1
|
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ. ಲೋಕವೂ ಅದರ ನಿವಾಸಿಗಳೂ ಅತನವೇ. |
2
|
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ. ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಅತನೇ. |
3
|
ಯೆಹೋವನ ಪರ್ವತವನ್ನು ಹತ್ತುವವನು ಎಂಥವನಾಗಿರಬೇಕು? ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವಂಥವರು ಎಂಥವರಾಗಿರಬೇಕು? |
4
|
ಅವರು ದುಷ್ಟಕಾರ್ಯಗಳನ್ನು ಮಾಡಿಲ್ಲದವರೂ ಶುದ್ಧ ಹೃದಯವುಳ್ಳವರೂ ನನ್ನ ಹೆಸರಿನಲ್ಲಿ ಮೋಸ ಪ್ರಮಾಣ ಮಾಡದವರೂ ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು. |
5
|
ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು; ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು. |
6
|
ಆತನನ್ನು ಅನುಸರಿಸುವವರು ಇಂಥವರೇ. ಸಹಾಯಕ್ಕಾಗಿ ಯಾಕೋಬನ ದೇವರಬಳಿಗೆ ಹೋಗುವವರು ಇಂಥವರೇ. |
7
|
ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ. |
8
|
ಮಹಿಮಾಸ್ವರೂಪನಾದ ಈ ರಾಜನು ಯಾರು? ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ ಯೆಹೋವನೇ ಆತನು. |
9
|
ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರೆದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ. |
10
|
ಮಹಿಮಾಸ್ವರೂಪನಾದ ಈ ರಾಜನು ಯಾರು? ಸೇನಾಧೀಶ್ವರನಾದ ಯೆಹೋವನೇ ಆ ರಾಜನು. ಮಹಿಮಾಸ್ವರೂಪನಾದ ರಾಜನು ಆತನೇ. |
Psalms 24:1 Kannada Language Bible Words basic statistical display
COMING SOON ...