1
|
ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು. |
2
|
ಓ ಕರ್ತನೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ ಮೋಸದ ನಾಲಿಗೆಯಿಂದಲೂ ಬಿಡಿಸು. |
3
|
ಸುಳ್ಳಿನ ನಾಲಿಗೆಯೇ, ದೇವರು ನಿನಗೇನು ಮಾಡ ಬೇಕು? ಆತನು ನಿನಗೇನು ಕೊಡಬೇಕು? |
4
|
ಪರಾ ಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳು ನಿನಗೆ ಕೊಡಲ್ಪಡಲಿ. |
5
|
ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ! |
6
|
ನನ್ನ ಪ್ರಾಣವು ಸಮಾಧಾನವನ್ನು ಹಗೆ ಮಾಡುವವರ ಸಂಗಡ ವಾಸಮಾಡಿ ಸಾಕಾಯಿತು. |
7
|
ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ. |
Psalms 120:1 Kannada Language Bible Words basic statistical display
COMING SOON ...