Indian Language Bible Word Collections
Job 20:2
Job Chapters
Job 20 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Job Chapters
Job 20 Verses
1
ಬಳಿಕ ನಾಮಾಥ ದೇಶದ ಚೋಫರನು ಉತ್ತರಕೊಟ್ಟನು:
2
“ಯೋಬನೇ, ನಿನ್ನ ಆಲೋಚನೆಗಳು ಗಲಿಬಿಲಿಗೊಂಡಿವೆ; ಆದ್ದರಿಂದ ನಾನು ನಿನಗೆ ಉತ್ತರ ಕೊಡಲೇಬೇಕು. ನನ್ನ ಆಲೋಚನೆಗಳನ್ನು ನಿನಗೆ ಬೇಗನೆ ತಿಳಿಸಬೇಕು.
3
ನಿನ್ನ ಉತ್ತರಗಳಿಂದ ನೀನು ನಮಗೆ ಅವಮಾನ ಮಾಡಿರುವೆ! ಆದರೆ ನಾನು ಜ್ಞಾನಿಯಾಗಿದ್ದೇನೆ; ನಿನಗೆ ಹೇಗೆ ಉತ್ತರ ಕೊಡಬೇಕೆಂಬುದು ನನಗೆ ಗೊತ್ತಿದೆ.
4
(4-5) “ದುಷ್ಟನ ಆನಂದವು ಬಹುಕಾಲ ಇರುವಂಥದ್ದಲ್ಲ ಎಂಬುದು ನಿನಗೆ ಗೊತ್ತೇ ಇದೆ. ಆದಾಮನನ್ನು ಸೃಷ್ಟಿಸಿದ ಕಾಲದಿಂದಲೂ ಇದು ಸತ್ಯ. ದೇವರನ್ನು ತಿರಸ್ಕರಿಸುವವನು ಅಲ್ಪಕಾಲ ಮಾತ್ರ ಸಂತೋಷದಿಂದಿರುವನು.
6
ದುಷ್ಟನ ಅಹಂಕಾರವು ಆಕಾಶವನ್ನು ತಲುಪಬಹುದು; ಅವನ ತಲೆಯು ಮೋಡಗಳಿಗೆ ತಗುಲಬಹುದು.
7
ಆದರೆ ಅವನು ತನ್ನ ಮಲದ ಹಾಗೆ ನಿತ್ಯನಾಶವಾಗುವನು. ಅವನನ್ನು ಬಲ್ಲವರು, ‘ಅವನೆಲ್ಲಿ?’ ಎಂದು ಕೇಳುವರು.
8
ಅವನು ಕನಸಿನಂತೆ ಹಾರಿಹೋಗುವನು, ಯಾರೂ ಅವನನ್ನು ಮತ್ತೆ ನೋಡುವುದಿಲ್ಲ, ರಾತ್ರಿಯ ಕೆಟ್ಟ ಕನಸಿನಂತೆ ಅವನನ್ನು ಅಟ್ಟಿಬಿಡಲಾಗುವುದು.
9
ಅವನನ್ನು ಕಂಡ ಜನರು, ಅವನನ್ನು ಮತ್ತೆ ನೋಡುವುದಿಲ್ಲ, ಅವನ ಕುಟುಂಬವು ಅವನನ್ನು ಮತ್ತೆಂದಿಗೂ ನೋಡುವುದಿಲ್ಲ.
10
ದುಷ್ಟನು ಬಡವರಿಂದ ಕಸಿದುಕೊಂಡದ್ದನ್ನು ಅವನ ಮಕ್ಕಳು ಕೊಡಬೇಕಾಗುವುದು. ದುಷ್ಟನ ಸ್ವಂತ ಕೈಗಳೇ ಅವನ ಐಶ್ವರ್ಯವನ್ನು ಹಿಂದಕ್ಕೆ ಕೊಡಬೇಕಾಗುವುದು.
11
ಅವನು ಯುವಕನಾಗಿದ್ದಾಗ ಅವನ ಎಲುಬುಗಳು ಬಲವಾಗಿದ್ದವು; ಆದರೆ ದೇಹದ ಉಳಿದ ಅಂಗಗಳೊಡನೆ ಅವೂ ಧೂಳುಪಾಲಾಗುತ್ತವೆ.
12
“ದುಷ್ಟನ ಬಾಯಿಗೆ ಕೆಟ್ಟತನವು ಸಿಹಿಯಾಗಿರುವುದು. ಅವನು ಅದನ್ನು ತನ್ನ ನಾಲಿಗೆಯ ಕೆಳಗೆ ಅಡಗಿಸಿಕೊಳ್ಳುವನು.
13
ಅವನು ಆ ಕೆಟ್ಟತನವನ್ನು ಪಟ್ಟಾಗಿ ಹಿಡಿದುಕೊಂಡು ಸಂತೋಷಪಡುವನು. ಅದನ್ನು ತನ್ನ ಬಾಯಿಯಲ್ಲಿ ಸಿಹಿತಿನಿಸಿನಂತೆ ಇಟ್ಟುಕೊಂಡಿರುವನು.
14
ಆದರೆ ಅದು ಅವನ ಹೊಟ್ಟೆಯಲ್ಲಿ ಹಾವಿನ ವಿಷದ ಹಾಗೆ ಕಹಿಯಾದ ವಿಷವಾಗುವುದು.
15
ದುಷ್ಟನು ಐಶ್ವರ್ಯವನ್ನು ನುಂಗಿಕೊಂಡಿದ್ದರೂ ಅದನ್ನು ಕಕ್ಕಿಬಿಡುವನು. ಹೌದು, ದೇವರು ಅದನ್ನು ದುಷ್ಟನ ಹೊಟ್ಟೆಯೊಳಗಿಂದ ಕಕ್ಕಿಸಿಬಿಡುವನು.
16
ದುಷ್ಟನ ಪಾನೀಯವು ಹಾವಿನ ವಿಷದಂತಿದೆ. ಹಾವಿನ ನಾಲಿಗೆಯು ಅವನನ್ನು ಕೊಲ್ಲುವುದು.
17
ಆ ದುಷ್ಟನು ಹಾಲೂಜೇನೂ ಹರಿಯುವ ನದಿಗಳನ್ನು ನೋಡುವುದೇ ಇಲ್ಲ.
18
ದುಷ್ಟನು ಗಳಿಸಿದ ಲಾಭಗಳು ಬೇರೆಯವರ ಪಾಲಾಗುವುದು. ತನ್ನ ಲಾಭವನ್ನು ಅನುಭವಿಸಲು ಅವನಿಗೆ ಸಾಧ್ಯವಾಗದು.
19
ಯಾಕೆಂದರೆ ದುಷ್ಟನು ಬಡವರನ್ನು ಕಡೆಗಣಿಸಿದ್ದಾನೆ; ಬೇರೊಬ್ಬನು ಕಟ್ಟಿದ ಮನೆಗಳನ್ನು ಕಿತ್ತುಕೊಂಡಿದ್ದಾನೆ.
20
“ಅವನಿಗೆ ತೃಪ್ತಿಯೇ ಇಲ್ಲ. ಅವನ ಐಶ್ವರ್ಯವು ಅವನನ್ನು ರಕ್ಷಿಸಲಾರದು.
21
ಅವನು ತಿಂದ ಮೇಲೆ ಏನೂ ಉಳಿದುರುವುದಿಲ್ಲ. ಅವನ ಅಭಿವೃದ್ಧಿಯು ನಿಂತುಹೋಗುವುದು.
22
ದುಷ್ಟನು ಸಮೃದ್ಧಿಯಿಂದಿರುವಾಗಲೇ ಇಕ್ಕಟ್ಟಿನಿಂದ ಕುಗ್ಗಿಸಲ್ಪಡುವನು; ಅವನ ಕಷ್ಟಗಳು ಅವನ ಮೇಲೆ ಬೀಳುವವು!
23
ದುಷ್ಟನು ತನ್ನ ಇಷ್ಟಾನುಸಾರ ತಿಂದಮೇಲೆ ದೇವರು ತನ್ನ ದಹಿಸುವ ಕೋಪವನ್ನು ತೋರಿ ಅವನ ಮೇಲೆ ದಂಡನೆಯ ಮಳೆ ಸುರಿಸುವನು.
24
ದುಷ್ಟನು ಕಬ್ಬಿಣದ ಖಡ್ಗದಿಂದ ಓಡಿಹೋಗುವನು; ಆದರೆ ತಾಮ್ರದ ಬಾಣವು ಅವನನ್ನು ಹೊಡೆದುರುಳಿಸುವುದು.
25
ಅವನು ಅದನ್ನು ಕೀಳಲು ಅದು ಬೆನ್ನಿನಿಂದ ಬರುವುದು; ಥಳಥಳಿಸುವ ಬಾಣದ ತುದಿಯು ಪಿತ್ತಕೋಶದೊಳಗಿಂದ ಬರುವುದು. ಅವನು ಅಪಾಯದಿಂದ ದಿಗ್ಭ್ರಾಂತನಾಗುವನು.
26
ಅವನ ಭಂಡಾರಗಳೆಲ್ಲಾ ನಾಶವಾಗುತ್ತವೆ. ಯಾರೂ ಹೊತ್ತಿಸದ ಬೆಂಕಿಯಿಂದ ಅವನು ನಾಶವಾಗುವನು. ಅವನ ಗುಡಾರದಲ್ಲಿ ಉಳಿದಿರುವುದೆಲ್ಲವನ್ನು ಬೆಂಕಿಯು ನಾಶಮಾಡುವುದು.
27
ದುಷ್ಟನು ಅಪರಾಧಿಯೆಂದು ಪರಲೋಕವು ನಿರೂಪಿಸುತ್ತದೆ. ಭೂಮಿಯು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತದೆ.
28
ಅವನ ಮನೆಯಲ್ಲಿರುವ ಪ್ರತಿಯೊಂದನ್ನು ದೇವರ ಕೋಪದ ಪ್ರವಾಹವು ಕೊಚ್ಚಿಕೊಂಡುಹೋಗುವುದು.
29
ದುಷ್ಟರಿಗೆ ದೇವರು ಮಾಡುವುದು ಇದನ್ನೇ. ಅವರಿಗೆ ದೇವರು ಕೊಡುವುದೂ ಇದನ್ನೇ.”