ಉಪವಾಸ ಮತ್ತು ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿ ಯಿಂದ ಸ್ವಲ್ಪಕಾಲ ಆಗಲಿರಬಹುದೇ ಹೊರತು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ಸೈತಾನನು ನಿಮ್ಮನು ಶೋಧಿಸದಂತೆ ತಿರಿಗಿ ಕೂಡಿಕೊಳ್ಳಿರಿ.
ನಾನು ಇದ್ದಂತೆಯೇ ಎಲ್ಲರೂ ಇರ ಬೇಕೆಂದು ಇಚ್ಛಿಸುತ್ತೇನೆ. ಆದರೆ ಒಬ್ಬನು ಒಂದು ವಿಧದಲ್ಲಿ ಮತ್ತೊಬ್ಬನು ಇನ್ನೊಂದು ವಿಧದಲ್ಲಿ ಹೀಗೆ ಪ್ರತಿಯೊಬ್ಬನು ದೇವರಿಂದ ಅವನಿಗೆ ತಕ್ಕ ವರವನ್ನು ಹೊಂದಿದವನಾಗಿದ್ದಾನೆ.
ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು.
ಯಾಕಂದರೆ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ಶುದ್ಧನಾಗಿದ್ದಾನೆ; ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನಲ್ಲಿ ಶುದ್ಧಳಾಗಿದ್ದಾಳೆ. ಹಾಗಲ್ಲ ದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ಪವಿತ್ರರಾಗಿದ್ದಾರೆ.
ಸುನ್ನತಿ ಯಲ್ಲಿದ್ದು ಕರೆಯಲ್ಪಟ್ಟವನು ಯಾವನಾದರೂ ಇದ್ದಾನೋ? ಅವನು ಸುನ್ನತಿ ಇಲ್ಲದವನಂತಾಗ ಬಾರದು; ಸುನ್ನತಿ ಇಲ್ಲದೆ ಕರೆಯಲ್ಪಟ್ಟವನು ಯಾವ ನಾದರೂ ಇದ್ದಾನೋ? ಅವನು ಸುನ್ನತಿ ಮಾಡಿಸಿ ಕೊಳ್ಳಬಾರದು.
ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದಾಗ್ಯೂ ಅಂಥ ವರಿಗೆ ಶರೀರಸಂಬಂಧವಾಗಿ ಕಷ್ಟ ಸಂಭವಿಸುವದು; ಇದು ನಿಮಗೆ ಉಂಟಾಗಬಾರದೆಂದು ನನ್ನ ಅಪೇಕ್ಷೆ.
ಅದರಂತೆ ಮದುವೆಯಾದವಳಿಗೂ ಕನ್ನಿಕೆಗೂ ವ್ಯತ್ಯಾಸವುಂಟು; ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ; ಮದುವೆ ಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದವುಗಳನ್ನು ಕುರಿತು
ಒಬ್ಬನು ತನ್ನ ಕನ್ನಿಕೆಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದುಹೋಗು ತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ, ಅವನು ಪಾಪಮಾಡುವದಿಲ್ಲ, ಅವರು ಮದುವೆಮಾಡಿ ಕೊಳ್ಳಲಿ.
ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವದಕ್ಕೆ ಹಕ್ಕುಳ್ಳವನಾಗಿ ತನ್ನ ಕನ್ನಿಕೆಯನ್ನು ಮದುವೆಮಾಡಿ ಕೊಡುವದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು.
ಮದುವೆಯಾದವಳು ತನ್ನ ಗಂಡನು ಜೀವದಿಂದಿ ರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳು ವದಕ್ಕೆ ಸ್ವತಂತ್ರಳಾಗಿದ್ದಾಳೆ; ಆದರೆ ಇದು ಕರ್ತನಲ್ಲಿ ಆಗತಕ್ಕದ್ದು.