1
|
ಕರ್ತನೇ, ನನ್ನ ಮಾತುಗಳಿಗೆ ಕಿವಿಗೊಡು, ನನ್ನ ಧ್ಯಾನವನ್ನು ಲಕ್ಷ್ಯಕ್ಕೆ ತಂದುಕೋ. |
2
|
ನನ್ನ ಅರಸನೇ, ನನ್ನ ದೇವರೇ, ನನ್ನ ಮೊರೆಯ ಶಬ್ದವನ್ನು ಆಲೈಸು; ನಿನ್ನನ್ನೇ ಪ್ರಾರ್ಥಿಸುತ್ತೇನೆ. |
3
|
ಓ ಕರ್ತನೇ, ಬೆಳಿಗ್ಗೆ ನನ್ನ ಸ್ವರವನ್ನು ಕೇಳುವಿ; ಹೊತ್ತಾರೆಯಲ್ಲಿ ನಿನಗೆ ಪ್ರಾರ್ಥಿಸಿ ಮೇಲಕ್ಕೆ ನೋಡುವೆನು. |
4
|
ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು. |
5
|
ನಿನ್ನ ದೃಷ್ಟಿಯಲ್ಲಿ ಮೂರ್ಖರು ನಿಂತುಕೊಳ್ಳುವದಿಲ್ಲ. ದುಷ್ಟ ಕೆಲಸ ಮಾಡುವವರೆಲ್ಲರನ್ನು ನೀನು ಹಗೆ ಮಾಡುತ್ತೀ. |
6
|
ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ. |
7
|
ನಾನಾದರೋ, ನಿನ್ನ ಕರುಣಾತಿಶಯದಿಂದ ನಿನ್ನ ಆಲಯಕ್ಕೆ ಬರುವೆನು; ನಿನಗೆ ಭಯಪಟ್ಟು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಆರಾಧಿಸುವೆನು. |
8
|
ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು. |
9
|
ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ. |
10
|
ಓ ದೇವರೇ, ಅವರನ್ನು ನಾಶಮಾಡು; ಅವರು ತಮ್ಮ ಸ್ವಂತ ಆಲೋಚನೆಗಳಿಂದ ಬಿದ್ದು ಹೋಗಲಿ; ಅವರ ಅಪಾರವಾದ ದ್ರೋಹಗಳ ನಿಮಿತ್ತ ಅವರನ್ನು ಹೊರಗೆ ಹಾಕು; ಯಾಕಂದರೆ ಅವರು ನಿನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾರೆ. |
11
|
ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ, ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ. |
12
|
ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳು |
Psalms 5:11 Kannada Language Bible Words basic statistical display
COMING SOON ...