ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ--
ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.
ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು.
ಅವನು ಗಟ್ಟಿಯಾಗಿ ಕೂಗಿ--ಮರವನ್ನು ಕಡಿದು ಅದರ ಕೊಂಬೆಗಳನ್ನು ಕತ್ತರಿಸಿ ಅದರ ಎಲೆ ಗಳನ್ನು ಉದುರಿಸಿ ಅದರ ಫಲವನ್ನು ಚದರಿಸಿ ಮೃಗಗಳು ಅದರ ಕೆಳಗಿನಿಂದಲೂ ಪಕ್ಷಿಗಳು ಅದರ ಕೊಂಬೆ ಗಳಿಂದಲೂ ಹೋಗಿ ಬಿಡಲಿ.
ಆದಾಗ್ಯೂ ಅದರ ಬೇರಿನ ಮೋಟನ್ನು ಕಬ್ಬಿಣ, ಹಿತ್ತಾಳೆಗಳ ಕಟ್ಟುಳ್ಳದ್ದ ನ್ನಾಗಿ ಮಾಡಿ ಭೂಮಿಯಲ್ಲಿಯೂ ಬಯಲಿನ ಎಳೆಯ ಹುಲ್ಲಿನಲ್ಲಿಯೂ ಬಿಡಿರಿ; ಅದು ಆಕಾಶದ ಮಂಜಿನಿಂದ ತೇವವಾಗಲಿ; ಅದರ ಪಾಲು ಮೃಗಗಳ ಸಂಗಡ ಭೂಮಿಯ ಹುಲ್ಲಿನಲ್ಲಿರಲಿ.
ಈ ವಿಷಯವು ಪಾಲಕರ ಕಟ್ಟಡದಿಂದಲೂ ಈ ಸಂಗತಿಯು ಪರಿಶುದ್ಧರ ಮಾತಿನಿಂದಲೂ ಉಂಟಾಯಿತು; ಮಹೋ ನ್ನತನು ಮನುಷ್ಯರ ರಾಜ್ಯದಲ್ಲಿ ಆಳುತ್ತಾನೆಂದೂ ತನ್ನ ಮನಸ್ಸಿಗೆ ಸರಿಯಾದವರಿಗೆ ಅದನ್ನು ಕೊಡುತ್ತಾನೆಂದೂ ಮನುಷ್ಯರಲ್ಲಿ ನೀಚರಾದವರನ್ನು ಅದರ ಮೇಲೆ ನೇಮಿಸುತ್ತಾನೆಂದೂ ಜೀವಂತರಿಗೆ ತಿಳಿಯಬೇಕೆಂದೇ ಸಾರಿದನು.
ಈ ಕನಸನ್ನು ನೆಬೂಕದ್ನೆಚ್ಚರನೆಂಬ ಅರಸನಾದ ನಾನು ಕಂಡಿದ್ದೇನೆ. ಈಗ ಬೆಲ್ತೆಶಚ್ಚರ ನೆಂಬ ನೀನು ಅದರ ಅರ್ಥವನ್ನು ಹೇಳು. ನನ್ನ ರಾಜ್ಯದಲ್ಲಿರುವ ಸಕಲ ಜ್ಞಾನಿಗಳು ಅದರ ಅರ್ಥವನ್ನು ನನಗೆ ಹೇಳಲು ಶಕ್ತರಾದವರಲ್ಲ. ಆದರೆ ನಿನ್ನಲ್ಲಿ ಪರಿ ಶುದ್ಧ ದೇವರುಗಳ ಆತ್ಮವು ಇರುವದರಿಂದ ನೀನು ಹೇಳಲು ಸಾಧ್ಯವಾಯಿತು.
ಆಗ ಬೆಲ್ತೆಶಚ್ಚರನೆಂಬ ಹೆಸರುಳ್ಳ ದಾನಿಯೇಲನು ಒಂದು ಗಳಿಗೆ ವಿಸ್ಮಿತನಾಗಿ ತನ್ನ ಆಲೋಚನೆಗಳಲ್ಲಿ ಕಳವಳಗೊಂಡನು. ಆಗ ಅರಸನು ಮಾತನಾಡಿ-- ಬೆಲ್ತೆಶಚ್ಚರನೇ, ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಕಳವಳಪಡಿಸದಿರಲಿ ಅಂದನು. ಆಗ ಬೆಲ್ತೆಶ ಚ್ಚರನು ಪ್ರತ್ಯುತ್ತರವಾಗಿ--ನನ್ನ ಒಡೆಯನೇ, ಆ ಕನಸು ನಿನ್ನ ವೈರಿಗಳಿಗೂ ಅದರ ಅರ್ಥವು ನಿನ್ನ ಶತ್ರುಗಳಿಗೂ ಆಗಲಿ.
ಅದರ ಎಲೆಗಳು ಅಂದವಾಗಿದ್ದವು, ಫಲವು ಬಹಳವಾಗಿತ್ತು, ಅದರಲ್ಲಿ ಎಲ್ಲರಿಗೂ ಆಹಾರ ಇತ್ತು; ಅದರ ಕೆಳಗೆ ಬಯಲಿನ ಮೃಗಗಳು ವಾಸಮಾಡಿದ್ದವು; ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ನಿವಾಸಮಾಡಿದ್ದವು.
ಆಗ ಪಾಲಕನು ಮತ್ತು ಪರಿಶುದ್ಧನಾದ ಒಬ್ಬನು ಪರಲೋಕದಿಂದ ಇಳಿದು ಬಂದು--ಮರವನ್ನು ಕಡಿದು ನಾಶಮಾಡಿರಿ; ಆದರೆ ಅದರ ಬೇರಿನ ಮೋಟನ್ನು ಕಬ್ಬಿಣ ಮತ್ತು ಕಂಚುಗಳ ಕಟ್ಟುಳ್ಳದ್ದಾಗಿ ಭೂಮಿಯಲ್ಲಿಯೂ ಬಯಲಿನ ಎಳೇ ಹುಲ್ಲಿನಲ್ಲಿಯೂ ಬಿಡಿರಿ. ಅದು ಆಕಾಶದ ಮಂಜಿನಿಂದ ತೇವವಾಗಲಿ; ಏಳು ಕಾಲಗಳು ಕಳೆಯುವ ತನಕ ಅದರ ಪಾಲು ಕಾಡು ಮೃಗಗಳ ಸಹವಾಸದ ಗತಿಯಂತೆ ಬರಲಿ ಎಂದು ಸಾರುವದನ್ನು ಅರಸನಾದ ನೀನು ನೋಡಿದೆಯಲ್ಲಾ.
ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.
ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು.
ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.
ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು.
ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು.
ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.
ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.