1
|
ನೀವು ಕರ್ತನನ್ನು ಸ್ತುತಿಸಿರಿ. ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಬಲದ ಆಂತರಿಕ್ಷದಲ್ಲಿ ಆತನನ್ನು ಸ್ತುತಿಸಿರಿ. |
2
|
ಆತನ ಪರಾಕ್ರಮಗಳಿಗೋಸ್ಕರ ಆತನನ್ನು ಸ್ತುತಿಸಿರಿ; ಆತನ ಮಹಾ ಪ್ರಭಾವದ ಪ್ರಕಾರ ಆತನನ್ನು ಸ್ತುತಿಸಿರಿ. |
3
|
ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ. |
4
|
ದಮ್ಮಡಿ ಯಿಂದಲೂ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತ ನನ್ನು ಸ್ತುತಿಸಿರಿ. |
5
|
ಜಲ್ಲರಿಯ ದೊಡ್ಡ ಶಬ್ದದಿಂದ ಆತನನ್ನು ಸ್ತುತಿಸಿರಿ; ಉತ್ಸಾಹದ ತಾಳಗಳಿಂದ ಆತನನ್ನು ಸ್ತುತಿಸಿರಿ. |
6
|
ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ. |
Psalms 150:1 Kannada Language Bible Words basic statistical display
COMING SOON ...