ಹೇಗಂದರೆ--ದಾವೀ ದನ ಸಿಂಹಾಸನದ ಮೇಲೆ ಕೂತುಕೊಳ್ಳುವ ಯೆಹೂದದ ಅರಸನೇ, ನೀನೂ ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಕರ್ತನ ವಾಕ್ಯವನ್ನು ಕೇಳಲಿ, ಕರ್ತನು ಹೇಳುವದೇನಂದರೆ--
ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ ದಾವೀದನ ಸಿಂಹಾಸನದ ಮೇಲೆ ಕೂತುಕೊಳ್ಳು ವವರೂ ರಥಗಳಲ್ಲಿಯೂ ಕುದುರೆಗಳ ಮೇಲೆಯೂ ಸವಾರಿಮಾಡುವ ಅರಸರ ತಮ್ಮ ಸೇವಕರ ಜನರ ಸಹಿತವಾಗಿ, ಈ ಮನೆಯ ಬಾಗಿಲುಗಳಿಂದ ಪ್ರವೇಶಿಸು ವರು.
ಕರ್ತನು ಯೆಹೂದದ ಅರಸನ ಮನೆಗೆ ಹೀಗೆ ಹೇಳುತ್ತಾನೆ --ನೀನು ನನಗೆ ಗಿಲ್ಯಾದೂ ಲೆಬನೋನಿನ ತಲೆಯೂ ಆಗಿದ್ದೀ; ಆದರೂ ನಿಶ್ಚಯವಾಗಿ ನಿನ್ನನ್ನು ಅರಣ್ಯ ವಾಗಿಯೂ ನಿವಾಸಿಗಳಿಲ್ಲದ ಪಟ್ಟಣಗಳಾಗಿಯೂ ಮಾಡುವೆನು.
ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ.
ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ!
ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ?
ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.
ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ.