1
|
ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ. |
2
|
ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ. |
3
|
ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ. |
4
|
ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ. |
5
|
ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು. |
Psalms 127:1 Kannada Language Bible Words basic statistical display
COMING SOON ...