1
|
ರಾಹೇಲಳು ತಾನು ಯಾಕೋಬನಿಗೆ ಇನ್ನು ಹೆರುವದಿಲ್ಲವೆಂದು ತಿಳಿದಾಗ ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೇಕಿಚ್ಚು ಪಟ್ಟು ಯಾಕೋಬನಿಗೆ--ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ ಅಂದಳು. |
2
|
ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿ ಕೊಂಡು--ನಿನಗೆ ಗರ್ಭ ಫಲವನ್ನು ಕೊಡದ ದೇವರ ಸ್ಥಾನದಲ್ಲಿ ನಾನಿದ್ದೇನೋ ಅಂದನು. |
3
|
ಅದಕ್ಕೆ ಆಕೆಯು--ಇಗೋ, ನನ್ನ ದಾಸಿಯಾದ ಬಿಲ್ಹಳು ಇದ್ದಾಳೆ. ಅವಳ ಬಳಿಗೆ ಹೋಗು; ಅವಳು ನನ್ನ ಮೊಣಕಾಲಿನ ಮೇಲೆ ಹೆರುವಳು, ಅವಳಿಂದ ನನಗೆ ಮಕ್ಕಳಾಗುವರು ಅಂದಳು. |
4
|
ಹೀಗೆ ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳ ಬಳಿಗೆ ಹೋದನು. |
5
|
ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು. |
6
|
ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು. |
7
|
ರಾಹೇಲಳ ದಾಸಿಯಾದ ಬಿಲ್ಹಳು ತಿರಿಗಿ ಗರ್ಭಿಣಿ ಯಾಗಿ ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. |
8
|
ಆಗ ರಾಹೇಲಳು--ಅಧಿಕವಾದ ಹೋರಾಟ ಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು. |
9
|
ಲೇಯಳು ತಾನು ಹೆರುವದು ನಿಂತಿತೆಂದು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ತಕ್ಕೊಂಡು ಯಾಕೋಬ ನಿಗೆ ಹೆಂಡತಿಯಾಗಿ ಕೊಟ್ಟಳು. |
10
|
ಲೇಯಳ ದಾಸಿ ಯಾದ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು. |
11
|
ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು. |
12
|
ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. |
13
|
ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು. |
14
|
ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆ--ನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು. |
15
|
ಅದಕ್ಕೆ ಆಕೆಯು--ನೀನು ನನ್ನ ಗಂಡನನ್ನು ತಕ್ಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯಗಳನ್ನು ಸಹ ತಕ್ಕೊಳ್ಳುವಿಯೋ ಅಂದಾಗ ರಾಹೇಲಳು--ಆದದರಿಂದ ನಿನ್ನ ಮಗನು ತಂದ ದುದಾಯಗಳಿ ಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ ಅಂದಳು. |
16
|
ಯಾಕೋಬನು ಸಾಯಂಕಾಲ ದಲ್ಲಿ ಹೊಲದಿಂದ ಬಂದಾಗ ಲೇಯಳು ಅವನೆದುರಿಗೆ ಹೊರಟುಹೋಗಿ--ನೀನು ನನ್ನ ಬಳಿಗೆ ಬರಬೇಕು; ನನ್ನ ಮಗನ ದುದಾಯಗಳ ಬಾಡಿಗೆಯಿಂದ ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ ಅಂದಳು. ಆದದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು. |
17
|
ಆಗ ದೇವರು ಲೇಯಳನ್ನು ಆಲೈಸಿದ್ದರಿಂದ ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು. |
18
|
ಆಗ ಲೇಯಳು--ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟದ್ದರಿಂದ ದೇವರು ನನಗೆ ಕೂಲಿಯನ್ನು ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಇಸ್ಸಾಕಾರ ಎಂದು ಹೆಸರಿಟ್ಟಳು. |
19
|
ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು; |
20
|
ಲೇಯಳು--ದೇವರು ನನಗೆ ಒಳ್ಳೇ ಬಳುವಳಿಯನ್ನು ಕೊಟ್ಟಿದ್ದಾನೆ; ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ ನನ್ನ ಗಂಡನು ನನ್ನ ಸಂಗಡ ವಾಸಿಸುವನು ಎಂದು ಹೇಳಿ ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು. |
21
|
ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು ಆಕೆಗೆ ದೀನಾ ಎಂದು ಹೆಸರಿಟ್ಟಳು. |
22
|
ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿ ಕೊಂಡನು. ದೇವರು ಆಕೆಯನ್ನು ಆಲೈಸಿ ಆಕೆಯ ಗರ್ಭವನ್ನು ತೆರೆದನು. |
23
|
ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾನೆ ಅಂದಳು. |
24
|
ಆಕೆಯು--ಕರ್ತನು ನನಗೆ ಮತ್ತೊಬ್ಬ ಮಗನನ್ನು ಕೂಡಿಸುವನೆಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು. |
25
|
ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ--ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವ ಹಾಗೆ ನನ್ನನ್ನು ಕಳುಹಿಸಿ ಕೊಡು. |
26
|
ನಾನು ಯಾರಿಗೊಸ್ಕರ ನಿನಗೆ ಸೇವೆ ಮಾಡಿದೆನೋ ಆ ನನ್ನ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀ ಅಂದನು. |
27
|
ಲಾಬಾನನು ಅವನಿಗೆ--ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವನಾಗಿದ್ದರೆ ನನ್ನ ಬಳಿ ಯಲ್ಲಿಯೇ ಇರು. ಕರ್ತನು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾನೆಂದು ನಾನು ಅನುಭವದಿಂದ ಕಲಿತುಕೊಂಡಿದ್ದೇನೆ. |
28
|
ನೀನು ನಿನ್ನ ಸಂಬಳವನ್ನು ನಿರ್ಣಯಿಸು; ಆಗ ಅದನ್ನು ನಾನು ನಿನಗೆ ಕೊಡುವೆನು ಅಂದನು. |
29
|
ಅದಕ್ಕೆ ಯಾಕೋಬನು ಅವನಿಗೆ--ನಾನು ನಿನಗೆ ಮಾಡಿದ ಸೇವೆಯನ್ನೂ ನಿನ್ನ ಮಂದೆಯು ನನ್ನ ಬಳಿಯಲ್ಲಿ ಹೇಗೆ ಇತ್ತೆಂಬದ್ದನ್ನೂ ನೀನು ಬಲ್ಲೆ. |
30
|
ನಾನು ಬರುವದಿಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ; ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಕರ್ತನು ನಿನ್ನನ್ನು ಆಶೀರ್ವದಿಸಿದ್ದಾನೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ ಅಂದನು. |
31
|
ಅದಕ್ಕೆ ಲಾಬಾನನು--ನಿನಗೆ ನಾನು ಏನು ಕೊಡಲಿ ಅಂದಾಗ ಯಾಕೋಬನು--ಏನೂ ಕೊಡ ಬೇಡ, ಇದು ಮಾತ್ರ ನೀನು ನನಗಾಗಿ ಮಾಡಿದರೆ ನಾನು ತಿರಿಗಿ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು; |
32
|
ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದುಹೋಗುವೆನು; ಅದ ರಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಕುರಿಗಳಲ್ಲಿ ಕಂದು ಬಣ್ಣದವುಗಳನ್ನೆಲ್ಲಾ ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ. |
33
|
ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ ನನ್ನ ನೀತಿಯು ನನಗಾಗಿ ಉತ್ತರ ಕೊಡುವದು. ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳೂ ನನ್ನ ಬಳಿಯಲ್ಲಿದ್ದರೆ ಅವು ಕದ್ದವುಗಳಾಗಿ ಎಣಿಕೆಯಾಗಿರಲಿ ಅಂದನು. |
34
|
ಲಾಬಾನನು--ಇಗೋ, ನೀನು ಹೇಳಿದಂತೆಯೇ ಆಗಲಿ ಅಂದನು. |
35
|
ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ ಮಚ್ಚೆ ಇದ್ದವುಗಳನ್ನೂ ಮೇಕೆ ಗಳಲ್ಲಿ ಚುಕ್ಕೆ ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ ಕುರಿ ಗಳಲ್ಲಿ ಕಂದುಬಣ್ಣವಿದ್ದವುಗಳನ್ನೂ ವಿಂಗಡಿಸಿ ತನ್ನ ಕುಮಾರರ ಕೈಗೆ ಕೊಟ್ಟನು. |
36
|
ತನಗೂ ಯಾಕೋಬ ನಿಗೂ ಮಧ್ಯದಲ್ಲಿ ಮೂರು ದಿನದ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಗಳನ್ನು ಮೇಯಿಸಿದನು. |
37
|
ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿಕೋಲುಗಳನ್ನು ತೆಗೆದುಕೊಂಡು ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು ಅವುಗಳ ಲ್ಲಿರುವ ಬಿಳೀ ಬಣ್ಣವು ಕಾಣಿಸುವಂತೆ ಮಾಡಿ |
38
|
ಮಂದೆಗಳು ನೀರು ಕುಡಿಯುವದಕ್ಕೆ ಬಂದ ಸಮಯವೇ ಅವುಗಳಿಗೆ ಸಂಗಮಕಾಲವಾಗಿತ್ತು. ಅವು ಕೋಲುಗಳನ್ನು ನೋಡುತ್ತಾ ಸಂಗಮಮಾಡಿ ದ್ದರಿಂದ |
39
|
ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು. |
40
|
ಯಾಕೋಬನು ಕುರಿಗಳನ್ನು ಬೇರೆ ಮಾಡಿ ಲಾಬಾನನ ಮಂದೆಯಲ್ಲಿರುವ ರೇಖೆಗಳು ಳ್ಳವುಗಳೆದುರಾಗಿಯೂ ಕಂದು ಬಣ್ಣ ಉಳ್ಳವು ಗಳಿಗೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ ಅವುಗಳನ್ನು ಬೇರೆ ಇಟ್ಟುಕೊಂಡನು. |
41
|
ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮ ಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ದೋಣಿ ಗಳಲ್ಲಿ ಕೋಲುಗಳನ್ನಿಟ್ಟನು. |
42
|
ಆದರೆ ಕುರಿಗಳು ಬಲಹೀನವಾಗಿದ್ದಾಗ ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನ ವಾದವುಗಳು ಲಾಬಾನನಿಗೂ ಬಲವಾದವುಗಳು ಯಾಕೋಬನಿಗೂ ಆದವು. |
43
|
ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದದ್ದರಿಂದ ಬಹು ಕುರಿಗಳೂ ದಾಸದಾಸಿ ಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು. |
Genesis 30:21 Kannada Language Bible Words basic statistical display
COMING SOON ...