1
|
ಇಸ್ರಾಯೇಲನು ಐಗುಪ್ತದೊಳಗಿಂದಲೂ ಯಾಕೋಬನ ಮನೆ ತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟಾಗ |
2
|
ಯೆಹೂದನು ಆತನ ಪರಿಶುದ್ಧ ಸ್ಥಳವೂ ಇಸ್ರಾಯೇಲನು ಆತನ ದೊರೆತನವೂ ಆಗಿದ್ದರು. |
3
|
ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ಹಿಂತಿರುಗಿತು. |
4
|
ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು. |
5
|
ಸಮುದ್ರವೇ, ನಿನಗೆ ಏನಾಯಿತು? ಯಾಕೆ ಓಡಿ ಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ? |
6
|
ಬೆಟ್ಟಗಳೇ, ಟಗರುಗಳ ಹಾಗೆಯೂ ಚಿಕ್ಕ ಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವದು ಯಾಕೆ? |
7
|
ಬಂಡೆಯನ್ನು ನೀರಿನ ಕೆರೆಗೂ ಬೆಣಚು ಕಲ್ಲನ್ನು ನೀರಿನ ಬುಗ್ಗೆಗೂ ಮಾರ್ಪಡಿಸುವ |
8
|
ಕರ್ತನ ಸನ್ನಿಧಿ ಯಲ್ಲಿಯೂ ಯಾಕೋಬನ ದೇವರ ಮುಂದೆಯೂ ಭೂಮಿಯೇ, ನಡುಗು. |
Psalms 114:6 Kannada Language Bible Words basic statistical display
COMING SOON ...