English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

1 Corinthians Chapters

1 Corinthians 14 Verses

1 ಪ್ರೀತಿಯನ್ನು ಅನುಸರಿಸಿರಿ; ಆದರೂ ಆತ್ಮಿಕ ವರಗಳನ್ನು, ಅದರಲ್ಲೂ ಪ್ರವಾದಿಸುವ ದನ್ನೇ ಅಪೇಕ್ಷಿಸಿರಿ.
2 ಭಾಷೆಯನ್ನಾಡುವವನು ದೇವರ ಸಂಗಡಲೇ ಹೊರತು ಮನುಷ್ಯರ ಸಂಗಡ ಮಾತನಾಡು ವದಿಲ್ಲ. ಅವನು ಆತ್ಮನಲ್ಲಿದ್ದು ರಹಸ್ಯಗಳನ್ನು ನುಡಿ ಯುತ್ತಿದ್ದರೂ ಯಾರೂ ಅವನನ್ನು ತಿಳುಕೊಳ್ಳುವದಿಲ್ಲ.
3 ಪ್ರವಾದಿಸುವವನಾದರೋ ಮನುಷ್ಯರ ಸಂಗಡ ಮಾತನಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟು ಮಾಡುತ್ತಾನೆ.
4 ಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುತ್ತಾನೆ. ಪ್ರವಾದಿಸು ವವನಾದರೋ ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡು ತ್ತಾನೆ.
5 ನೀವೆಲ್ಲರೂ ಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸುತ್ತೇನೆ; ಆದರೆ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ಭಾಷೆಗಳನ್ನಾಡು ವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ಭಾಷೆಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ.
6 ಹೀಗಿರುವದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟ ವಾದದ್ದರಿಂದಾಗಲಿ ಇಲ್ಲವೆ ಜ್ಞಾನದಿಂದಾಗಲಿ ಇಲ್ಲವೆ ಪ್ರವಾದನೆಯಿಂದಾಗಲಿ ಇಲ್ಲವೆ ಬೋಧನೆಯಿಂದಾ ಗಲಿ ಮಾತನಾಡದೆ ಭಾಷೆಗಳಿಂದ ಮಾತ್ರ ಮಾತನಾಡಿ ದರೆ ನನ್ನಿಂದ ನಿಮಗೇನು ಪ್ರಯೋಜನ?
7 ಕೊಳಲು ವೀಣೆ ಮೊದಲಾದ ಅಚೇತನವಾದ್ಯಗಳು ಸ್ವರಗಳಲಿ ಯಾವ ಭೇದವನ್ನೂ ತೋರಿಸದಿದ್ದರೆ ಊದಿದ್ದು ಅಥವಾ ಬಾರಿಸಿದ್ದು ತಿಳಿಯುವದು ಹೇಗೆ?
8 ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ತನ್ನನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವವನು ಯಾರು?
9 ಹಾಗೆಯೇ ನೀವು ಸುಲಭವಾಗಿ ತಿಳಿಯಬಹುದಾದ ಮಾತುಗಳನ್ನಾಡದೆ ಹೋದರೆ ಮಾತನಾಡಿದ್ದು ಏನೆಂದು ಹೇಗೆ ತಿಳಿದೀತು? ನೀವು ಗಾಳಿಯಲ್ಲಿ ಮಾತನಾಡಿದ ಹಾಗಿರುವದಷ್ಟೆ.
10 ಲೋಕದಲ್ಲಿ ಅನೇಕ ವಿಧವಾದ ಸ್ವರಗಳು ಇದ್ದರೂ ಇರಬಹುದು; ಆದರೆ ಅವುಗಳಲ್ಲಿ ಅರ್ಥವಿಲ್ಲದ್ದು ಒಂದಾದರೂ ಇಲ್ಲ.
11 ಆದದರಿಂದ ಭಾಷೆಯ ಅರ್ಥವು ನನಗೆ ಗೊತ್ತಿಲ್ಲ ದಿದ್ದರೆ ಮಾತನಾಡುವವನಿಗೆ ನಾನು ಅನ್ಯದೇಶ ದವನಂತಿರುವೆನು; ಮಾತನಾಡುವವನು ನನಗೆ ಅನ್ಯ ದೇಶದವನಂತಿರುವನು.
12 ಅದರಂತೆಯೇ ನೀವು ಆತ್ಮಿಕ ವರಗಳಲ್ಲಿ ಆಸಕ್ತಿಯುಳ್ಳವರಾಗಿರುವದರಿಂದ ಸಭೆಯ ಹೆಚ್ಚಿನ ಭಕ್ತಿವೃದ್ಧಿಗಾಗಿ ತವಕಪಡಿರಿ.
13 ಆದದರಿಂದ ಅನ್ಯಭಾಷೆಯಲ್ಲಿ ಮಾತನಾಡುವವನು ಅದರ ಅರ್ಥ ಹೇಳುವಂತೆ ಪ್ರಾರ್ಥಿಸಲಿ.
14 ಅನ್ಯಭಾಷೆಯಲ್ಲಿ ನಾನು ಪ್ರಾರ್ಥಿಸಿದರೆ ನನ್ನ ಆತ್ಮವು ಪ್ರಾರ್ಥಿಸುವದು; ಆದರೆ ನನ್ನ ತಿಳುವಳಿಕೆಯು ನಿಷ್ಪಲವಾಗಿರುವದು.
15 ಹಾಗಾದ ರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿ ಯಿಂದಲೂ ಪ್ರಾರ್ಥಿಸುವೆನು; ಆತ್ಮದಿಂದ ಹಾಡು ವೆನು, ಬುದ್ಧಿಯಿಂದಲೂ ಹಾಡುವೆನು.
16 ಇದಲ್ಲದೆ ನೀನು ಆತ್ಮದಿಂದ ಸ್ತೋತ್ರ ಮಾಡುವಾಗ ತಿಳುವಳಿಕೆ ಯಿಲ್ಲದವನು ನೀನು ಮಾಡುವ ಕೃತಜ್ಞತಾಸ್ತುತಿಯನ್ನು ತಿಳಿಯದೆ ಇರುವದರಿಂದ ನೀನು ಹೇಳುವದಕ್ಕೆ ಆಮೆನ್‌ ಎಂದು ಹೇಳುವದು ಹೇಗೆ?
17 ನೀನಂತೂ ನಿಜ ವಾಗಿಯೂ ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ; ಆದರೆ ಬೇರೊಬ್ಬನು ಭಕ್ತಿವೃದ್ದಿ ಹೊಂದುವದಿಲ್ಲ.
18 ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಭಾಷೆಗಳನ್ನಾಡುತ್ತೇನೆಂದು ನನ್ನ ದೇವರನ್ನು ಕೊಂಡಾಡುತ್ತೇನೆ.
19 ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತುಸಾವಿರ ಮಾತು ಗಳನ್ನಾಡುವದಕ್ಕಿಂತ ನನ್ನ ಬುದ್ಧಿಯಿಂದ ಐದೇ ಮಾತು ಗಳನ್ನಾಡಿ ಇತರರಿಗೆ ಉಪದೇಶಮಾಡುವದು ನನಗೆ ಇಷ್ಟವಾದದ್ದು.
20 ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.
21 ಬೇರೆ ಭಾಷೆಯವರ ಮೂಲಕವಾಗಿಯೂ ಬೇರೆ ಯವರ ತುಟಿಗಳಿಂದಲೂ ನಾನು ಈ ಜನರೊಂದಿಗೆ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವದಿಲ್ಲ ಎಂದು ಕರ್ತನು ಹೇಳುತ್ತಾನೆಂಬ ದಾಗಿ ನ್ಯಾಯಪ್ರಮಾಣದಲ್ಲಿ ಬರೆದದೆ.
22 ಆದದ ರಿಂದ ಭಾಷೆಗಳು ನಂಬುವವರಿಗೆ ಅಲ್ಲ, ನಂಬದವರಿಗೆ ಸೂಚನೆಯಾಗಿವೆ; ಆದರೆ ಪ್ರವಾದಿಸುವದು ನಂಬದ ವರಿಗಲ್ಲ, ನಂಬುವವರಿಗೆ ಸೂಚನೆಯಾಗಿದೆ.
23 ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ?
24 ಆದರೆ ಎಲ್ಲರೂ ಪ್ರವಾದಿಸುವಾಗ ಒಬ್ಬ ಅವಿಶ್ವಾಸಿ ಯಾಗಲಿ ಇಲ್ಲವೆ ತಿಳುವಳಿಕೆಯಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರಿಂದ ಅರುಹು ಹೊಂದುತ್ತಾನೆ, ಎಲ್ಲರಿಂದ ಪರಿಶೋಧಿತನಾಗುತ್ತಾನೆ.
25 ಹೀಗೆ ಅವನ ಹೃದಯದ ರಹಸ್ಯಗಳು ತೋರಿಬರುತ್ತವೆ; ಅವನು ಸಾಷ್ಟಾಂಗವೆರಗಿ ದೇವರನ್ನು ಆರಾಧಿಸಿ ನಿಜಕ್ಕೂ ನಿಮ್ಮಲ್ಲಿ ದೇವರಿದ್ದಾನೆಂದು ಹೇಳುವನು.
26 ಹಾಗಾದರೇನು? ಸಹೋದರರೇ, ನೀವು ಕೂಡಿ ಬಂದಾಗ ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಬೋಧನೆಯಾಗಲಿ, ಭಾಷೆಯಾಗಲಿ, ಪ್ರಕಟನೆಯಾ ಗಲಿ ಭಾಷೆಯ ಅರ್ಥ ಹೇಳುವದಾಗಲಿ ಇರುತ್ತದಷ್ಟೆ. ಎಲ್ಲವುಗಳು ಭಕ್ತವೃದ್ಧಿಗಾಗಿಯೇ ನಡೆಯಲಿ.
27 ಯಾವ ನಾದರೂ ಅನ್ಯಭಾಷೆಯನ್ನಾಡುವದಾದರೆ ಇಬ್ಬರು ಅಥವಾ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತನಾಡಬೇಕು; ಒಬ್ಬನು ಅರ್ಥವನ್ನು ಹೇಳಲಿ;
28 ಅರ್ಥವನ್ನು ಹೇಳುವವನಿಲ್ಲದಿದ್ದರೆ ಅವನು (ಭಾಷೆ ಯನ್ನಾಡುವವನು) ಸಭೆಯಲ್ಲಿ ಮೌನವಾಗಿರಲಿ; ಅವನು ತನ್ನೊಂದಿಗೆಯೂ ದೇವರೊಂದಿಗೆಯೂ ಮಾತನಾಡಿಕೊಳ್ಳಲಿ.
29 ಪ್ರವಾದಿಗಳು ಇಬ್ಬರಾಗಲಿ ಮೂವರಾಗಲಿ ಮಾತನಾಡಲಿ, ಮಿಕ್ಕಾದವರು ವಿವೇಚ ನೆಮಾಡಲಿ.
30 ಪಕ್ಕದಲ್ಲಿ ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ.
31 ನೀವೆಲ್ಲರೂ ಒಬ್ಬೊಬ್ಬರಾಗಿ ಪ್ರವಾದಿಸಬಹುದು; ಹೀಗೆ ಮಾಡಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಆದರಣೆ ಹೊಂದುವರು.
32 ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.
33 ಪರಿಶುದ್ಧರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ದೇವರು ಸಮಾಧಾನಕ್ಕೇ ಹೊರತು ಗಲಿಬಿಲಿಗೆ ಕಾರಣನಲ್ಲ.
34 ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ.
35 ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವದು ನಾಚಿಗೆಗೆಟ್ಟದ್ದಾಗಿದೆ.
36 ಏನು, ದೇವರ ವಾಕ್ಯವು ನಿಮ್ಮಿಂದಲೇ ಹೊರ ಟಿತೋ? ನಿಮಗೆ ಮಾತ್ರವೇ ಬಂತೋ?
37 ಯಾವ ನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಇಲ್ಲವೆ ಆತ್ಮಿಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವ ವಿಷಯಗಳು ಕರ್ತನ ಆಜ್ಞೆಗಳೇ ಎಂದು ಚೆನ್ನಾಗಿ ತಿಳುಕೊಳ್ಳಲಿ.
38 ಆದರೆ ಯಾವನಾದರೂ ತಿಳಿಯದವನಾಗಿದ್ದರೆ ಅವನು ತಿಳಿಯದವನಾಗಿಯೇ ಇರಲಿ.
39 ಆದಕಾರಣ ಸಹೋದರರೇ, ಪ್ರವಾದಿಸುವದನ್ನು ಆಶಿಸಿರಿ. ಮತ್ತು ಭಾಷೆಗಳನ್ನಾಡುವದಕ್ಕೆ ಅಡ್ಡಿಮಾಡ ಬೇಡಿರಿ.
40 ಎಲ್ಲವುಗಳು ಮರ್ಯಾದೆಯಿಂದಲೂ ಕ್ರಮವಾಗಿಯೂ ನಡೆಯಲಿ.
×

Alert

×