1
|
ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ. |
2
|
ಸ್ತೋತ್ರದಿಂದ ಆತನ ಸನ್ನಿಧಿಯ ಮುಂದೆ ಬಂದು ಕೀರ್ತನೆಗಳಿಂದ ಆತನಿಗೆ ಆನಂದದ ಧ್ವನಿಮಾಡೋಣ. |
3
|
ಕರ್ತನು ದೊಡ್ಡ ದೇವರೂ ಎಲ್ಲಾ ದೇವರುಗಳ ಮೇಲೆ ದೊಡ್ಡ ಅರಸನೂ ಆಗಿದ್ದಾನೆ. |
4
|
ಆತನ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಅವೆ; ಬೆಟ್ಟಗಳ ಬಲವು ಆತನದೇ. |
5
|
ಸಮುದ್ರವು ಆತನದು; ಆತನು ಅದನ್ನು ಮಾಡಿದನು; ಆತನ ಕೈಗಳು ಒಣಭೂಮಿಯನ್ನು ರೂಪಿಸಿದವು. |
6
|
ಬನ್ನಿರಿ, ನಮ್ಮನ್ನು ಉಂಟುಮಾಡಿದ ಕರ್ತನ ಮುಂದೆ ಮೊಣಕಾಲು ಊರೋಣ ಆತನಿಗೆ ಎರಗಿ ಆರಾಧಿಸೋಣ. |
7
|
ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ |
8
|
ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ. |
9
|
ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು. |
10
|
ನಾಲ್ವತ್ತು ವರುಷ ಆ ಸಂತತಿಗೆ ಬೇಸರಗೊಂಡು--ಇವರು ತಮ್ಮ ಹೃದಯ ದಲ್ಲಿ ತಪ್ಪಿ ಹೋಗುವ ಜನರಾಗಿದ್ದಾರೆ; ನನ್ನ ಮಾರ್ಗ ಗಳನ್ನು ಅವರು ಅರಿಯರು ಅಂದೆನು. |
11
|
ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು. |
Psalms 95:1 Kannada Language Bible Words basic statistical display
COMING SOON ...