Bible Languages

Indian Language Bible Word Collections

Bible Versions

Books

1 Chronicles Chapters

1 Chronicles 21 Verses

Bible Versions

Books

1 Chronicles Chapters

1 Chronicles 21 Verses

1 ಸೈತಾನನು ಇಸ್ರೇಲರಿಗೆ ವಿರುದ್ಧವಾಗಿದ್ದನು. ಅವನು ಇಸ್ರೇಲರನ್ನು ಲೆಕ್ಕಿಸುವಂತೆ ದಾವೀದನನ್ನು ಪ್ರೇರೇಪಿಸಿದನು.
2 ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು.
3 ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು.
4 ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು.
5 ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು.
6 ಯೋವಾಬನು ಲೇವಿ ಕುಲದವರನ್ನು ಮತ್ತು ಬೆನ್ಯಾಮೀನನ ಕುಲದವರನ್ನು ಜನಗಣತಿಯಲ್ಲಿ ಸೇರಿಸಲಿಲ್ಲ; ಯಾಕೆಂದರೆ ದಾವೀದನ ಆಜ್ಞೆಯು ಅವನಿಗೆ ಸರಿಕಾಣಲಿಲ್ಲ;
7 ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು.
8 ದಾವೀದನು ‘ಟರು. 12ಯೋವಾಬನು ಅಭರಟರು. 12ಯೋವಾಬನು ಅಭನು. 11ಉಳಿದ ಸೈನಿಕರನ್ನು ಅಬ್ಷೈನಯಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾ ದೇವರಿಗೆ, “ನಾನು ಕೇವಲ ಹುಚ್ಚು ಕೆಲಸ ಮಾಡಿದೆನು. ಇಸ್ರೇಲರ ಜನಗಣತಿ ಮಾಡಿ ಪಾಪ ಮಾಡಿದೆನು. ಈಗ ನಿನ್ನ ಸೇವಕನಾದ ನನ್ನ ಪಾಪವನ್ನು ನಿರ್ಮೂಲ ಮಾಡು” ಎಂದು ಬೇಡಿಕೊಂಡನು.
9 [This verse may not be a part of this translation]
10 [This verse may not be a part of this translation]
11 [This verse may not be a part of this translation]
12 [This verse may not be a part of this translation]
13 ಆಗ ಗಾದನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನೆ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಬಾರದು. ಯೆಹೋವನು ಕರುಣೆಯುಳ್ಳವನು. ಆದುದರಿಂದ ಆತನೇ ನಿರ್ಧರಿಸಲಿ.”
14 ಆಗ ಯೆಹೋವನು ಇಸ್ರೇಲರ ಮೇಲೆ ಬಹು ಘೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು.
15 ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು.
16 ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬೊಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು.
17 ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.
18 ಆಗ ಯೆಹೋವನ ದೂತನು ಗಾದನೊಂದಿಗೆ ಮಾತನಾಡಿ, “ದಾವೀದನು ಒಂದು ಯಜ್ಞವೇದಿಕೆಯನ್ನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ಕಟ್ಟಿ ಯೆಹೋವನನ್ನು ಆರಾಧಿಸಲಿ” ಎಂದು ಹೇಳಿದನು.
19 ಗಾದನು ದಾವೀದನಿಗೆ ಇದನ್ನು ತಿಳಿಸಿದ ಕೂಡಲೇ ಅವನು ಒರ್ನಾನನ ಕಣಕ್ಕೆ ಹೋದನು.
20 ಒರ್ನಾನನು ಗೋಧಿಯನ್ನು ತನ್ನ ಕಣದಲ್ಲಿ ಬಡಿಯುತ್ತಾ ತಿರುಗಿನೋಡಿದಾಗ ದೇವದೂತನನ್ನು ಕಂಡನು. ಅವನ ನಾಲ್ಕು ಮಂದಿ ಗಂಡುಮಕ್ಕಳು ಓಡಿಹೋಗಿ ಅವಿತುಕೊಂಡರು.
21 ದಾವೀದನು ಒರ್ನಾನನ ಬಳಿಗೆ ಬೆಟ್ಟ ಹತ್ತಿಕೊಂಡು ಬರುತ್ತಿರುವುದನ್ನು ಒರ್ನಾನನು ಕಂಡು ಅವನನ್ನು ಎದುರುಗೊಂಡು ಬಗ್ಗಿ ನಮಸ್ಕರಿಸಿದನು.
22 ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು.
23 ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗ ಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು.
24 ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.
25 ದಾವೀದನು ಒರ್ನಾನನಿಗೆ ಹದಿನೈದು ಪೌಂಡ್ ಬಂಗಾರವನ್ನು ಕೊಟ್ಟು ಆ ಸ್ಥಳವನ್ನು ಕೊಂಡುಕೊಂಡನು.
26 ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಪರಲೋಕದಿಂದ ಬೆಂಕಿಯನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿದುಬಂದಿತು.
27 ಆಗ ದೇವರು ತನ್ನ ದೂತನಿಗೆ ಖಡ್ಗವನ್ನು ಒರೆಯಲ್ಲಿ ಹಾಕಲು ಆಜ್ಞಾಪಿಸಿದನು.
28 ದೇವರು ತನ್ನ ಪ್ರಾರ್ಥನೆಯನ್ನು ಕೇಳಿ ಉತ್ತರ ಕೊಟ್ಟದ್ದನ್ನು ಕಂಡು ದಾವೀದನು ಆತನಿಗೆ ಯಜ್ಞಗಳನ್ನು ಸಮರ್ಪಿಸಿದನು.
29 ಆಗ ಪವಿತ್ರ ಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ಯೋನ್ ಪಟ್ಟಣದ ಎತ್ತರದ ಪ್ರದೇಶದಲ್ಲಿತ್ತು. ಇಸ್ರೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದ್ದನು.
30 ದಾವೀದನು ದೇವರ ಸಂಗಡ ಮಾತನಾಡಲು ಭಯಪಟ್ಟದ್ದರಿಂದ ದೇವದರ್ಶನ ಗುಡಾರಕ್ಕೆ ಹೋಗಲಿಲ್ಲ. ಅವನು ಖಡ್ಗಧಾರಿಯಾಗಿದ್ದ ದೇವದೂತನಿಗೂ ಭಯಪಟ್ಟನು.

1-Chronicles 21:1 Kannada Language Bible Words basic statistical display

COMING SOON ...

×

Alert

×