1
|
ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ. |
2
|
ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ. |
3
|
ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ. |
4
|
ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು. |
5
|
ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ. |
6
|
ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು. |
7
|
ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ. |
8
|
ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು. |
9
|
ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು. |
10
|
ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು. |
11
|
ಓ ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು; |
12
|
ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು. |
13
|
ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು. |
14
|
ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು. |
15
|
ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು. |
16
|
ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ. |
17
|
ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು. |
18
|
ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು. |
19
|
ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ. |
20
|
ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ. |
21
|
ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ. |
22
|
ಓ ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು. |
Psalms 25:1 Kannada Language Bible Words basic statistical display
COMING SOON ...