1
|
ಓ ಪರಾಕ್ರಮಶಾಲಿಗಳೇ, ಕರ್ತನಿಗೆ ಘನವನ್ನೂ ಬಲವನ್ನೂ ಸಲ್ಲಿಸಿರಿ; |
2
|
ಕರ್ತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕರ್ತನಿಗೆ ಪರಿಶುದ್ಧತ್ವದ ಸೌಂದರ್ಯದಲ್ಲಿ ಆರಾಧಿಸಿರಿ. |
3
|
ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ. |
4
|
ಕರ್ತನ ಧನ್ವಿಯು ಶಕ್ತಿ ಯುಳ್ಳದ್ದು; ಪ್ರಭೆಯುಳ್ಳದ್ದು. |
5
|
ಕರ್ತನ ಸ್ವರವು ದೇವ ದಾರುಗಳನ್ನು ಮುರಿಯುತ್ತದೆ; ಹೌದು, ಕರ್ತನು ಲೆಬನೋನಿನ ದೇವದಾರುಗಳನ್ನು ಮುರಿಯುತ್ತಾನೆ. |
6
|
ಅವುಗಳನ್ನು ಕರುವಿನ ಹಾಗೆಯೂ ಲೆಬನೋನನ್ನೂ ಶಿರಿಯೋನನ್ನೂ ಎಳೇಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾನೆ. |
7
|
ಕರ್ತನ ಸ್ವರವು ಅಗ್ನಿ ಜ್ವಾಲೆಗಳನ್ನು ಭೇದಿಸುತ್ತದೆ. |
8
|
ಕರ್ತನ ಸ್ವರವು ಅರಣ್ಯ ವನ್ನು ಕದಲಿಸುತ್ತದೆ; ಕರ್ತನು ಕಾದೇಶ್ ಅರಣ್ಯವನ್ನು ಕದಲಿಸುತ್ತಾನೆ. |
9
|
ಕರ್ತನ ಸ್ವರವು ಜಿಂಕೆಗಳನ್ನು ಈಯ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ಆತನ ಮಂದಿರದಲ್ಲಿ ಪ್ರತಿಯೊಬ್ಬನು ಆತನ ಮಹಿಮೆಯ ವಿಷಯವಾಗಿ ಮಾತನಾಡುತ್ತಾನೆ. |
10
|
ಕರ್ತನು ಪ್ರಳಯದ ಮೇಲೆ ಕೂತುಕೊಳ್ಳುತ್ತಾನೆ; ಹೌದು, ಯುಗಯುಗಕ್ಕೂ ಕರ್ತನು ಅರಸನಾಗಿ ಕೂತು ಕೊಂಡಿದ್ದಾನೆ. |
11
|
ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು. |
Psalms 29:1 Kannada Language Bible Words basic statistical display
COMING SOON ...