Bible Languages

Indian Language Bible Word Collections

Bible Versions

Books

Numbers Chapters

Numbers 4 Verses

Bible Versions

Books

Numbers Chapters

Numbers 4 Verses

1 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ:
2 “ಕೆಹಾತ್ ಗೋತ್ರದ ಪುರುಷರನ್ನು ಲೆಕ್ಕಿಸು. (ಕೆಹಾತ್ಯರು ಲೇವಿ ವಂಶದವರಾಗಿದ್ದಾರೆ.)
3 ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಲು ಯೋಗ್ಯರಾದ ಮೂವತ್ತರಿಂದ ಐವತ್ತರೊಳಗಿನ ಎಲ್ಲಾ ಪುರುಷರನ್ನು ಲೆಕ್ಕಿಸು.
4 ಅವರು ದೇವದರ್ಶನಗುಡಾರದಲ್ಲಿರುವ ಮಹಾ ಪರಿಶುದ್ಧವಸ್ತುಗಳನ್ನು ನೋಡಿಕೊಳ್ಳಬೇಕು.
5 “ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು.
6 ಬಳಿಕ ಅವರು ಇವುಗಳಿಗೆಲ್ಲ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ನೀಲಿಬಟ್ಟೆಯನ್ನು ತೊಗಲಿನ ಮೇಲೆ ಹಾಸಿ ಪವಿತ್ರ ಪೆಟ್ಟಿಗೆಯ ಬಳೆಗಳಲ್ಲಿ ಹೊರುವ ಕೋಲುಗಳನ್ನು ಸೇರಿಸಬೇಕು.”
7 “ಬಳಿಕ ಅವರು ಪವಿತ್ರ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಬೇಕು. ಪಾನದ್ರವ್ಯಾರ್ಪಣೆಗಳಿಗಾಗಿ ತಟ್ಟೆಗಳನ್ನೂ ಚಮಚಗಳನ್ನೂ ಬಟ್ಟಲುಗಳನ್ನೂ ಹೂಜೆಗಳನ್ನೂ ವಿಶೇಷ ರೊಟ್ಟಿಯನ್ನೂ ಮೇಜಿನ ಮೇಲೆ ಇಡಬೇಕು.
8 ಬಳಿಕ ಅವುಗಳ ಮೇಲೆ ಕೆಂಪುಬಟ್ಟೆಯನ್ನು ಹಾಸಿ, ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಅದಕ್ಕೆ ಹೊದಿಸಬೇಕು. ಬಳಿಕ ಹೊರುವ ಕೋಲುಗಳನ್ನು ಮೇಜಿನ ಬಳೆಗಳಲ್ಲಿ ಸೇರಿಸಬೇಕು.
9 “ಆಮೇಲೆ ದೀಪಸ್ತಂಭಕ್ಕೂ ಅದರ ದೀಪಗಳಿಗೂ ದೀಪಗಳ ಉಪಕರಣಗಳಿಗೂ ಬೂದಿ ತೆಗೆಯುವ ಅಗ್ಗಿಷ್ಠಿಕೆಗೂ ಮತ್ತು ಅದಕ್ಕಾಗಿ ಉಪಯೋಗಿಸುವ ಎಲ್ಲಾ ಎಣ್ಣೆಯ ಪಾತ್ರೆಗಳಿಗೂ ನೀಲಿಬಟ್ಟೆಯನ್ನು ಹೊದಿಸಬೇಕು.
10 ಬಳಿಕ ದೀಪಸ್ತಂಭಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಅವರು ಈ ಎಲ್ಲಾ ವಸ್ತುಗಳನ್ನು ಹೊರುವ ಕೋಲುಗಳಿಗೆ ಕಟ್ಟಬೇಕು.
11 “ಅವರು ವರ್ನು ಹೊರುವ ಕಂಬಗಳಿಗೆ ಕಟ್ಟಬರುವ ಕಂಬಗಳಿಗೆ ಕ್‌ಮಾಡಿದ ಹೊದಿಕೆಯನ್ನು ಹೊದಿಸಬೇಕು. ಆಮೇಲೆ ಠ ಐವತ್ತರೊಳಗಿನ ಎಲ್ಲಾ ಪುರು,್ನು ವೇದಿಕೆಯ ಬಳೆಗಳಿಗೆ ಸೇರಿಸಬೇಕು.
12 “ಬಳಿಕ ಆರಾಧನೆಗಾಗಿ ಪವಿತ್ರಸ್ಥಳದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ವಿಶೇಷ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳನ್ನು ನೀಲಿಬಟ್ಟೆಯಿಂದ ಮುಚ್ಚಬೇಕು. ಬಳಿಕ ಅವುಗಳಿಗೆ ಶ್ರೇಷ್ಠವಾದ ತೊಗಲನ್ನು ಹೊದಿಸಬೇಕು. ಅವರು ಈ ವಸ್ತುಗಳನ್ನು ಹೊರುವುದಕ್ಕಾಗಿ ಚೌಕಟ್ಟಿಗೆ ಕಟ್ಟಬೇಕು.
13 “ಅವರು ತಾಮ್ರದ ವೇದಿಕೆಯಿಂದ ಬೂದಿಯನ್ನು ತೆಗೆದು, ನೇರಳೆಬಟ್ಟೆಯನ್ನು ಅದರ ಮೇಲೆ ಹಾಸಬೇಕು.
14 ಬಳಿಕ ಅವರು ವೇದಿಕೆಯಲ್ಲಿ ಆರಾಧನೆಗಾಗಿ ಉಪಯೋಗಿಸಲ್ಪಡುವ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಸೇರಿಸಬೇಕು. ಅವುಗಳು ಯಾವುವೆಂದರೆ, ಅಗ್ಗಿಷ್ಟಿಗೆಗಳು, ಮುಳ್ಳುಚಮಚಗಳು, ಸಲಿಕೆಗಳು ಮತ್ತು ಬೋಗುಣಿಗಳು. ಅವರು ಇವುಗಳನ್ನು ತಾಮ್ರದ ವೇದಿಕೆಯ ಮೇಲೆ ಇಡಬೇಕು. ಬಳಿಕ ಅವರು ಶ್ರೇಷ್ಠವಾದ ತೊಗಲಿನ ಹೊದಿಕೆಯನ್ನು ಇವುಗಳಿಗೆಲ್ಲ ಹೊದಿಸಿ, ಹೊರುವ ಕೋಲುಗಳನ್ನು ವೇದಿಕೆಯ ಬಳೆಗಳಲ್ಲಿ ಸೇರಿಸಬೇಕು.
15 “ಇಸ್ರೇಲರು ಪ್ರಯಾಣಮಾಡುವ ಸಮಯದಲ್ಲಿ ಆರೋನನು ಮತ್ತು ಅವನ ಪುತ್ರರು ಪವಿತ್ರವಸ್ತುಗಳಿಗೂ ಪವಿತ್ರ ಉಪಕರಣಗಳಿಗೂ ಹೊದಿಸಿದ ನಂತರ, ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಹೋಗಬಹುದು. ಈ ರೀತಿ ಅವರು ಪವಿತ್ರವಸ್ತುಗಳನ್ನು ಮುಟ್ಟಬಾರದು; ಅವರು ಮುಟ್ಟಿದರೆ ಸಾಯುತ್ತಾರೆ.
16 “ಮಹಾಯಾಜಕನಾದ ಆರೋನನ ಮಗನಾದ ಎಲ್ಲಾಜಾರನು ಇಡೀ ಪವಿತ್ರ ಗುಡಾರವನ್ನು ಮತ್ತು ಎಲ್ಲಾ ಪವಿತ್ರಸ್ಥಳವನ್ನು ಮತ್ತು ಅದರೊಳಗಿರುವ ಎಲ್ಲಾ ಪಾತ್ರೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ದೀಪದ ಎಣ್ಣೆಗೂ ಪರಿಮಳಧೂಪಕ್ಕೂ ದೈನಂದಿನ ಧಾನ್ಯಸಮರ್ಪಣೆಗೂ ಅಭಿಷೇಕತೈಲಕ್ಕೂ ಅವನು ಜವಾಬ್ದಾರನಾಗಿದ್ದಾನೆ.”
17 ಯೆಹೋವನು ಮೋಶೆ ಆರೋನರಿಗೆ,
18 “ಕೆಹಾತ್ಯರು ಲೇವಿಯರ ಮಧ್ಯದಿಂದ ಇಲ್ಲವಾಗದಂತೆ ಎಚ್ಚರಿಕೆಯಾಗಿರಿ.
19 ಅವರು ಮಹಾ ಪರಿಶುದ್ಧ ವಸ್ತುಗಳ ಹತ್ತಿರ ಬಂದಾಗ ಸಾಯದಂತೆ ನೀವು ಅವರ ವಿಷಯದಲ್ಲಿ ಮಾಡಬೇಕಾದದ್ದೇನೆಂದರೆ, ಆರೋನನೂ ಅವನ ಪುತ್ರರೂ ಒಳಗೆ ಬಂದು, ಪ್ರತಿಯೊಬ್ಬ ಕೆಹಾತ್ಯನು ಮಾಡಬೇಕಾದ ಕೆಲಸವನ್ನು ಮತ್ತು ಹೊತ್ತುಕೊಂಡು ಹೋಗಬೇಕಾದದ್ದನ್ನು ತೋರಿಸಲಿ.
20 ಇಲ್ಲವಾದರೆ, ಕೆಹಾತ್ಯರು ಒಳಗೆ ಬಂದು ಪರಿಶುದ್ಧವಸ್ತುಗಳನ್ನು ಮುಟ್ಟುವರು. ಆ ಮಹಾ ಪರಿಶುದ್ಧವಸ್ತುಗಳನ್ನು ಅವರು ಒಂದು ಕ್ಷಣ ಮುಟ್ಟಿದರೂ ಸಾಯುತ್ತಾರೆ” ಎಂದು ಹೇಳಿದನು.
21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
22 [This verse may not be a part of this translation]
23 [This verse may not be a part of this translation]
24 “ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆಯಲ್ಲಿಯೂ ಗೇರ್ಷೋನ್ಯರು ಮಾಡತಕ್ಕ ಕೆಲಸ ಯಾವುದೆಂದರೆ:
25 ಅವರು ಪವಿತ್ರ ಗುಡಾರದ ಬಟ್ಟೆಗಳನ್ನು, ದೇವದರ್ಶನಗುಡಾರ ಮತ್ತು ಅದರ ಹೊದಿಕೆ, ಅದರ ಮೇಲಿರುವ ಶ್ರೇಷ್ಠವಾದ ತೊಗಲಿನ ಹೊದಿಕೆ ಮತ್ತು ದೇವದರ್ಶನಗುಡಾರದಲ್ಲಿರುವ ಪ್ರವೇಶದ್ವಾರದ ಪರದೆಯನ್ನು ವರ್ಗಾಯಿಸಬೇಕು.
26 ಅಂಗಳದ ಪರದೆಗಳನ್ನು, ಪವಿತ್ರ ಗುಡಾರವನ್ನು ಮತ್ತು ವೇದಿಕೆಯ ಸುತ್ತಲೂ ಇರುವ ಅಂಗಳ ಪ್ರವೇಶದ್ವಾರದ ಪರದೆಯನ್ನು, ಅವುಗಳ ಹಗ್ಗಗಳನ್ನು ಮತ್ತು ಇವುಗಳ ಎಲ್ಲಾ ಉಪಕರಣಗಳನ್ನು ವರ್ಗಾಯಿಸಬೇಕು.
27 ಗೇರ್ಷೋನ್ಯರು ಮಾಡುವ ಎಲ್ಲಾ ಕೆಲಸಗಳನ್ನು ಅಂದರೆ ವರ್ಗಾವಣೆಗಾಗಿ ಸಾಮಾನುಗಳನ್ನು ಕಟ್ಟುವುದರಲ್ಲಿಯೂ ವರ್ಗಾವಣೆ ಮಾಡುವುದರಲ್ಲಿಯೂ ಆರೋನ ಮತ್ತು ಅವನ ಪುತ್ರರು ಮಾರ್ಗದರ್ಶನ ನೀಡುವರು. ಗೇರ್ಷೋನ್ಯರು ವರ್ಗಾಯಿಸುವ ಎಲ್ಲವನ್ನು ಅವರೇ ಕಾಯಬೇಕೆಂಬ ಜವಾಬ್ದಾರಿಕೆಯನ್ನು ನೀನು ಅವರಿಗೆ ಕೊಡು.
28 ದೇವದರ್ಶನಗುಡಾರಕ್ಕೋಸ್ಕರ ಮತ್ತು ತಮ್ಮ ಕಾವಲಿನ ಕರ್ತವ್ಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಕನಾಗಿರಬೇಕು.”
29 “ನೀನು ಮೆರಾರೀಯರನ್ನೂ ಅವರ ಕುಲಗಳಿಗನುಗುಣವಾಗಿ ಮತ್ತು ಕುಟುಂಬಗಳಿಗನುಗುಣವಾಗಿ ಲೆಕ್ಕಿಸು.
30 ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಲೆಕ್ಕಿಸು. ಅವರ ವಯಸ್ಸು ಮೂವತ್ತರಿಂದ ಮೊದಲುಗೊಂಡು ಐವತ್ತರೊಳಗಿರಬೇಕು.
31 ಈ ಕೆಳಕಂಡ ವಸ್ತುಗಳನ್ನು ಮೆರಾರೀಯರು ವರ್ಗಾವಣೆಗಾಗಿ ಕಟ್ಟುವರು, ವರ್ಗಾಯಿಸುವರು ಮತ್ತು ಕಾವಲುಕಾಯುವರು: ಪವಿತ್ರ ಡೇರೆಯ ಚೌಕಟ್ಟುಗಳು, ಅದರ ಅಡ್ಡಪಟ್ಟಿಗಳು, ಅದರ ಸ್ತಂಭಗಳು, ಅದರ ಗದ್ದಿಗೇಕಲ್ಲುಗಳು,
32 ಅಂಗಳದ ಸ್ತಂಭಗಳು ಮತ್ತು ಅವುಗಳ ಗದ್ದಿಗೇಕಲ್ಲುಗಳು, ಅಗುಳಿಗಳು, ಹಗ್ಗಗಳು ಮತ್ತು ಅವರ ಕೆಲಸಕ್ಕೆ ಬೇಕಾದ ಎಲ್ಲಾ ಉಪಕರಣಗಳು. ಅವರು ವರ್ಗಾಯಿಸಬೇಕಾದ ಮತ್ತು ಕಾವಲುಕಾಯಬೇಕಾದ ವಸ್ತುಗಳನ್ನು ನೀನು ಹೆಸರೆಸರಾಗಿ ಅವರಿಗೆ ವಹಿಸಿಕೊಡಬೇಕು.
33 ದೇವದರ್ಶನಗುಡಾರಕ್ಕೋಸ್ಕರ ಮೆರಾರೀಯರು ಮಾಡತಕ್ಕ ಕೆಲಸ ಇದೇ. ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು ಮಹಾಯಾಜಕ ಆರೋನನ ಮಗನಾದ ಈತಾಮಾರನ ಜವಾಬ್ದಾರಿಯಾಗಿದೆ.”
34 [This verse may not be a part of this translation]
35 [This verse may not be a part of this translation]
36 ಅವರಲ್ಲಿ ಈ ಕೆಲಸವನ್ನು ಮಾಡಲು ಅರ್ಹರಾಗಿ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2,750 ಮಂದಿ.
37 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.
38 [This verse may not be a part of this translation]
39 [This verse may not be a part of this translation]
40 ಅವರ ಸಂಖ್ಯೆ 2,630.
41 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಗೇರ್ಷೋನ್ಯರನ್ನು ಲೆಕ್ಕಿಸಿದರು. ಅವರಲ್ಲಿ ದೇವದರ್ಶನಗುಡಾರದ ವಿಶೇಷ ಕೆಲಸವನ್ನು ಮಾಡತಕ್ಕವರು ಇವರೇ.
42 [This verse may not be a part of this translation]
43 [This verse may not be a part of this translation]
44 ಅವರ ಒಟ್ಟು ಸಂಖ್ಯೆ 3,200.
45 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಿದರು. ಮೆರಾರೀಯರ ಕುಲಗಳಿಂದ ಈ ಗಂಡಸರನ್ನು ದಾಖಲಾತಿ ಮಾಡಿಕೊಳ್ಳಲಾಯಿತು.
46 ಹೀಗೆ ಮೋಶೆ ಆರೋನರು ಇಸ್ರೇಲರ ಪ್ರಧಾನರನ್ನೂ ಎಲ್ಲಾ ಲೇವಿಯರನ್ನೂ ಕುಲ ಮತ್ತು ಕುಟುಂಬಗಳಿಗೆ ಅನುಗುಣವಾಗಿ ಲೆಕ್ಕಿಸಿದರು.
47 ಮೂವತ್ತರಿಂದ ಐವತ್ತು ವರ್ಷದೊಳಗಿರುವ ಮತ್ತು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ವರ್ಗಾವಣೆಗಾಗಿ ಕಟ್ಟುವುದಕ್ಕೂ ವರ್ಗಾವಣೆಯ ಕೆಲಸಕ್ಕೂ ಯೋಗ್ಯರಾದ ಎಲ್ಲಾ ಗಂಡಸರನ್ನು ಲೆಕ್ಕಿಸಿದರು.
48 ಅವರ ಒಟ್ಟು ಸಂಖ್ಯೆ 8,580.
49 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನೂ ಲೆಕ್ಕಿಸಲ್ಪಟ್ಟನು. ಪ್ರತಿಯೊಬ್ಬನಿಗೂ ವರ್ಗಾವಣೆಗಾಗಿ ವಸ್ತುಗಳನ್ನು ಕಟ್ಟುವ ಮತ್ತು ವರ್ಗಾವಣೆ ಕೆಲಸದ ಕರ್ತವ್ಯಗಳನ್ನು ಗೊತ್ತುಪಡಿಸಲಾಯಿತು. ಯೆಹೋವನು ಆಜ್ಞಾಪಿಸಿದ ಮೇರೆಗೆ ಇದು ಮಾಡಲ್ಪಟ್ಟಿತು.

Numbers 4:1 Kannada Language Bible Words basic statistical display

COMING SOON ...

×

Alert

×