ಕೇಳದವರಿಂದ ನಾನು ವಿಚಾರಿಸಲ್ಪಟ್ಟಿದ್ದೇನೆ, ನನ್ನನ್ನು ಹುಡುಕದವರಿಗೂ ಕಂಡು ಕೊಳ್ಳಲ್ಪಟ್ಟಿದ್ದೇನೆ; ನನ್ನ ಹೆಸರಿನಿಂದ ಕರೆಯಲ್ಪಡದ ಜನಾಂಗಕ್ಕೆ--ಇಗೋ, ಇದ್ದೇನೆ; ಇಗೋ, ಇದ್ದೇನೆ ಎಂದು ಹೇಳಿದೆನು.
ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ.
ನಿಮ್ಮ ಅಕ್ರಮಗಳಿಗೂ ನಿಮ್ಮ ತಂದೆಗಳ ಅಕ್ರ ಮಗಳಿಗೂ ಪ್ರತಿಫಲ ಕೊಡುತ್ತೇನೆಂದು ಕರ್ತನು ಹೇಳುತ್ತಾನೆ; ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು ಗುಡ್ಡಗಳ ಮೇಲೆ ನನ್ನನ್ನು ದೂಷಿಸಿದರಲ್ಲಾ. ಹೀಗಿರು ವದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಉಡಿ ಯಲ್ಲಿ ಅಳೆದುಬಿಡುವೆನು.
ಕರ್ತನು ಹೇಳುವದೇನಂದರೆ--ದ್ರಾಕ್ಷೇಗೊನೆ ಯಲ್ಲಿ ಹೊಸದ್ರಾಕ್ಷಾರಸ ಕಂಡುಕೊಳ್ಳುವದನ್ನು ಒಬ್ಬನು ನೋಡಿ--ಕೆಡಿಸಬೇಡ, ಅದರಲ್ಲಿ ಆಶೀರ್ವಾದ ಉಂಟೆಂದು ಹೇಳುವದು ಹೇಗೋ ಹಾಗೆಯೇ ನನ್ನ ಸೇವಕರಿಗೋಸ್ಕರ ಅವರನ್ನೆಲ್ಲಾ ನಾನು ಕೆಡಿಸಿ ಬಿಡದ ಹಾಗೆ ಮಾಡುವೆನು.
ಯಾಕೋಬಿನೊಳಗಿಂದ ಒಂದು ಸಂತಾನವನ್ನೂ ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನೂ ಹೊರಗೆ ಬರಮಾಡುವೆನು; ನಾನು ಆದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು; ನನ್ನ ಸೇವಕರು ಅದರಲಿವಾಸವಾಗುವರು.
ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.
ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;
ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳು ವವನು ಸತ್ಯ ದೇವರಲ್ಲಿ ಆಶೀರ್ವದಿಸಿಕೊಳ್ಳುವನು. ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು; ಸತ್ಯದೇವರ ಮೇಲೆ ಆಣೆ ಇಟ್ಟುಕೊಳ್ಳುವನು; ಮುಂಚಿನ ಕಷ್ಟಗಳು ಮರೆತುಹೋಗಿವೆ ಮತ್ತು ಅವು ನನ್ನ ಕಣ್ಣುಗಳಿಗೆ ಮರೆಯಾಗಿವೆ.
ಆದರೆ ನಾನು ಸೃಷ್ಟಿಸಿದವುಗಳಲ್ಲಿ ನೀವು ಸಂತೋಷಿಸಿ ಎಂದೆಂದಿಗೂ ಉಲ್ಲಾಸಪಡಿರಿ; ಯಾಕಂ ದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸ ವನ್ನೂ ಅವಳ ಜನರಲ್ಲಿ ಸಂತೋಷವನ್ನೂ ಸೃಷ್ಟಿಸು ತ್ತೇನೆ.
ಅವರು ಕಟ್ಟಿದ್ದ ರಲ್ಲಿ ಇನ್ನೊಬ್ಬರು ವಾಸಮಾಡುವದಿಲ್ಲ. ಅವರು ನೆಟ್ಟ ದ್ದನ್ನು ಇನ್ನೊಬ್ಬರು ತಿನ್ನುವದಿಲ್ಲ; ಮರದ ದಿನಗಳ ಹಾಗೆ ನನ್ನ ಜನರ ದಿನಗಳು ಇರುವವು; ನಾನು ಆದುಕೊಂಡವರು ತಮ್ಮ ಕೈಕೆಲಸವನ್ನು ಅನು ಭವಿಸುವರು.
ತೋಳ ವೂ ಕುರಿಮರಿಯೂ ಒಂದಾಗಿ ಮೇಯುವವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವದು; ಹಾವಿಗೋ ಅದರ ಆಹಾರವು ಮಣ್ಣೇ; ಅವು ನನ್ನ ಪರಿಶುದ್ಧ ಪರ್ವತದಲ್ಲಿ ಕೇಡುಮಾಡುವದಿಲ್ಲ ಮತ್ತು ನಾಶ ಮಾಡುವದಿಲ್ಲ ಎಂದು ಕರ್ತನು ಹೇಳುತ್ತಾನೆ.