1
|
ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: |
2
|
“ಇಸ್ರೇಲರು ದೇವದರ್ಶನಗುಡಾರದ ಸುತ್ತಲೂ ಸ್ವಲ್ಪ ದೂರದಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನು ತನ್ನ ತನ್ನ ಗೋತ್ರಧ್ವಜದ ಹತ್ತಿರ ತನ್ನತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು. |
3
|
“ವಿಭಾಗಗಳಿಗನುಸಾರವಾಗಿ ತಮ್ಮತಮ್ಮ ಸ್ವಂತ ಧ್ವಜಗಳೊಡನೆ ಮುನ್ನಡೆಯುವ ಯೆಹೂದ ಮತ್ತು ಅದರ ಗೋತ್ರಗಳವರು ದೇವದರ್ಶನಗುಡಾರದ ಪೂರ್ವದಿಕ್ಕಿನಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಯೆಹೂದ ಕುಲದವರ ನಾಯಕನು ಅಮ್ಮೀನಾದಾಬನ ಮಗನಾದ ನಹಶೋನ. |
4
|
ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 74,600 ಮಂದಿ. |
5
|
“ಇಸ್ಸಾಕಾರ್ ಕುಲದವರು ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಇಸ್ಸಾಕಾರನ ಕುಲದವರ ನಾಯಕನು ಚೂವಾರನ ಮಗನಾದ ನೆತನೇಲ್. |
6
|
ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 54,400 ಮಂದಿ. |
7
|
“ಜೆಬುಲೂನ್ ಕುಲದವರು ಸಹ ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಜೆಬುಲೂನ್ ಕುಲದ ನಾಯಕನು ಹೇಲೋನನ ಮಗನಾದ ಎಲೀಯಾಬ್. |
8
|
ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 57,400 ಮಂದಿ. |
9
|
“ಯೆಹೂದ ಪಾಳೆಯದಲ್ಲಿ ಮತ್ತು ಅದರೊಡನೆ ಮುನ್ನಡೆಯುವ ಗೋತ್ರಗಳವರ ಒಟ್ಟು ಸೈನಿಕರು 1,86,400 ಮಂದಿ. ಇವರೆಲ್ಲರು ವಿಭಾಗಗಳಿಗನುಸಾರವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ, ಯೆಹೂದ ಕುಲವು ಮತ್ತು ಅದರೊಂದಿಗಿರುವ ಎರಡು ಕುಲಗಳವರು ಮೊದಲು ಹೊರಡುವರು. |
10
|
“ರೂಬೇನ್ ಕುಲ ಮತ್ತು ಅದರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ದಕ್ಷಿಣದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿನುಸಾರವಾಗಿ ಪಾಳೆಯಮಾಡಿಕೊಳ್ಳಬೇಕು. ರೂಬೇನ್ ಕುಲದವರ ನಾಯಕನು ಶೆದೇಯೂರನ ಮಗನಾದ ಎಲೀಚೂರನು; |
11
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 46,500 ಮಂದಿ. |
12
|
“ರೂಬೇನ್ ಕುಲದವರ ಪಕ್ಕದಲ್ಲಿ ಸಿಮೆಯೋನ್ ಕುಲದವರು ಪಾಳೆಯ ಹಾಕುವರು. ಸಿಮೆಯೋನ್ ಕುಲದವರ ನಾಯಕನು ಚೂರೀಷದ್ದೈನ ಮಗನಾದ ಶೆಲುಮೀಯೇಲ. |
13
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 59,300 ಮಂದಿ. |
14
|
“ಗಾದ್ ಕುಲವು ಸಹ ರೂಬೇನ್ ಕುಲದ ಪಕ್ಕದಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಗಾದನ ಕುಲದವರ ನಾಯಕನು ರೆಗೂವೇಲನ ಮಗನಾದ ಎಲ್ಯಾಸಾಫ್. |
15
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 45,650 ಮಂದಿ. |
16
|
“ರೂಬೇನ್ ಪಾಳೆಯದಲ್ಲಿರುವ ಎಲ್ಲಾ ತಂಡಗಳಲ್ಲಿರುವ ಒಟ್ಟು ಸೈನಿಕರು 1,51,450 ಮಂದಿ. ಇವರೆಲ್ಲರೂ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ರೂಬೇನ್ ಕುಲವು ಮತ್ತು ಅದರ ನಂತರದಲ್ಲಿರುವ ಎರಡು ಕುಲಗಳವರು ಎರಡನೆಯದಾಗಿ ಹೊರಡುವರು. |
17
|
“ಇಸ್ರೇಲರು ಪ್ರಯಾಣಮಾಡುವಾಗ ಅವರ ನಂತರ ಹೊರಡುವ ತಂಡದವರೇ ಲೇವಿ ಕುಲದವರು. ಇತರ ಪಾಳೆಯಗಳ ಮಧ್ಯೆ ದೇವದರ್ಶನಗುಡಾರವು ಅವರೊಡನೆ ಇರುವುದು. ಅವರು ತಾವು ಪಾಳೆಯ ಮಾಡಿಕೊಂಡ ಕ್ರಮಾನುಸಾರವಾಗಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು. |
18
|
“ಎಫ್ರಾಯೀಮ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳವರು ದೇವದರ್ಶನಗುಡಾರದ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ಎಫ್ರಾಯೀಮ್ ಕುಲದವರ ನಾಯಕನು ಅಮ್ಮೀಹೂದನ ಮಗನಾದ ಎಲೀಷಾಮ. |
19
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 40,500 ಮಂದಿ. |
20
|
“ಮನಸ್ಸೆ ಕುಲದವರು ಎಫ್ರಾಯೀಮ್ ಕುಲದವರ ಪಕ್ಕದಲ್ಲಿ ಪಾಳೆಯ ಹಾಕುವರು. ಮನಸ್ಸೆ ಕುಲದವರ ನಾಯಕನು ಪೆದಾಚೂರನ ಮಗನಾದ ಗಮ್ಲೀಯೇಲ. |
21
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 32,200 ಮಂದಿ. |
22
|
“ಬೆನ್ಯಾಮೀನ್ ಕುಲವು ಸಹ ಎಫ್ರಾಯೀಮ್ ಕುಲದ ಪಕ್ಕದಲ್ಲಿ ಪಾಳೆಯ ಹಾಕುವರು. ಬೆನ್ಯಾಮೀನ್ ಕುಲದವರ ನಾಯಕನು ಗಿದ್ಯೋನನ ಮಗನಾದ ಅಬೀದಾನನು. |
23
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 35,400 ಮಂದಿ. |
24
|
“ಎಫ್ರಾಯೀಮ್ ಪಾಳೆಯದಲ್ಲಿರುವ ಸೈನಿಕರು 1,08,100 ಮಂದಿ. ಇವರೆಲ್ಲರು ತಮ್ಮ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಎಫ್ರಾಯೀಮರ ಕುಲದವರು ಮತ್ತು ಅವರ ನಂತರದಲ್ಲಿರುವ ಎರಡು ಕುಲಗಳವರು ಮೂರನೆಯ ಗುಂಪಾಗಿ ಹೊರಡುವರು. |
25
|
“ದಾನ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಧ್ವಜದೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ದಾನ್ ಕುಲದ ನಾಯಕನು ಅಮ್ಮೀಷದ್ದೈಯನ ಮಗನಾದ ಅಹೀಗೆಜೆರ್. |
26
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 62,700 ಮಂದಿ. |
27
|
ಆಶೇರ್ ಕುಲದವರು ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ಆಶೇರ್ ಕುಲದವರ ನಾಯಕನು ಒಕ್ರಾನನ ಮಗನಾದ ಪಗೀಯೇಲ. |
28
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 41,500 ಮಂದಿ. |
29
|
“ನಫ್ತಾಲಿ ಕುಲದವರು ಸಹ ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ನಫ್ತಾಲಿ ಕುಲದವರ ನಾಯಕನು ಏನಾನನ ಮಗನಾದ ಅಹೀರ. |
30
|
ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 53,400 ಮಂದಿ. |
31
|
“ದಾನ್ ಕುಲದ ಪಾಳೆಯದಲ್ಲಿರುವ ಲೆಕ್ಕಿಸಲ್ಪಟ್ಟ ಸೈನಿಕರು 1,57,600 ಮಂದಿ. ಇಸ್ರೇಲರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡುವಾಗ ದಾನ್ ಕುಲದವರು ಮತ್ತು ಅವರೊಂದಿಗಿರುವ ಎರಡು ಕುಲಗಳವರು ಕೊನೆಯಲ್ಲಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.” |
32
|
ತಮ್ಮ ಕುಟುಂಬಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡ ಇಸ್ರೇಲರು ಇವರೇ. ಅವರ ವಿಭಾಗಗಳಿಗನುಸಾರವಾಗಿ ಪಾಳೆಯದಲ್ಲಿ ಲೆಕ್ಕಿಸಲ್ಪಟ್ಟ ಇಸ್ರೇಲರ ಸೈನಿಕರ ಸಂಖ್ಯೆ 6,03,550 ಮಂದಿ. |
33
|
ಯೆಹೋವನ ಆಜ್ಞೆಯ ಪ್ರಕಾರ ಮೋಶೆಯು ಲೇವಿಯರನ್ನು ಇತರ ಇಸ್ರೇಲರೊಂದಿಗೆ ಲೆಕ್ಕಿಸಲಿಲ್ಲ. |
34
|
ಹೀಗೆ ಯೆಹೋವನು ಮೋಶೆಗೆ ಹೇಳಿದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು. ತಮ್ಮ ಕ್ರಮಕ್ಕನುಸಾರವಾಗಿ ಅವರು ಪಾಳೆಯ ಮಾಡಿಕೊಂಡರು. ನೇಮಕವಾದ ಪ್ರಕಾರವೇ ಪ್ರಯಾಣ ಮಾಡುತ್ತಿದ್ದರು; ಪ್ರತಿಯೊಬ್ಬನು ತನ್ನ ಸ್ವಂತ ಕುಲದೊಡನೆಯೂ ಕುಟುಂಬದೊಡನೆಯೂ ಇದ್ದನು. |
Numbers 2:22 Kannada Language Bible Words basic statistical display
COMING SOON ...