1
|
ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೊನೀಕದವರ ಸಭೆಗೆ ಪೌಲ ಸಿಲ್ವಾನ ತಿಮೊಥೆ ಯರು ಬರೆಯುವದೇನಂದರೆ-- |
2
|
ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. |
3
|
ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ. |
4
|
ಹೀಗಿರುವದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳನ್ನು ನೆನಸಿ ನಿಮ್ಮ ವಿಷಯವಾಗಿ ದೇವರ ಸಭೆಗಳಲ್ಲಿ ನಾವೇ ಹೆಚ್ಚಳಪಡುತ್ತೇವೆ. |
5
|
ನೀವು ಯಾವದಕ್ಕಾಗಿ ಶ್ರಮೆಪಡುತ್ತೀರೋ ದೇವರ ಆ ರಾಜ್ಯಕ್ಕೆ ನೀವು ಯೋಗ್ಯರೆಂದು ಎಣಿಸಲ್ಪಡುವಂತೆ ದೇವರ ನೀತಿಯುಳ್ಳ ತೀರ್ಪಿಗೆ ಅದು ಸ್ಪಷ್ಟವಾದ ನಿದರ್ಶನವಾಗಿದೆ. |
6
|
ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟಪಡಿಸುವದೂ |
7
|
ರ್ತನಾದ ಯೇಸು ತನ್ನ ಬಲವುಳ್ಳ ದೂತರೊಂದಿಗೆ ಪರಲೋಕ ದಿಂದ ಪ್ರತ್ಯಕ್ಷನಾಗುವಾಗ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನ ಮಾಡುವದೂ |
8
|
ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ; |
9
|
ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು. |
10
|
ಆ ದಿನದಲ್ಲಿ ಆತನು ತನ್ನ ಪರಿಶುದ್ಧರಲ್ಲಿ ಮಹಿಮೆ ಹೊಂದುವಂತೆಯೂ ನಂಬುವವರೆಲ್ಲರಲ್ಲಿ ಮೆಚ್ಚಿಕೆ ಹೊಂದುವಂತೆಯೂ ಬರುವನು. (ಯಾಕಂದರೆ ನೀವು ನಮ್ಮ ಸಾಕ್ಷಿಯನ್ನು ನಂಬಿದಿರಿ). |
11
|
ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ. |
12
|
ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗನುಸಾರವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವದು, ಆತನಲ್ಲಿ ನೀವೂ ಮಹಿಮೆ ಹೊಂದುವಿರಿ. |
2-Thessalonians 1:11 Kannada Language Bible Words basic statistical display
COMING SOON ...