Bible Languages

Indian Language Bible Word Collections

Bible Versions

Books

Psalms Chapters

Psalms 136 Verses

Bible Versions

Books

Psalms Chapters

Psalms 136 Verses

1 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತವಾದದ್ದು.
2 ದೇವಾಧಿದೇವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನ ಪ್ರೀತಿ ಶಾಶ್ವತವಾದದ್ದು.
3 ಪ್ರಭುಗಳ ಪ್ರಭವಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಪ್ರೀತಿ ಶಾಶ್ವತವಾದದ್ದು.
4 ಮಹತ್ಕಾರ್ಯಗಳನ್ನು ಮಾಡಬಲ್ಲ ಆತನಿಗೆ ಸ್ತೋತ್ರಮಾಡಿರಿ. ಆತನ ಪ್ರೀತಿ ಶಾಶ್ವತವಾದದ್ದು.
5 ಜ್ಞಾನದಿಂದ ಆಕಾಶವನ್ನು ನಿರ್ಮಿಸಿದ ಆತನೊಬ್ಬನನ್ನೇ ಸ್ತುತಿಸಿರಿ! ಆತನ ಪ್ರೀತಿ ಶಾಶ್ವತವಾದದ್ದು.
6 ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ. ಆತನ ಪ್ರೀತಿ ಶಾಶ್ವತವಾದದ್ದು.
7 ಆತನು ಮಹಾಬೆಳಕುಗಳನ್ನು ಸೃಷ್ಟಿಮಾಡಿದನು. ಆತನ ಪ್ರೀತಿ ಶಾಶ್ವತವಾದದ್ದು.
8 ಹಗಲನ್ನು ಆಳುವುದಕ್ಕಾಗಿ ಆತನು ಸೂರ್ಯನನ್ನು ಸೃಷ್ಟಿಮಾಡಿದನು. ಆತನ ಪ್ರೀತಿ ಶಾಶ್ವತವಾದದ್ದು.
9 ರಾತ್ರಿಯನ್ನು ಆಳುವುದಕ್ಕಾಗಿ ಆತನು ಚಂದ್ರನನ್ನೂ ನಕ್ಷತ್ರಗಳನ್ನೂ ಸೃಷ್ಟಿಮಾಡಿದನು. ಆತನ ಪ್ರೀತಿ ಶಾಶ್ವತವಾದದ್ದು.
10 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ಸಂಹರಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
11 ಆತನು ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದನು. ಆತನ ಪ್ರೀತಿ ಶಾಶ್ವತವಾದದ್ದು.
12 ಆತನು ತನ್ನ ಮಹಾಶಕ್ತಿಯನ್ನೂ ಬಲವನ್ನೂ ತೋರಿದನು. ಆತನ ಪ್ರೀತಿ ಶಾಶ್ವತವಾದದ್ದು.
13 ಆತನು ಕೆಂಪು ಸಮುದ್ರವನ್ನು ಎರಡು ಭಾಗವನ್ನಾಗಿ ಮಾಡಿದನು. ಆತನ ಪ್ರೀತಿ ಶಾಶ್ವತವಾದದ್ದು.
14 ಆತನು ಇಸ್ರೇಲರನ್ನು ಸಮುದ್ರದ ಮಧ್ಯದಲ್ಲಿ ನಡೆಸಿದನು. ಆತನ ಪ್ರೀತಿ ಶಾಶ್ವತವಾದದ್ದು.
15 ಆತನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
16 ಆತನು ತನ್ನ ಜನರನ್ನು ಅರಣ್ಯದೊಳಗೆ ನಡೆಸಿದನು. ಆತನ ಪ್ರೀತಿ ಶಾಶ್ವತವಾದದ್ದು.
17 ಆತನು ಶಕ್ತಿಯುತರಾದ ರಾಜರುಗಳನ್ನು ಸೋಲಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
18 ಆತನು ಬಲಿಷ್ಟರಾದ ರಾಜರುಗಳನ್ನು ಸೋಲಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
19 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
20 ಆತನು ಬಾಷಾನಿನ ರಾಜನಾದ ಓಗನನ್ನು ಸೋಲಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
21 ಆತನು ಅವರ ದೇಶಗಳನ್ನು ಇಸ್ರೇಲರಿಗೆ ಕೊಟ್ಟನು. ಆತನ ಪ್ರೀತಿ ಶಾಶ್ವತವಾದದ್ದು.
22 ಆತನು ಆ ದೇಶಗಳನ್ನು ಇಸ್ರೇಲರಿಗೆ ಉಡುಗೊರೆಯಾಗಿ ಕೊಟ್ಟನು. ಆತನ ಪ್ರೀತಿ ಶಾಶ್ವತವಾದದ್ದು.
23 ನಾವು ಸೋತುಹೋಗಿದ್ದಾಗ ಆತನು ನಮ್ಮನ್ನು ಜ್ಞಾಪಿಸಿಕೊಂಡನು. ಆತನ ಪ್ರೀತಿ ಶಾಶ್ವತವಾದದ್ದು.
24 ಆತನು ನಮ್ಮನ್ನು ನಮ್ಮ ಶತ್ರುಗಳಿಂದ ರಕ್ಷಿಸಿದನು. ಆತನ ಪ್ರೀತಿ ಶಾಶ್ವತವಾದದ್ದು.
25 ಆತನು ಪ್ರತಿಯೊಬ್ಬರಿಗೂ ಆಹಾರವನ್ನು ಕೊಡುವನು. ಆತನ ಪ್ರೀತಿ ಶಾಶ್ವತವಾದದ್ದು.
26 ಪರಲೋಕದ ದೇವರನ್ನು ಸ್ತುತಿಸಿರಿ! ಆತನ ಪ್ರೀತಿ ಶಾಶ್ವತವಾದದ್ದು.

Psalms 136:2 Kannada Language Bible Words basic statistical display

COMING SOON ...

×

Alert

×