ಲೋಕದ ಅಸ್ತಿ ವಾರದೊಡನೆ (ಆತನ) ಕೆಲಸಗಳು ಮುಗಿದಿದ್ದರೂ ಆತನು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ಕೋಪದಿಂದ ಪ್ರಮಾಣಮಾಡಿ ದೆನು ಎಂದು ಹೇಳಿದನು. ನಂಬಿರುವ ನಾವೇ ಆ ವಿಶ್ರಾಂತಿಯಲ್ಲಿ ಪ್ರವೇಶಿಸುತ್ತೇವೆ.
ತಿರಿಗಿ ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತನಾಡಿ--ಈ ಹೊತ್ತೇ ಎಂದು ಒಂದಾ ನೊಂದು ದಿವಸವನ್ನು ಗೊತ್ತುಮಾಡುತ್ತಾನೆ; ಹೇಗೆಂದರೆ--ನೀವು ಈ ಹೊತ್ತು ಆತನ ಧ್ವನಿಗೆ ಕಿವಿಗೊಟ್ಟರೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ ಎಂದು ಹೇಳುತ್ತಾನಷ್ಟೆ.
ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.