1
|
ಪ್ರತಿಯೊಬ್ಬ ಮಹಾಯಾಜಕನು ಮನುಷ್ಯ ರೊಳಗಿಂದ ಆರಿಸಲ್ಪಟ್ಟು ಮನುಷ್ಯರಿ ಗೋಸ್ಕರ ದೇವರ ಕಾರ್ಯಗಳಿಗಾಗಿ ನೇಮಿಸಲ್ಪಡು ತ್ತಾನಲ್ಲಾ. ಅವನು ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗೋಸ್ಕರ ಸಮರ್ಪಿಸಬೇಕು. |
2
|
ತಾನೂ ಬಲಹೀನನಾಗಿರುವದರಿಂದ ಅವನು ಜ್ಞಾನವಿಲ್ಲದವರ ಮೇಲೆಯೂ ಮಾರ್ಗ ತಪ್ಪಿದವರ ಮೇಲೆಯೂ ಕರುಣೆ ತೋರಿಸಬಲ್ಲನು. |
3
|
ಆ ಬಲಹೀನತೆಯ ಕಾರಣದಿಂದ ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಅರ್ಪಿಸಬೇಕಾದವ ನಾಗಿದ್ದಾನೆ. |
4
|
ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ. |
5
|
ಹಾಗೆಯೇ ಕ್ರಿಸ್ತನು ಸಹ ಮಹಾಯಾಜಕನಾಗುವದಕ್ಕೆ ತನ್ನನ್ನು ತಾನೇ ಘನಪಡಿಸಿಕೊಳ್ಳಲಿಲ್ಲ; ಆದರೆ--ನೀನು ನನ್ನ ಮಗನು; ನಾನೇ ಈ ದಿನ ನಿನ್ನನ್ನು ಪಡೆದಿದ್ದೇನೆ ಎಂದು ಹೇಳಿದಾತನೇ ಈ ಗೌರವವನ್ನು ಆತನಿಗೆ ಕೊಟ್ಟನು. |
6
|
ಆತನು ಇನ್ನೊಂದು ಸ್ಥಳದಲ್ಲಿ--ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಹೇಳುತ್ತಾನೆ. |
7
|
ಆತನು ತನ್ನ ಶರೀರದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ ಬಲ ವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ಭಯಪಟ್ಟದ್ದರಲ್ಲಿ ಕೇಳಲ್ಪ ಟ್ಟನು. |
8
|
ಹೀಗೆ ಆತನು ಮಗನಾಗಿದ್ದರೂ ತಾನು ಅನುಭ ವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತು ಕೊಂಡನು. |
9
|
ಇದಲ್ಲದೆ ಸಿದ್ಧಿಗೆ ಬಂದು ತನಗೆ ವಿಧೇಯ ರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಆತನು ಕರ್ತನಾದನು. |
10
|
ಆತನು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆಂದು ಕರೆಯಲ್ಪಟ್ಟನು. |
11
|
ಆತನ ವಿಷಯದಲ್ಲಿ ನಾವು ಹೇಳಬೇಕಾದ ಮಾತುಗಳು ಬಹಳ ಉಂಟು. ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟ ವಾಗಿದೆ. |
12
|
ನೀವು ಇಷ್ಟರೊಳಗೆ ಬೋಧಕರಾಗಿರ ಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲ ಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. |
13
|
ಹಾಲು ಕುಡಿಯುವ ವನು ಕೂಸಿನಂತಿದ್ದು, ನೀತಿವಾಕ್ಯದಲ್ಲಿ ಅನುಭವವಿಲ್ಲದ ವನಾಗಿದ್ದಾನೆ. |
14
|
ಆದರೆ ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೊಸ್ಕರ ಅಂದರೆ ತಮ್ಮ ಜ್ಞಾನೇಂದ್ರಿ ಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿದವರಿಗೋಸ್ಕರವಾಗಿದೆ. |
Hebrews 5:1 Kannada Language Bible Words basic statistical display
COMING SOON ...