ಹೌದು, ಅಜ್ಞಾನಿಗೆ ಎಷ್ಟೋ ಒಳ್ಳೆಯ ಬುದ್ಧಿವಾದ ಮಾಡಿದೆ! ನೀನು ಎಷ್ಟು ಜ್ಞಾನಿ ಎಂಬುದನ್ನು ತೋರಿಸಿಕೊಟ್ಟಿರುವೆ. [*ನಿನ್ನಿಂದ … ತೋರಿಸಿಕೊಟ್ಟಿರುವೆ ಯೋಬನ 2 ಮತ್ತು 3ನೆಯ ವಚನಗಳು ಆ ಮೂವರ ವಾಸ್ತವ ಚಿತ್ರಣವಲ್ಲ. ನೀವು ಈ ರೀತಿ ಮಾಡಬೇಕಿದ್ದರೂ ಮಾಡಿಲ್ಲ ಎಂಬ ಅರ್ಥ ಬರುವಂತೆ ಯೋಬನು ಇಲ್ಲಿ ತಿಳಿಸಿದ್ದಾನೆ. ಇದಕ್ಕೆ ವ್ಯಂಗ್ಯ ನುಡಿ ಎನ್ನುತ್ತಾರೆ.]
ದೇವರ ಶಕ್ತಿಯುತವಾದ ಕಾರ್ಯಗಳಲ್ಲಿ ಇವು ಕೇವಲ ಒಂದು ಚಿಕ್ಕ ಭಾಗವಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಧ್ವನಿಯನ್ನು ಮಾತ್ರ ಕೇಳಿದ್ದೇವೆ. ಆತನ ಶಕ್ತಿಯ ಗರ್ಜನೆಯನ್ನು ಯಾರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು?”