1
|
ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು. |
2
|
ಕರ್ತನು ಯಾವನಿಗೆ ಅಪರಾಧ ವನ್ನು ಎಣಿಸುವದಿಲ್ಲವೋ, ಯಾವನ ಹೃದಯದಲ್ಲಿ ವಂಚನೆ ಇರುವದಿಲ್ಲವೋ, ಆ ಮನುಷ್ಯ ಧನ್ಯನು. |
3
|
ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದ ರಿಂದ ನನ್ನ ಎಲುಬುಗಳು ಸವೆದು ಹೋದವು. |
4
|
ರಾತ್ರಿ ಹಗಲು ನಿನ್ನ ಕೈ ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ಬರಗಾಲಕ್ಕೆ ನನ್ನ ಸಾರವು ತಿರುಗಿಕೊಂಡಿತು. ಸೆಲಾ. |
5
|
ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ. |
6
|
ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ. |
7
|
ನೀನು ನನ್ನ ಮರೆಯು; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀ; ಬಿಡುಗಡೆಯ ಹಾಡುಗಳಿಂದ ನನ್ನನ್ನು ಆವರಿಸಿ ಕೊಳ್ಳುತ್ತೀ ಸೆಲಾ. |
8
|
ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು. |
9
|
ಆದದರಿಂದ ವಿವೇಕವಿಲ್ಲದ ಕುದುರೆಯ ಹಾಗೆಯೂ ಹೇಸರ ಕತ್ತೆಯ ಹಾಗೆಯೂ ಇರಬೇಡಿರಿ; ಅವು ನಿನ್ನ ಸವಿಾಪಕ್ಕೆ ಬಾರದಹಾಗೆ, ಅವುಗಳು ಬಾರಿನಿಂದಲೂ ಕಡಿವಾಣ ದಿಂದಲೂ ಬಿಗಿಸಲ್ಪಡತಕ್ಕದ್ದು. |
10
|
ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಕರ್ತನಲ್ಲಿ ಭರವಸವಿಡುವವನನ್ನು ಕರುಣೆಯು ಸುತ್ತಿಕೊಳ್ಳು ವದು. |
11
|
ನೀತಿವಂತರೇ, ಕರ್ತನಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯಉಳ್ಳವರೇ, ಉತ್ಸಾಹ ಧ್ವನಿಮಾಡಿರಿ. |
Psalms 32:1 Kannada Language Bible Words basic statistical display
COMING SOON ...