1 | ಕರ್ತನೇ, ನನ್ನ ಹೃದಯವು ಗರ್ವದ್ದಲ್ಲ; ನನ್ನ ಕಣ್ಣುಗಳು ಅಹಂಭಾವ ದವುಗಳೂ ಅಲ್ಲ; ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ನಡೆದುಕೊಳ್ಳು ವದಿಲ್ಲ. |
---|
2 | ಮೊಲೆ ಬಿಡಿಸಿದ ಕೂಸು ತನ್ನ ತಾಯಿಯ ಬಳಿಯಲ್ಲಿ ಇರುವ ಪ್ರಕಾರ ನಿಶ್ಚಯವಾಗಿ ನನ್ನನ್ನು ಸಂತೈಸಿಕೊಂಡು ಮೌನವಾಗಿದ್ದೇನೆ; ನನ್ನ ಪ್ರಾಣವು ಮೊಲೆ ಬಿಡಿಸಿದ ಕೂಸಿನ ಹಾಗೆ ನನ್ನ ಬಳಿಯಲ್ಲಿ ಅದೆ. |
---|
3 | ಇಸ್ರಾಯೇಲು ಈಗಿನಿಂದ ಯುಗಯುಗಕ್ಕೂ ಕರ್ತನನ್ನು ಎದುರುನೋಡಲಿ. |
---|