Indian Language Bible Word Collections
Psalms 111:1
Psalms Chapters
Psalms 111 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 111 Verses
1
|
ಕರ್ತನನ್ನು ಸ್ತುತಿಸಿರಿ; ನಾನು ಕರ್ತನನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ ಸಭೆಯಲ್ಲಿಯೂ ಕೊಂಡಾಡುವೆನು. |
2
|
ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ. |
3
|
ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ. |
4
|
ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ. |
5
|
ಆತನು ತನಗೆ ಭಯಪಡುವ ವರಿಗೆ ಆಹಾರ ಕೊಟ್ಟಿದ್ದಾನೆ; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವನು. |
6
|
ಅನ್ಯ ಜನರ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ತನ್ನ ಕೆಲಸಗಳ ಬಲವನ್ನು ಜನರಿಗೆ ತೋರಿಸಿದ್ದಾನೆ. |
7
|
ಆತನ ಕೈ ಕೆಲಸಗಳು ಸತ್ಯವೂ ನ್ಯಾಯವೂ ಆಗಿವೆ; ಆತನ ಕಟ್ಟಳೆಗಳೆಲ್ಲಾ ನಿಶ್ಚಯವಾದವುಗಳು. |
8
|
ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ. ಅವು ಸತ್ಯದಲ್ಲಿಯೂ ಯಥಾರ್ಥತೆಯಲ್ಲಿಯೂ ವಿಧಿಸ ಲ್ಪಟ್ಟಿವೆ. |
9
|
ತನ್ನ ಜನರಿಗೆ ವಿಮೋಚನೆಯನ್ನು ಕಳುಹಿ ಸಿದನು; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಆಜ್ಞಾಪಿಸಿದನು; ಆತನ ಹೆಸರು ಪರಿಶುದ್ಧವೂ ಘನವೂ ಆಗಿದೆ. |
10
|
ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ. |