Bible Languages

Indian Language Bible Word Collections

Bible Versions

Books

Deuteronomy Chapters

Deuteronomy 29 Verses

Bible Versions

Books

Deuteronomy Chapters

Deuteronomy 29 Verses

1 ಇಸ್ರೇಲ್ ಜನಾಂಗದೊಂದಿಗೆ ಹೋರೇಬ್ ಬೆಟ್ಟದಲ್ಲಿ ಯೆಹೋವನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅಲ್ಲದೆ ಇಸ್ರೇಲರು ಮೋವಾಬ್ ಪ್ರಾಂತ್ಯದಲ್ಲಿದ್ದಾಗ ಯೆಹೋವನು ಮೋಶೆಗೆ ಅವರೊಡನೆ ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಹೇಳಿದನು. ಅದು ಯಾವುದೆಂದರೆ:
2 ಮೋಶೆಯು ಇಸ್ರೇಲರ ಜನಸಮೂಹವನ್ನು ಕರೆದು, “ಈಜಿಪ್ಟ್ ದೇಶದಲ್ಲಿ ಯೆಹೋವನು ನಡಿಸಿದ ಕಾರ್ಯಗಳನ್ನೆಲ್ಲಾ ನೀವು ನೋಡಿದ್ದೀರಿ. ಆತನು ಫರೋಹನಿಗೂ ಅವನ ಪರಿವಾರದವರಿಗೂ ಮತ್ತು ಇಡೀ ಈಜಿಪ್ಟಿನವರಿಗೂ ಮಾಡಿದ್ದನ್ನೆಲ್ಲಾ ನೀವು ನೋಡಿದ್ದೀರಿ.
3 ಅವರಿಗೆ ಕೊಟ್ಟಂಥ ಭಯಂಕರ ಸಂಕಟಗಳನ್ನು ನೋಡಿದಿರಿ; ಆತನು ನಡಿಸಿದ ಅದ್ಭುತಕಾರ್ಯಗಳನ್ನು ನೋಡಿದಿರಿ.
4 ಆದರೆ ಇಂದಿನ ತನಕವೂ ನೀವು ಅದನ್ನು ಸಂಪೂರ್ಣವಾಗಿ ಅರಿಯಲಿಲ್ಲ. ನೀವು ಕಂಡವುಗಳನ್ನು ಮತ್ತು ಕೇಳಿದವುಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದಂತೆ ಯೆಹೋವನು ಮಾಡಿದನು.
5 ನಲವತ್ತು ವರ್ಷಗಳ ತನಕ ಯೆಹೋವನು ನಿಮ್ಮನ್ನು ಅಡವಿಯಲ್ಲಿ ನಡೆಸಿದನು. ಆದರೆ ನಿಮ್ಮ ಬಟ್ಟೆಗಳು ಜೀರ್ಣವಾಗಲಿಲ್ಲ ಮತ್ತು ಕಾಲಿಗೆ ಹಾಕಿದ ಕೆರಗಳು ಸವೆಯಲಿಲ್ಲ.
6 ನಿಮ್ಮಲ್ಲಿ ಆಹಾರವಿರಲಿಲ್ಲ; ಕುಡಿಯಲು ದ್ರಾಕ್ಷಾರಸವಾಗಲಿ ಪಾನೀಯವಾಗಲಿ ಇರಲಿಲ್ಲ. ಆದರೆ ಯೆಹೋವನು ಮನ್ನವನ್ನು ಮತ್ತು ನೀರನ್ನು ಕೊಟ್ಟನು. ಆತನೇ ನಿಮ್ಮ ದೇವರಾದ ಯೆಹೋವನೆಂದು ನೀವು ಅರಿತುಕೊಳ್ಳುವ ಹಾಗೆ ಮಾಡಿದನು.
7 “ನಾವು ಈ ಸ್ಥಳಕ್ಕೆ ಬಂದಾಗ ಹೆಪ್ಬೋನಿನ ರಾಜ ಸೀಹೋನ ಮತ್ತು ಬಾಷಾನಿನ ರಾಜ ಓಗನು ನಮ್ಮೊಂದಿಗೆ ಯುದ್ಧ ಮಾಡಲು ಬಂದರು. ನಾವು ಅವರನ್ನು ಸೋಲಿಸಿದೆವು.
8 ನಾವು ಅವರ ದೇಶವನ್ನು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರಿಗೆ ಹಂಚಿದೆವು.
9 ನೀವು ದೇವರೊಡನೆ ಮಾಡಿದ ಒಪ್ಪಂದವನ್ನು ಪಾಲಿಸುತ್ತಾ ಬಂದರೆ ನೀವು ನಿಮ್ಮ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ.
10 “ಈ ದಿನ ನೀವೆಲ್ಲರೂ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ನಾಯಕರು, ಹಿರಿಯರು, ನಿಮ್ಮ ಜನರೆಲ್ಲಾ ಇಲ್ಲಿ ಇರುವಿರಿ.
11 ನಿಮ್ಮ ಹೆಂಡತಿಮಕ್ಕಳೂ, ನಿಮ್ಮೊಂದಿಗಿರುವ ಪರದೇಶಸ್ಥರೂ ನಿಮ್ಮ ಸೇವೆ ಮಾಡುವವರೂ ಇದ್ದಾರೆ.
12 ನೀವೆಲ್ಲಾ ನಿಮ್ಮ ದೇವರಾದ ಯೆಹೋವನೊಂದಿಗೆ ಒಡಂಬಡಿಕೆಯನ್ನು ಮಾಡುವುದಕ್ಕೋಸ್ಕರ ನಿಂತಿದ್ದೀರಿ. ದೇವರು ನಿಮ್ಮೊಂದಿಗೆ ಒಡಂಬಡಿಕೆಯನ್ನು ಮಾಡುತ್ತಾನೆ.
13 ಈ ಒಡಂಬಡಿಕೆಯ ಮೂಲಕ ದೇವರು ನಿಮ್ಮನ್ನು ತನ್ನ ಸ್ವಕೀಯ ಪ್ರಜೆಯನ್ನಾಗಿ ಮಾಡುತ್ತಾನೆ. ಆತನು ನಿಮಗೆ ದೇವರಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಹೇಳಿದಂತೆ ನಿಮಗೂ ಹೇಳುತ್ತಾನೆ.
14 ಯೆಹೋವನು ವಾಗ್ದಾನಗಳನ್ನು ಒಳಗೊಂಡ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾತ್ರ ಮಾಡದೆ ಇಲ್ಲಿ ಕೂಡಿಬಂದಿರುವ ಎಲ್ಲರೊಂದಿಗೂ ಮಾಡುತ್ತಾನೆ.
15 ಇಂದು ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಇಲ್ಲಿ ನಿಂತಿರುವ ನಮ್ಮೆಲ್ಲರೊಂದಿಗೂ ಇಂದು ನಮ್ಮೊಂದಿಗಿಲ್ಲದ ನಮ್ಮ ಸಂತತಿಯವರಿಗೂ ಆತನು ಈ ಒಡಂಬಡಿಕೆಯನ್ನು ಮಾಡುತ್ತಿದ್ದಾನೆ.
16 ನಾನು ಈಜಿಪ್ಟಿನಲ್ಲಿ ಹೇಗೆ ಜೀವಿಸುತ್ತಿದ್ದೆವೆಂಬುದನ್ನೂ, ನಾವು ಇಲ್ಲಿಗೆ ಬರುವಾಗ ಹೇಗೆ ದೇಶಗಳನ್ನು ದಾಟಿಕೊಂಡು ಬಂದೆವೆಂಬುದನ್ನೂ ಸ್ಮರಿಸಿರಿ.
17 ನೀವು ಅವರ ಅಸಹ್ಯವಾದ ವಿಗ್ರಹಗಳನ್ನು ನೋಡಿದಿರಿ. ಅವುಗಳು ಮರ, ಕಲ್ಲು, ಬೆಳ್ಳಿಬಂಗಾರಗಳಿಂದ ಕೆತ್ತಲ್ಪಟ್ಟವುಗಳಾಗಿದ್ದವು.
18 ಇಲ್ಲಿರುವ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಯಾವ ಗೋತ್ರದವರಾಗಲಿ ನಿಮ್ಮ ದೇವರಾದ ಯೆಹೋವನನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಿರಿ. ಯಾವನೂ ಹೋಗಿ ಬೇರೆ ಜನಾಂಗಗಳ ದೇವರುಗಳ ಸೇವೆಮಾಡಬಾರದು. ಅಂಥದ್ದನ್ನು ಮಾಡುವ ಜನರು ಕಹಿಯಾದ ಮತ್ತು ವಿಷಭರಿತವಾದ ಹಣ್ಣನ್ನು ಬಿಡುವ ಗಿಡದಂತಿದ್ದಾರೆ.
19 “ನಾನು ತಿಳಿಸಿದ ಶಾಪವನ್ನೆಲ್ಲಾ ಕೇಳಿಸಿಕೊಂಡು, ‘ನಾನು ನನ್ನ ಇಷ್ಟ ಬಂದಂತೆ ಮಾಡುತ್ತೇನೆ. ನನಗೆ ಯಾವ ಕೇಡೂ ಆಗುವುದಿಲ್ಲ’ ಎಂದು ಯಾವನಾದರೂ ಹೇಳಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಂಡರೆ, ಅವನು ತನಗೆ ಮಾತ್ರವಲ್ಲ ಎಲ್ಲಾ ಒಳ್ಳೆಯ ಜನರಿಗೂ ಕೇಡಾಗುವಂತೆ ಮಾಡುತ್ತಾನೆ.
20 [This verse may not be a part of this translation]
21 [This verse may not be a part of this translation]
22 “ಮುಂದಿನ ದಿವಸಗಳಲ್ಲಿ ನಿಮ್ಮ ಸಂತತಿಯವರೂ ದೂರದೇಶದ ಪರದೇಶಸ್ಥರೂ ನಿಮ್ಮ ದೇಶವು ಹೇಗೆ ಹಾಳಾಗಿ ಹೋಯಿತು ಎಂಬುದನ್ನು ನೋಡುವರು. ಯೆಹೋವನು ದೇಶಕ್ಕೆ ತಂದ ವ್ಯಾಧಿಗಳನ್ನು ಅವರು ನೋಡುವರು.
23 ನಿಮ್ಮ ದೇಶವೆಲ್ಲಾ ನಿಷ್ಪ್ರಯೋಜಕವಾಗಿರುವುದು. ಅದರ ಮೇಲೆ ಉಪ್ಪೂ ಗಂಧಕವೂ ತುಂಬಿರುವುದು. ಅದರ ಮೇಲೆ ಯಾವ ಸಸಿಯೂ ಬೆಳೆಯಲಾರದು; ಕೂಳೆಯೂ ಬೆಳೆಯುವುದಿಲ್ಲ. ಸೊದೋಮ್, ಗೊಮೋರ, ಅದ್ಮಾ ಮತ್ತು ಚೆಬೋಯೀಮ್ ಎಂಬ ಪಟ್ಟಣಗಳು ಯೆಹೋವನ ಕೋಪದ ನಿಮಿತ್ತ ನಾಶವಾದಂತೆ ನಿಮ್ಮ ದೇಶವೂ ನಾಶವಾಗುವುದು.
24 “ಇತರ ದೇಶಗಳವರು, ‘ದೇವರು ಈ ದೇಶವನ್ನು ಯಾಕೆ ನಾಶಮಾಡಿದನು? ಆತನು ಯಾಕೆ ಕೋಪಗೊಂಡನು? ಎಂದು ವಿಚಾರಿಸುವರು.
25 ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಬಿಟ್ಟು ತೊಲಗಿದರು. ಅವರನ್ನು ಈಜಿಪ್ಟಿನಿಂದ ಹೊರತರುವಾಗ ಯೆಹೋವನೊಂದಿಗೆ ಮಾಡಿದ ಒಡಂಬಡಿಕೆಯನ್ನು ಅನುಸರಿಸಲಿಲ್ಲ.’
26 ಇಸ್ರೇಲ್ ಜನರು ಅನ್ಯದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು. ಅಂಥಾ ದೇವರುಗಳನ್ನು ಅವರು ಹಿಂದೆಂದೂ ಪೂಜಿಸಿರಲಿಲ್ಲ. ಯೆಹೋವನು ಅನ್ಯದೇವತೆಗಳನ್ನು ಪೂಜಿಸಬಾರದು ಎಂದು ಆಜ್ಞಾಪಿಸಿದ್ದರೂ ಅವರು ಅದನ್ನು ಉಲ್ಲಂಘಿಸಿದರು.
27 ಈ ಕಾರಣಕ್ಕಾಗಿಯೇ ದೇವರು ಅವರ ಮೇಲೆ ಸಿಟ್ಟುಗೊಂಡು ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನು ಅವರಿಗೆ ಬರಮಾಡಿದನು.
28 ದೇವರು ಅವರ ಮೇಲೆ ಬಹಳವಾಗಿ ಸಿಟ್ಟುಗೊಂಡದ್ದರಿಂದ ಅವರ ದೇಶದಿಂದ ಅವರನ್ನು ಕಿತ್ತು ಅವರು ಈಗ ವಾಸಿಸುವ ಮತ್ತೊಂದು ದೇಶದಲ್ಲಿ ಅವರನ್ನಿರಿಸಿದನು.’
29 “ಯೆಹೋವನು ಕೆಲವು ಸಂಗತಿಗಳನ್ನು ಗುಪ್ತವಾಗಿಟ್ಟಿದ್ದಾನೆ. ಅದು ಆತನಿಗೆ ಮಾತ್ರ ತಿಳಿದದೆ. ಆದರೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು ನಾವು ಮತ್ತು ನಮ್ಮ ಸಂತತಿಗಳವರು ಮಾತ್ರ ತಿಳಿದಿದ್ದೇವೆ . ಆ ಬೋಧನೆಗೆ ನಾವು ನಿತ್ಯಕಾಲಕ್ಕೂ ವಿಧೇಯರಾಗುವಂತೆ ಹೇಳಿದ್ದಾನೆ. ಆತನಿಗೆ ವಿಧೇಯರಾಗುವುದು ನಮ್ಮ ಕರ್ತವ್ಯ.

Deuteronomy 29:1 Kannada Language Bible Words basic statistical display

COMING SOON ...

×

Alert

×