ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈ ಹಿಡಿದು ನಡಿಸುವವರನ್ನು ಹುಡುಕುತ್ತಾ ತಿರುಗಾಡಿದನು.
ನ್ಯಾಯಪ್ರಮಾಣ ಮತ್ತು ಪ್ರವಾದಿಗಳಗ್ರಂಥವು ಪಾರಾಯಣವಾದ ಮೇಲೆ ಸಭಾಮಂದಿರದ ಅಧಿಕಾರಿ ಗಳು--ಜನರೇ, ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ ಎಂದು ಅವರಿಗೆ ಹೇಳಿ ಕಳುಹಿಸಿದರು.
ತರುವಾಯ ಆತನು ಅವನನ್ನು ತೆಗೆದು ಹಾಕಿ ದಾವೀದನು ಅವರ ಅರಸನಾಗಿರುವಂತೆ ಎಬ್ಬಿಸಿದನು; ಇದಲ್ಲದೆ ಆತನು ಅವನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನಾನು ಇಷಯನ ಮಗನಾದ ದಾವೀದನನ್ನು ಕಂಡುಕೊಂಡೆನು, ಅವನು ನನ್ನ ಹೃದಯವು ಒಪ್ಪುವ ಮನುಷ್ಯನು ಮತ್ತು ಅವನು ನನ್ನ ಚಿ
ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರಿವಾಗ ಜನರಿಗೆ--ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ; ಆದರೆ ಇಗೋ, ನನ್ನ ಹಿಂದೆ ಒಬ್ಬಾತನು ಬರುತ್ತಾನೆ, ಆತನ ಪಾದದ ಕೆರಗಳನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.
ಯೆರೂ ಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿ ಗಳೂ ಆತನನ್ನಾಗಲೀ ಪ್ರತಿ ಸಬ್ಬತ್ದಿನದಲ್ಲಿ ಪಾರಾ ಯಣವಾಗುವ ಪ್ರವಾದಿಗಳ ವಾಕ್ಯಗಳನ್ನಾಗಲೀ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ವಾಕ್ಯಗಳನ್ನೇ ನೆರವೇರಿಸಿದರು.
ಏನಂ ದರೆ--ನೀನು ನನ್ನ ಮಗನು, ಈ ದಿನ ನಾನು ನಿನ್ನನ್ನು ಪಡೆದಿದ್ದೇನೆ ಎಂದು ಎರಡನೆಯ ಕೀರ್ತನೆಯಲ್ಲಿ ಸಹ ಬರೆದಿರುವ ಪ್ರಕಾರ ಅವರ ಮಕ್ಕಳಾದ ನಮಗೆ ದೇವರು ಯೇಸುವನ್ನು ತಿರಿಗಿ ಎಬ್ಬಿಸುವದರ ಮೂಲಕ ಅದನ್ನು ನೆರವೇರಿಸಿದ್ದಾನೆ ಎಂಬದೇ.
ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರ ತಕ್ಕವನಲ್ಲವೆಂಬದರ ವಿಷಯದಲ್ಲಿ ಆತನು ಹೇಳಿರು ವದೇನಂದರೆ--ದಾವೀದನ ಖಂಡಿತವಾದ ಕರುಣೆ ಗಳನ್ನು ನಾನು ನಿಮಗೆ ಕೊಡುತ್ತೇನೆ ಎಂಬದು.
ಮೋಶೆಯ ಯಾವ ನ್ಯಾಯಪ್ರಮಾಣ ದಿಂದ ಯಾವವುಗಳಲ್ಲಿ ನೀವು ನೀತಿವಂತರೆಂಬ ನಿರ್ಣಯವನ್ನು ಹೊಂದಲಾರದೆ ಹೋಗಿದ್ದಿರೋ ಅವೆಲ್ಲವುಗಳಿಂದ ನಂಬುವವರೆಲ್ಲರೂ ಆತನ ಮೂಲಕ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದಾರೆಂದು ನಿಮಗೆ ತಿಳಿದಿರಲಿ.
ಅದೇನಂದರೆ--ಇಗೋ, ತಿರ ಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿ ಹೋಗಿರಿ, ನಿಮ್ಮ ದಿನಗಳಲ್ಲಿ ನಾನು ಒಂದು ಕಾರ್ಯ ವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಎಷ್ಟು ಮಾತ್ರಕ್ಕೂ ನಂಬುವದಿಲ್ಲ ಎಂಬದೇ.
ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿಯೂ ಯೆಹೂದ್ಯ ಮತಾವಲಂಬಿ ಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾ ಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪೆಯಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
ಯಾಕಂ ದರೆ--ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಣೆಗೆ ಕಾರಣವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ಹೇಳಿದ ಹಾಗೆ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ.
ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.