಸ್ಥಳದ ಗೋಡೆಗಳಲ್ಲಿ ನೆಲದಿಂದ ಙಾಗಿಲವರೆಗೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಕೆತ್ತನೆ ಕೆಲಸವನುಐ ಮಾಡಿದ್ದರು.
21 ಪವಿತ್ರಸ್ಥಳದ ಇಕ್ಕೆಡೆಗಳಲ್ಲಿದ್ದ ಗೋಡೆಗಳು ಚೌಕವಾಗಿದ್ದವು. ಮಹಾ ಪವಿತ್ರಸ್ಥಳದೆದುರು ಮರದಿಂದ ತಯಾರಿಸಿದ ವೇದಿಕೆಯಂತೆ ಕಾಣುತ್ತಿದ್ದ
22 ಒಂದು ವಸ್ತು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದವಿತ್ತು. ಅದರ ಮೂಲೆಗಳು, ಅದರ ಚೌಕಟ್ಟು, ಮತ್ತು ಘದಿಗಳೆಲ್ಲಾ ಮರದಿಂದ ಮಾಡಿದ್ದವುಗಳಾಗಿದ್ದವು. “ಈ ಮೇಜು ಯೆಹೋವನ ಸನಿಐಧಾನದಲ್ಲಿದೆ” ಎಂದು ಆ ಮನುಷ್ಯನು ನನಗೆ ಹೇಳಿದನು.
23 ಪವಿತ್ರಸ್ಥಳ ಮತ್ತು ಮಹಾ ಪವಿತ್ರಸ್ಥಳಗಳಿಗೆ ಎರಡೆರಡು ಙಾಗಿಲುಗಳಿದ್ದವು.
24 ಒಂದೊಂದು ಙಾಗಿಲಿಗೆ ಎರಡೆರಡು ಚಿಕ್ಕ ಙಾಗಿಲುಗಳು ಅಂದರೆ ಎರಡೆರಡು ಮಡಚುವ ಙಾಗಿಲುಗಳಿದ್ದವು.
25 ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನುಐ ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು.
26 ಇದಕ್ಕೆ ತೆರೆಯಲಾಗದ ಕಿಟಕಿಗಳಿದ್ದವು. ಇದರ ಗೋಡೆಗಳಲ್ಲಿಯೂ ಗೋಡೆಯ ಮೇಲಿದ್ದ ಸೂರು ಮತ್ತು ಆಲಯದ ಸುತ್ತಲಿದ್ದ ಕೋಣೆಯ ಗೋಡೆಗಳಲ್ಲಿಯೂ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.

Ezekiel 41:1 Kannada Language Bible Words basic statistical display

COMING SOON ...

×

Alert

×