1
|
ಮೋವಾಬಿಗೆ ವಿರೋಧವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅಯ್ಯೋ ನೆಬೋ ಸೂರೆಯಾಯಿತು; ಕಿರ್ಯಾತಯಿಮು ನಾಚಿಕೆಹೊಂದಿ ಹಿಡಿಯಲ್ಪಟ್ಟಿತು; ಮಿಸ್ಗಾಬ್ ನಾಚಿಕೆಹೊಂದಿ ಹೆದರಿಕೊಂಡಿತು. |
2
|
ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು. |
3
|
ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶನವು, ಹೊರಡುವದು. |
4
|
ಮೋವಾಬು ನಾಶವಾಯಿತು; ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು. |
5
|
ಲೂಹೀತ್ ದಿಣ್ಣೆಯನ್ನು ಅಳುತ್ತಲೇ ಹತ್ತುವರು; ಹೊರೊನಯಿಮಿನ ಇಳಿಜಾರಿನಲ್ಲಿ ಶತ್ರುಗಳು ನಾಶನದ ಶಬ್ದವನ್ನು ಕೇಳಿದ್ದಾರೆ. |
6
|
ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಅರಣ್ಯದಲ್ಲಿರುವ ಒಣಗಿಡದ ಹಾಗಿರ್ರಿ. |
7
|
ನಿನ್ನ ಕ್ರಿಯೆಗಳಲ್ಲಿಯೂ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟದ್ದ ರಿಂದ ನೀನು ಸಹ ಹಿಡಿಯಲ್ಪಡುವಿ; ಕೆಮೋಷನು, ಅವನ ಯಾಜಕರು, ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು. |
8
|
ಒಂದೊಂದು ಪಟ್ಟಣದ ಮೇಲೆ ಸೂರೆಗೊಳ್ಳುವವನು ಬರುವನು; ಕರ್ತನು ಹೇಳಿದ ಹಾಗೆಯೇ ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳ ಲಾರದು, ತಗ್ಗೂ ನಾಶವಾಗುವದು; ಬೈಲು ಹಾಳಾಗುವದು. |
9
|
ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಅದರ ಪಟ್ಟಣಗಳು ಹಾಳಾಗು ವವು; ಅವುಗಳಲ್ಲಿ ನಿವಾಸಿಗಳಿರುವದಿಲ್ಲ. |
10
|
ಕರ್ತನ ಕೆಲಸವನ್ನು ಮೋಸವಾಗಿ ನಡಿಸುವವನು ಶಾಪಗ್ರಸ್ತ ನಾಗಲಿ; ರಕ್ತದಿಂದ ತನ್ನ ಕತ್ತಿಯನ್ನು ಹಿಂತೆಗೆಯುವವನಿಗೆ ಶಾಪವಾಗಲಿ. |
11
|
ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯ ಲ್ಪಡಲಿಲ್ಲ; ಸೆರೆಗೆ ಹೋಗಲಿಲ್ಲ; ಆದದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ. |
12
|
ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು, ಅದರ ಪಾತ್ರೆಗಳನ್ನು ಬರಿದುಮಾಡಿ ತಮ್ಮ ಬುದ್ದಲಿಗಳನ್ನು ಒಡೆಯುವರು. |
13
|
ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ ಹಾಗೆಯೇ ಮೋವಾಬು ಕೇಮೋ ಷನ ವಿಷಯ ನಾಚಿಕೆಪಡುವದು. |
14
|
ನಾವು ಪರಾಕ್ರಮ ಶಾಲಿಗಳೂ ಯುದ್ಧಕ್ಕೆ ಬಲಿಷ್ಠರೂ ಎಂದು ನೀವು ಹೇಳುವದು ಹೇಗೆ? |
15
|
ಮೋವಾಬು ಸೂರೆ ಯಾಯಿತು, ಅದರ ಪಟ್ಟಣಗಳು ಏರಿ ಹೋದವು, ಅದರ ಆಯಲ್ಪಟ್ಟ ಯೌವನಸ್ಥರು ಕೊಲೆಗೆ ಇಳಿದು ಹೋದರು ಎಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ. |
16
|
ಮೋವಾಬಿನ ಆಪತ್ತು ಬರುವದಕ್ಕೆ ಸವಿಾಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ. |
17
|
ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ. |
18
|
ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ದಾಹವಾಗಿ ಕೂತುಕೋ, ಮೋವಾಬನ್ನು ಸೂರೆ ಮಾಡುವವನು ನಿನ್ನ ಮೇಲೆ ಬರುವನು, ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿ ಬಿಡುವನು. |
19
|
ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿಹೋಗು ವವನನ್ನೂ ತಪ್ಪಿಸಿಕೊಳ್ಳುವವನನ್ನೂ ಕೇಳು, ಏನಾಯಿ ತೆಂದು ಹೇಳು. |
20
|
ಮೋವಾಬು ನಾಚಿಕೆಪಡುತ್ತದೆ; ಮುರಿದು ಹೋಯಿತು; ಗೋಳಾಡಿರಿ, ಕೂಗಿರಿ; ಮೋವಾಬು ಸೂರೆಯಾಯಿತೆಂದು ಅರ್ನೋನಿನಲ್ಲಿ ಅದನ್ನು ತಿಳಿಸಿರಿ. |
21
|
ಇದಲ್ಲದೆ ಬೈಲು ಸೀಮೆಯ ಮೇಲೆ ನ್ಯಾಯತೀರ್ವಿಕೆ ಬಂತು; ಹೋಲೋನಿನ ಮೇಲೆಯೂ ಯಾಚದ ಮೇಲೆಯೂ ಮೆಫಾತ್ನ ಮೇಲೆಯೂ |
22
|
ದೀಬೋನಿನ ಮೇಲೆಯೂ ನೇಬೋನಿನ ಮೇಲೆಯೂ ಬೇತ್ದಿಬ್ಲಾತಯಿಮ್ನ ಮೇಲೆಯೂ |
23
|
ಕಿರ್ಯಾತಯಾಮಿನ ಮೇಲೆಯೂ ಬೇತ್ಗಾಮುಲಿನ ಮೇಲೆಯೂ ಬೇತ್ಮೆಯೋನಿನ ಮೇಲೆಯೂ |
24
|
ಕೆರೀಯೋತ್ನ ಮೇಲೆಯೂ ಬೊಚ್ರದ ಮೇಲೆಯೂ ಸವಿಾಪದಲ್ಲಾಗಲಿ ದೂರ ದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು. |
25
|
ಮೋವಾಬಿನ ಕೊಂಬು ಕಡಿದು ಹಾಕಲ್ಪಟ್ಟಿದೆ; ಅದರ ತೋಳು ಮುರಿಯಲ್ಪಟ್ಟಿದೆ ಎಂದು ಕರ್ತನು ಅನ್ನುತ್ತಾನೆ. |
26
|
ಅದನ್ನು ನೀವು ಅಮಲೇರಿಸಿರಿ; ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ಕಾರಿದ್ದ ರಲ್ಲಿ ಹೊರಳಾಡುವದು; ಅದೇ ಹಾಸ್ಯಕ್ಕಾಗಿರುವದು. |
27
|
ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ನೀನು ಅವರ ವಿಷಯ ಯಾವಾಗ ಮಾತನಾಡಿದಂದಿನಿಂದ ಸಂತೋಷಕ್ಕಾಗಿ ತಲೆ ಅಲ್ಲಾಡಿಸಿದಿಯಲ್ಲಾ. |
28
|
ಮೋವಾಬಿನಲ್ಲಿ ವಾಸ ವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರ್ರಿ; ಸಂದುಗಳ ಬಾಯಿಯ ಪಕ್ಕಗಳಲ್ಲಿ ಗೂಡುಕಟ್ಟುವ ಪಾರಿವಾಳದ ಹಾಗಿರ್ರಿ. |
29
|
ಮೋವಾ ಬಿನ ಹೆಮ್ಮೆಯನ್ನು ಕುರಿತು ಅದರ ಮಹಾಗರ್ವವನ್ನ್ನೂ ಡಂಬವನ್ನೂ ಅಹಂಕಾರವನ್ನೂ ಬಡಾಯಿಯನ್ನೂ ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ. |
30
|
ನಾನು ಅದರ ಕೋಪೋ ದ್ರೇಕವನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಆದರೆ ಅದು ಹಾಗೆ ಆಗುವದಿಲ್ಲ; ಅವನ ಸುಳ್ಳುಗಳು ಸರಿ ಬೀಳುವದಿಲ್ಲ. |
31
|
ಆದದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವದು. |
32
|
ಸಿಬ್ಮದ ದ್ರಾಕ್ಷೇಗಿಡವೇ, ಯಜ್ಜೇರಿನ ಅಳುವಿಕೆ ಯೊಂದಿಗೆ ನಿನ್ನ ನಿಮಿತ್ತ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ ನಿನ್ನ ದ್ರಾಕ್ಷೇ ಸುಗ್ಗಿಯ ಮೇಲೆಯೂ ಸೂರೆ ಮಾಡುವ ವನು ಬಿದ್ದಿದ್ದಾನೆ. |
33
|
ಫಲವುಳ್ಳ ಹೊಲದಿಂದಲೂ ಮೋವಾಬಿನ ದೇಶದಿಂದಲೂ ಸಂತೋಷವೂ ಉಲ್ಲಾ ಸವೂ ತೆಗೆಯಲ್ಪಟ್ಟಿವೆ; ದ್ರಾಕ್ಷೇಯಾಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಅರ್ಭಟದ ಸಂಗಡ ಅವರು ಯಾರೂ ತುಳಿಯುವದಿಲ್ಲ; ಆರ್ಭ ಟವೇ ಆರ್ಭಟವಾಗುವದಿಲ್ಲ. |
34
|
ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಳೆಯ ವರೆಗೂ ಯಹಚಿನ ವರೆಗೂ ಚೋಯರ್ ಮೊದಲ್ಗೊಂಡು ಹೊರೊನಯಿಮಿನ ವರೆಗೂ ಮೂರು ವರುಷದ ಕಡಸಿನಂತೆ ತಮ್ಮ ಶಬ್ದ ವನ್ನೆತ್ತಿದ್ದರು; ಯಾಕಂದರೆ ನಿವಿಾ್ರೇಮ್ನ ನೀರುಗಳು ಸಹ ಹಾಳಾದವು. |
35
|
ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ ತನ್ನ ದೇವರುಗಳಿಗೆ ಧೂಪ ಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡು ವೆನೆಂದು ಕರ್ತನು ಅನ್ನುತ್ತಾನೆ. |
36
|
ಆದದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವದು, ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡು ವದು. ಅವನು ಮಾಡಿಕೊಂಡ ದ್ರವ್ಯನಾಶವಾಯಿತು. |
37
|
ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು. |
38
|
ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿರು ವದು. ಮೆಚ್ಚದ ಪಾತ್ರೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆಂದು ಕರ್ತನು ಅನ್ನುತ್ತಾನೆ. |
39
|
ಅದು ಹೇಗೆ ಮುರಿದು ಹೋಯಿತು! ಮೋವಾಬು ಹೇಗೆ ನಾಚಿಕೆಪಟ್ಟು ಬೆನ್ನು ತಿರುಗಿಸಿತು ಎಂದು ಗೋಳಿಡುವರು. ಹೀಗೆ ಮೋವಾಬು ಅದರ ಸುತ್ತಲಿರು ವವರೆಲ್ಲರಿಗೆ ಹಾಸ್ಯಕ್ಕೂ ಹೆದರಿಕೆಗೂ ಆಗುವದು. |
40
|
ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು. |
41
|
ಕೆರೀಯೋತ್ ವಶ ವಾಯಿತು; ಬಲವಾದ ಕೋಟೆಗಳು ಹಿಡಿಯಲ್ಪಟ್ಟವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೃದಯಗಳು ಹೆರುವ ಸ್ತ್ರೀಯ ಹೃದಯದಂತೆ ಇರುವವು. |
42
|
ಮೋವಾಬು ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ ಜನಾಂಗವಲ್ಲದ ಹಾಗೆ ನಾಶವಾಗುವದು. |
43
|
ಮೋವಾಬಿನ ನಿವಾಸಿಯೇ, ಹೆದರಿಕೆಯೂ ಕುಣಿಯೂ ಬೋನೂ ನಿನ್ನ ಮೇಲೆ ಇರುವವೆಂದು ಕರ್ತನು ಅನ್ನುತ್ತಾನೆ. |
44
|
ಹೆದರಿಕೆಗೆ ಓಡಿ ಹೋಗುವವನು ಕುಣಿಯಲ್ಲಿ ಬೀಳುವನು; ಕುಣಿ ಯೊಳಗಿಂದ ಏರಿಬರುವವನು ಬೋನಿನಲ್ಲಿ ಹಿಡಿಯ ಲ್ಪಡುವನು; ನಾನು ಅದರ ಮೇಲೆ ಅಂದರೆ ಮೋವಾ ಬಿನ ಮೇಲೆಯೇ ಅವರ ವಿಚಾರಣೆಯ ವರುಷವನ್ನು ತರುವೆನೆಂದು ಕರ್ತನು ಅನ್ನುತ್ತಾನೆ. |
45
|
ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ ಸೀಹೋನಿನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವದು. |
46
|
ಮೋವಾಬೇ ನಿನಗೆ ಅಯ್ಯೋ! ಕೆಮೋಷಿನ ಜನರು ನಾಶವಾದರು; ನಿನ್ನ ಕುಮಾರರು ಕುಮಾರ್ತೆಯರು ಸೆರೆಯಾಗಿಯೂ ಹಿಡಿಯಲ್ಪಟ್ಟರು. |
47
|
ಆದಾಗ್ಯೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸೆರೆಯನ್ನು ತಿರುಗಿ ತರುತ್ತೇನೆಂದು ಕರ್ತನು ಅನ್ನುತ್ತಾನೆ. ಈ ವರೆಗೆ ಮೋವಾಬಿನ ನ್ಯಾಯತೀರ್ವಿಕೆಯು ಇರುವದು. |
Jeremiah 48:1 Kannada Language Bible Words basic statistical display
COMING SOON ...