1
|
ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ತಂದು ಅದಕ್ಕಾಗಿ ದಾವೀದನು ನಿರ್ಮಿಸಿದ್ದ ಗುಡಾರದೊಳಗೆ ಇಟ್ಟರು. ಅನಂತರ ಸರ್ವಾಂಗಹೋಮ ಮತ್ತು ಸಮಾಧಾನ ಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸಿದರು. |
2
|
ದಾವೀದನು ಯಜ್ಞಗಳನ್ನು ಸಮರ್ಪಿಸಿದ ಬಳಿಕ ಯೆಹೋವನ ಹೆಸರಿನಲ್ಲಿ ಇಸ್ರೇಲರನ್ನು ಆಶೀರ್ವದಿಸಿದನು. |
3
|
ಅನಂತರ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಇಸ್ರೇಲಿನ ಗಂಡಸಿಗೆ ಮತ್ತು ಹೆಂಗಸಿಗೆ ಒಂದು ರೊಟ್ಟಿಯನ್ನೂ ಸ್ವಲ್ಪ ಖರ್ಜೂರವನ್ನೂ ಒಣದ್ರಾಕ್ಷಿಯನ್ನೂ ಕೊಟ್ಟನು. |
4
|
ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು. |
5
|
ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು. |
6
|
ಬೆನಾಯನೂ ಯೆಹಜೀಯೇಲನೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಬಳಿಯಲ್ಲಿ ತುತ್ತೂರಿಗಳನ್ನು ಯಾವಾಗಲೂ ಊದುವ ಯಾಜಕರಾಗಿದ್ದರು. |
7
|
ಈ ವ್ಯವಸ್ಥೆಯನ್ನು ದಾವೀದನು ಪ್ರಥಮ ಬಾರಿಗೆ ಆಸಾಫನಿಗೂ ಅವನ ಸೋದರರಿಗೂ ಯೆಹೋವನ ಸ್ತೋತ್ರವನ್ನು ಹಾಡುವ ಕೆಲಸಕ್ಕಾಗಿ ನೇಮಿಸಿದನು. |
8
|
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ. |
9
|
ಯೆಹೋವನಿಗೆ ಗಾನ ಮಾಡಿರಿ, ಆತನಿಗೆ ಸ್ತುತಿಗೀತೆ ಹಾಡಿರಿ. ಆತನ ಅದ್ಭುತಕಾರ್ಯಗಳನ್ನು ಧ್ಯಾನಿಸಿರಿ. |
10
|
ಯೆಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ; ಆತನ ದರ್ಶನಕ್ಕಾಗಿ ಬರುವವರೇ, ಸಂತೋಷಪಡಿರಿ. |
11
|
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ; ಯಾವಾಗಲೂ ಆತನ ದರ್ಶನವನ್ನು ಅಪೇಕ್ಷಿಸಿರಿ. |
12
|
ಆತನ ಸೇವಕನಾದ ಇಸ್ರೇಲನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ಸಂತತಿಯವರೇ, |
13
|
ಆತನ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ ನ್ಯಾಯನಿರ್ಣಯಗಳನ್ನೂ ಜ್ಞಾಪಿಸಿಕೊಳ್ಳಿರಿ. |
14
|
ಯೆಹೋವನೇ ನಮ್ಮ ದೇವರು. ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ. |
15
|
ಯೆಹೋವನ ಒಡಂಬಡಿಕೆಯನ್ನು ಸದಾಕಾಲ ನೆನಪಿನಲ್ಲಿಡಿರಿ. ಆತನು ಆ ಆಜ್ಞೆಗಳನ್ನು ಸಾವಿರ ತಲೆಮಾರುಗಳಿಗೆ ಕೊಟ್ಟನು. |
16
|
ಯೆಹೋವನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿರಿ. ಆತನು ಇಸಾಕನಿಗೆ ಮಾಡಿದ ವಾಗ್ದಾನವನ್ನು ಜ್ಞಾಪಕಕ್ಕೆ ತನ್ನಿರಿ. |
17
|
ಯೆಹೋವನು ಯಾಕೋಬನಿಗೆ ಕಟ್ಟಳೆಗಳನ್ನು ಅನುಗ್ರಹಿಸಿದನು. ಅದು ಇಸ್ರೇಲರೊಂದಿಗಿನ ನಿರಂತರವಾದ ಒಡಂಬಡಿಕೆ. |
18
|
ಯೆಹೋವನು ಇಸ್ರೇಲರಿಗೆ, “ನಾನು ನಿಮಗೆ ಕಾನಾನ್ ದೇಶವನ್ನು ಕೊಡುವೆನು. ಆ ವಾಗ್ದತ್ತ ದೇಶವು ನಿಮ್ಮದಾಗುವುದು” ಎಂದು ಹೇಳಿದನು. |
19
|
ಆತನು “ನಿಮಗೆ ಈ ದೇಶವನ್ನು ಕೊಡುವೆನು; ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವುದು” ಎಂದು ಹೇಳಿದನು. |
20
|
ಅವರು ಒಂದು ದೇಶದಿಂದ ಇನ್ನೊಂದಕ್ಕೂ ಒಂದು ರಾಜ್ಯದಿಂದ ಇನ್ನೊಂದಕ್ಕೂ ಹೋದರು. |
21
|
ಆದರೆ ಅವರಿಗೆ ಕೇಡುಮಾಡಲು ಯೆಹೋವನು ಯಾರಿಗೂ ಅವಕಾಶಕೊಡಲಿಲ್ಲ. ಅವರನ್ನು ಬಾಧಿಸದಂತೆ ಆತನು ಅರಸರುಗಳಿಗೆ ಎಚ್ಚರಿಕೆ ಕೊಟ್ಟನು. |
22
|
ಯೆಹೋವನು ಆ ರಾಜರಿಗೆ, “ನಾನು ಆರಿಸಿಕೊಂಡ ಜನಾಂಗಕ್ಕೆ ಉಪದ್ರವ ಕೊಡಬೇಡಿ; ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” ಎಂದು ಹೇಳಿದನು. |
23
|
ಭೂನಿವಾಸಿಗಳೇ, ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ; ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ. |
24
|
ಯೆಹೋವನ ಮಹಿಮೆಯನ್ನು ಜನಾಂಗಗಳಲ್ಲಿ ಪ್ರಕಟಿಸಿರಿ. ಸರ್ವಜನರಲ್ಲಿ ಆತನ ಅದ್ಭುತಕಾರ್ಯಗಳನ್ನು ಪ್ರಸಿದ್ಧಪಡಿಸಿರಿ. |
25
|
ಯೆಹೋವನು ದೊಡ್ಡವನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ. ಎಲ್ಲಾ ದೇವರುಗಳಲ್ಲಿ ಯೆಹೋವನೇ ಭಯಂಕರನು. |
26
|
ಯಾಕಂದರೆ ಜನಾಂಗಗಳಲ್ಲಿರುವ ಬೇರೆ ದೇವರುಗಳೆಲ್ಲಾ ಜಡಮೂರ್ತಿಗಳೇ. ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು. |
27
|
ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ ಆತನ ಪವಿತ್ರಾಲಯದಲ್ಲಿ ಬಲವೂ ಸಂತೋಷವೂ ಇವೆ. |
28
|
ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ ಎಂದು ಹೇಳಿ ಆತನನ್ನು ಘನಪಡಿಸಿರಿ. |
29
|
ಯೆಹೋವನ ಮಹಿಮೆಯನ್ನು ಕೊಂಡಾಡಿರಿ; ಆತನ ಹೆಸರಿಗೆ ಘನತೆಯನ್ನು ಸಲ್ಲಿಸಿರಿ. ನಿಮ್ಮ ಕಾಣಿಕೆಗಳನ್ನು ಆತನ ಬಳಿಗೆ ತನ್ನಿರಿ; ಆತನ ಪರಿಶುದ್ಧ ನಾಮವನ್ನು ಆರಾಧಿಸಿರಿ. |
30
|
ಯೆಹೋವನ ಮುಂದೆ ಭೂಲೋಕವೆಲ್ಲಾ ಭಯದಿಂದ ನಡುಗುವುದು! ಆದರೆ ಆತನು ಅದನ್ನು ಬಲವಾದ ಅಸ್ತಿವಾರಗಳಲ್ಲಿ ನಿರ್ಮಿಸಿದ್ದರಿಂದ ಅದು ಕದಲದು. |
31
|
ಭೂಮ್ಯಾಕಾಶಗಳು ಹರ್ಷಿಸಲಿ; “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ” ಎಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ. |
32
|
ಸಮುದ್ರವೂ ಅದರೊಳಗಿರುವದೆಲ್ಲವೂ ಆರ್ಭಟಿಸಲಿ, ಹೊಲಗದ್ದೆಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಲಿ. |
33
|
ಯೆಹೋವನ ಸನ್ನಿಧಿಯಲ್ಲಿ ಅಡವಿಯ ಮರಗಳು ಸಂತೋಷದಿಂದ ಗಾನಮಾಡಲಿ. ಯಾಕೆಂದರೆ ಆತನು ಬರುತ್ತಿದ್ದಾನೆ. ಲೋಕಕ್ಕೆ ನ್ಯಾಯತೀರಿಸಲು ಬರುತ್ತಿದ್ದಾನೆ. |
34
|
ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನು ಒಳ್ಳೆಯವನು. ಆತನ ಪ್ರೀತಿಯು ಸದಾಕಾಲಕ್ಕೂ ಇರುವದು. |
35
|
“ರಕ್ಷಕನಾದ ಯೆಹೋವನೇ, ನಮ್ಮನ್ನು ರಕ್ಷಿಸು; ನಮ್ಮನ್ನು ಒಂದುಗೂಡಿಸು; ಅನ್ಯಜನಾಂಗಗಳಿಂದ ನಮ್ಮನ್ನು ರಕ್ಷಿಸು. ಆಗ ನಾವು ನಿನ್ನ ಪರಿಶುದ್ಧ ನಾಮವನ್ನು ಕೀರ್ತಿಸುವೆವು. ನಮ್ಮ ಹಾಡುಗಳಿಂದ ನಿನ್ನನ್ನು ಘನಪಡಿಸುವೆವು” ಎಂದು ಆತನಿಗೆ ಹೇಳಿರಿ. |
36
|
ಇಸ್ರೇಲರ ದೇವರಾದ ಯೆಹೋವನು ಸದಾಕಾಲವೂ ಘನಹೊಂದಲಿ; ನಿರಂತರವೂ ಕೊಂಡಾಡಲ್ಪಡಲಿ! ಇಸ್ರೇಲರೆಲ್ಲರೂ ಯೆಹೋವನನ್ನು ಸ್ತುತಿಸಿ “ಆಮೆನ್” ಅಂದರು. |
37
|
ಆಗ ದಾವೀದನು ಆಸಾಫನನ್ನೂ ಅವನ ಸಹೋದರರನ್ನೂ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಪ್ರತಿನಿತ್ಯ ಸೇವೆಮಾಡಲು ಅಲ್ಲಿರಿಸಿದನು. |
38
|
ಅವರೊಂದಿಗೆ ಸೇವೆಮಾಡಲು ಓಬೇದೆದೋಮನನ್ನೂ ಇತರ ಅರವತ್ತೆಂಟು ಮಂದಿ ಲೇವಿಯರನ್ನೂ ಅಲ್ಲಿರಿಸಿದನು. ಓಬೇದೆದೋಮ್ ಮತ್ತು ಹೋಸ ಕಾವಲುಗಾರರಾಗಿದ್ದರು. ಓಬೇದೆದೋಮನು ಯೆದುತೂನನ ಮಗನಾಗಿದ್ದನು. |
39
|
ಗಿಬ್ಯೋನಿನ ಉನ್ನತಸ್ಥಳದಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ದಾವೀದನು ಚಾದೋಕನನ್ನು ಮತ್ತು ಇತರ ಯಾಜಕರನ್ನು ನೇಮಿಸಿದನು. |
40
|
ಪ್ರತಿ ಮುಂಜಾನೆ ಮತ್ತು ಸಂಧ್ಯಾಕಾಲಗಳಲ್ಲಿ ಚಾದೋಕನು ಮತ್ತು ಇತರ ಯಾಜಕರು ಸರ್ವಾಂಗಹೋಮವನ್ನು ಯಜ್ಞವೇದಿಕೆಯ ಮೇಲೆ ಸಮರ್ಪಿಸುತ್ತಿದ್ದರು. ಇಸ್ರೇಲರಿಗೆ ಕೊಡಲ್ಪಟ್ಟಿದ್ದ ಕಟ್ಟಳೆಗಳಿಗನುಸಾರವಾಗಿ ಅವರು ಮಾಡಿದರು. |
41
|
[This verse may not be a part of this translation] |
42
|
[This verse may not be a part of this translation] |
43
|
ಆ ಕಾರ್ಯವು ಮುಗಿದ ಬಳಿಕ ಎಲ್ಲಾ ಇಸ್ರೇಲರು ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸಲು ತನ್ನ ಮನೆಗೆ ಹೋದನು. |
1-Chronicles 16:1 Kannada Language Bible Words basic statistical display
COMING SOON ...