1
|
“ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು” ಇಸ್ರೇಲೇ, ಆ ಶತ್ರುಗಳ ಬಗ್ಗೆ ನಮಗೆ ಹೇಳು. |
2
|
“ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು” ಆದರೆ ಅವರೆಂದೂ ಗೆಲ್ಲಲಿಲ್ಲ. |
3
|
ನನ್ನ ಬೆನ್ನಿನ ಮೇಲೆ ಹೊಡೆದು ಹೊಲವನ್ನು ಉಳುವಂತೆ ಗಾಯ ಮಾಡಿದರು. |
4
|
ಆದರೆ ನೀತಿಸ್ವರೂಪನಾದ ಯೆಹೋವನು ಹಗ್ಗಗಳನ್ನು ಕತ್ತರಿಸಿ ಆ ದುಷ್ಟರಿಂದ ನನ್ನನ್ನು ಬಿಡುಗಡೆ ಮಾಡಿದನು. |
5
|
ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು. ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು. |
6
|
ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದರು. ಅದು ಬೆಳೆಯುವುದಕ್ಕಿಂತ ಮೊದಲೇ ಒಣಗಿ ಹೋಗುವುದು. |
7
|
ಅದನ್ನು ಕೊಯ್ಯುವವನ ಹಿಡಿಯೂ ತುಂಬುವುದಿಲ್ಲ ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ. |
8
|
ಅವರ ಸಮೀಪದಲ್ಲಿ ನಡೆದುಹೋಗುವವರು, “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವುದಿಲ್ಲ. “ಯೆಹೋವನ ಹೆಸರಿನಲ್ಲಿ ನಿಮಗೆ ಆಶೀರ್ವಾದವಾಗಲಿ” ಎಂದು ಜನರು ಅವರನ್ನು ಆಶೀರ್ವದಿಸುವುದಿಲ್ಲ. |
Psalms 129:1 Kannada Language Bible Words basic statistical display
COMING SOON ...