1
|
ಇವು ಸೊಲೊಮೋನನ ಜ್ಞಾನೋಕ್ತಿಗಳು: ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದ ಮಗನಿಂದ ತಾಯಿಗೆ ದುಃಖ. |
2
|
ಅನ್ಯಾಯದ ಹಣವು ನಿಷ್ಪ್ರಯೋಜಕವಾಗಿದೆ. ನೀತಿಯ ಜೀವಿತವು ಮರಣದಿಂದ ರಕ್ಷಿಸಬಲ್ಲದು. |
3
|
ನೀತಿವಂತರು ಹಸಿವೆಯಿಂದಿರಲು ಯೆಹೋವನು ಬಿಡುವುದಿಲ್ಲ. ದುಷ್ಟರ ಆಸೆಯನ್ನಾದರೊ ಆತನು ಭಂಗಪಡಿಸುತ್ತಾನೆ. |
4
|
ಸೋಮಾರಿಯು ಬಡವನಾಗಿರುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವನು ಐಶ್ವರ್ಯವಂತನಾಗುತ್ತಾನೆ. |
5
|
ಬುದ್ಧಿವಂತನು ತಕ್ಕಕಾಲದಲ್ಲಿ ಬೆಳೆಯನ್ನು ಕೊಯ್ಯುತ್ತಾನೆ. ಸುಗ್ಗೀಕಾಲದಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು. |
6
|
ಒಳ್ಳೆಯವನನ್ನು ಆಶೀರ್ವದಿಸುವಂತೆ ಜನರು ದೇವರನ್ನು ಪ್ರಾರ್ಥಿಸುವರು. ದುಷ್ಟನ ಮಾತುಗಳಲ್ಲಾದರೊ ಕುತಂತ್ರವೇ ಅಡಗಿಕೊಂಡಿದೆ. |
7
|
ನೀತಿವಂತರ ನೆನಪು ಆಶೀರ್ವಾದದಾಯಕ. ಕೆಡುಕರಾದರೊ ಬಹುಬೇಗನೆ ಮರೆಯಲ್ಪಡುವರು. |
8
|
ಜ್ಞಾನಿಯು ಆಜ್ಞೆಗಳಿಗೆ ವಿಧೇಯನಾಗುತ್ತಾನೆ. ಮೂಢನಾದರೊ ವಾದಮಾಡಿ ತನಗೇ ತೊಂದರೆ ತಂದುಕೊಳ್ಳುತ್ತಾನೆ. |
9
|
ಒಳ್ಳೆಯವನೂ ಯಥಾರ್ಥನೂ ಆದ ಮನುಷ್ಯನು ಕ್ಷೇಮವಾಗಿರುವನು. ಮೋಸಮಾಡುವ ಕುಟಿಲ ಮನುಷ್ಯನಾದರೊ ಸಿಕ್ಕಿಕೊಳ್ಳುವನು. |
10
|
ಸತ್ಯವನ್ನು ಅಡಗಿಸಿಕೊಳ್ಳುವವನು ತೊಂದರೆಯನ್ನು ಉಂಟುಮಾಡುವನು. ಧೈರ್ಯದಿಂದ ಮಾತಾಡುವವನು ಸಮಾಧಾನಕರನು. |
11
|
ಒಳ್ಳೆಯವನ ಮಾತುಗಳು ನೀರಿನ ಬುಗ್ಗೆಯಂತೆ ಜೀವದಾಯಕ. ಕೆಡುಕನ ಮಾತುಗಳಲ್ಲಿ ಕೆಟ್ಟದ್ದೇ ಅಡಗಿಕೊಂಡಿರುತ್ತದೆ. |
12
|
ದ್ವೇಷವು ವಾದವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿಯು ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ. |
13
|
ಬುದ್ಧಿವಂತನು ವಿವೇಕದಿಂದ ಮಾತಾಡುತ್ತಾನೆ. ಆದರೆ ಬುದ್ಧಿಹೀನನಿಗೆ ಹೊಡೆತ ಬೀಳುವುದು. |
14
|
ಜ್ಞಾನಿಗಳು ಮೌನವಾಗಿದ್ದು ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ಮೂಢರಾದರೊ ಮಾತಾಡಿ ತಮಗೇ ತೊಂದರೆಯನ್ನು ತಂದುಕೊಳ್ಳುತ್ತಾರೆ. |
15
|
ಐಶ್ವರ್ಯವು ಸಾಹುಕಾರನನ್ನು ಕಾಪಾಡುತ್ತದೆ. ಬಡತನವಾದರೊ ಬಡವನನ್ನು ನಾಶಗೊಳಿಸುತ್ತದೆ. |
16
|
ಒಳ್ಳೆಯವರಿಗೆ ಪ್ರತಿಫಲವಾಗಿ ಜೀವ ದೊರೆಯುವುದು. ಕೆಡುಕರಿಗೆ ದಂಡನೆಯೇ ಸಂಬಳ. |
17
|
ಶಿಸ್ತನ್ನು ಸ್ವೀಕರಿಸಿಕೊಳ್ಳುವವನು ಜೀವಮಾರ್ಗವನ್ನು ತೋರಿಸುತ್ತಾನೆ. ತಿದ್ದುಪಡಿಯನ್ನು ಅಲಕ್ಷಿಸುವವನು ಇತರರನ್ನು ದಾರಿ ತಪ್ಪಿಸುತ್ತಾನೆ. |
18
|
ದ್ವೇಷವನ್ನು ಮರೆಮಾಡಲು ಒಬ್ಬನು ಸುಳ್ಳು ಹೇಳಬೇಕಾಗಬಹುದು. ಆದರೆ ಹರಟೆಗಾರನು ನಿಜವಾಗಿಯೂ ಮೂಢನಾಗಿದ್ದಾನೆ. |
19
|
ಅತಿಯಾಗಿ ಮಾತಾಡುವವನು ತನ್ನನ್ನೇ ತೊಂದರೆಗೆ ಸಿಕ್ಕಿಸಿಕೊಳ್ಳುತ್ತಾನೆ. ವಿವೇಕಿಯು ಮೌನವಾಗಿರಲು ಕಲಿತುಕೊಳ್ಳುತ್ತಾನೆ. |
20
|
ಒಳ್ಳೆಯವನ ಮಾತುಗಳು ಶುದ್ಧ ಬೆಳ್ಳಿಯಂತಿವೆ. ಕೆಡುಕನ ಆಲೋಚನೆಗಳಾದರೊ ಪ್ರಯೋಜನಕ್ಕೆ ಬಾರವು. |
21
|
ಒಳ್ಳೆಯವನ ಮಾತುಗಳು ಅನೇಕರಿಗೆ ಸಹಾಯಮಾಡುತ್ತವೆ. ಮೂಢನ ಮೂಢತನವಾದರೊ ಅನೇಕರನ್ನು ಕೊಲ್ಲುವುದು. |
22
|
ಐಶ್ವರ್ಯವು ಯೆಹೋವನ ಆಶೀರ್ವಾದವೇ. ಶ್ರಮದ ಕೆಲಸವು ಅದನ್ನು ಹೆಚ್ಚಿಸಲಾರದು. |
23
|
ಅವಿವೇಕಿಯು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸುತ್ತಾನೆ. ವಿವೇಕಿಯು ಜ್ಞಾನದಲ್ಲಿ ಸಂತೋಷಿಸುತ್ತಾನೆ. |
24
|
ಕೆಡುಕನಿಗೆ ಅವನು ಭಯಪಡುವುದೇ ಸಂಭವಿಸುವುದು. ಒಳ್ಳೆಯವನಾದರೊ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳುವನು. |
25
|
ಆಪತ್ತು ಬಂದಾಗ ದುಷ್ಟನು ನಾಶವಾಗುವನು. ಆದರೆ ಒಳ್ಳೆಯವರು ಸದಾಕಾಲ ಬಲವಾಗಿ ನಿಲ್ಲುವರು. |
26
|
ಸೋಮಾರಿಗೆ ಯಾವ ಕೆಲಸವನ್ನೂ ಒಪ್ಪಿಸಬೇಡಿ. ಅವನು ಬಾಯಿಗೆ ಹುಳಿಯಂತೆಯೂ ಕಣ್ಣುಗಳಿಗೆ ಹೊಗೆಯಂತೆಯೂ ನಿಮ್ಮನ್ನು ಬೇಸರಗೊಳಿಸುವನು. |
27
|
ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದರೆ ಬಹುಕಾಲ ಬದುಕುವಿರಿ. ಆದರೆ ಕೆಡುಕರು ತಮ್ಮ ಜೀವಮಾನದ ವರ್ಷಗಳನ್ನು ಕಳೆದುಕೊಳ್ಳುವರು. |
28
|
ಒಳ್ಳೆಯವರ ನಿರೀಕ್ಷೆಗೆ ಸಂತೋಷವೇ ಫಲಿತಾಂಶ. ಕೆಟ್ಟವರ ನಿರೀಕ್ಷೆಗೆ ಶೂನ್ಯವೇ ಫಲಿತಾಂಶ. |
29
|
ಯೆಹೋವನು ಒಳ್ಳೆಯವರನ್ನು ಕೋಟೆಯಂತೆ ಕಾಪಾಡುತ್ತಾನೆ; ಕೆಡುಕರನ್ನಾದರೊ ನಾಶಮಾಡುತ್ತಾನೆ. |
30
|
ಒಳ್ಳೆಯವರು ಯಾವಾಗಲೂ ಕ್ಷೇಮವಾಗಿರುವರು. ಆದರೆ ಕೆಡುಕರನ್ನು ದೇಶದಿಂದ ಬಲವಂತವಾಗಿ ಹೊರಗಟ್ಟಲಾಗುವುದು. |
31
|
ಒಳ್ಳೆಯವರು ಯಾವಾಗಲೂ ಜ್ಞಾನದ ಮಾತುಗಳನ್ನು ಹೇಳುತ್ತಾರೆ; ಕೆಡುಕರ ಮಾತನ್ನು ಜನರು ಕೇಳುವುದಿಲ್ಲ. |
32
|
ಒಳ್ಳೆಯವನು ಯೋಗ್ಯವಾದವುಗಳನ್ನು ಹೇಳುವನು. ಕೆಡುಕನು ಸುಳ್ಳನ್ನು ಮಾತ್ರ ಹೇಳುತ್ತಾನೆ. |
Proverbs 10:28 Kannada Language Bible Words basic statistical display
COMING SOON ...