ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ; ಆಕ್ರಮಣಮಾಡಲು ಸಿದ್ಧರಾಗಿದ್ದಾರೆ. [*ಆಕ್ರಮಣಮಾಡಲು ಸಿದ್ಧರಾಗಿದ್ದಾರೆ ಅಕ್ಷರಶಃ, “ಅವರು ನೆಲದ ಮೇಲೆ ಬೀಳಿಸಲು ದೃಷ್ಟಿಯಿಟ್ಟಿದ್ದಾರೆ.”]
ಯೆಹೋವನೇ, ಎದ್ದೇಳು, [†ಯೆಹೋವನೇ, ಎದ್ದೇಳು ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿದಾಗ ಮತ್ತು ತಮ್ಮೊಂದಿಗೆ ಅದನ್ನು ಯುದ್ಧದೊಳಗೆ ತೆಗೆದುಕೊಂಡು ಹೋದಾಗ ಜನರು ಇದನ್ನು ಹೇಳಿದರು. ದೇವರು ಅವರೊಂದಿಗೆ ಇದ್ದನು ಎಂಬುದನ್ನು ಇದು ತೋರಿಸುತ್ತದೆ. ಅರಣ್ಯಕಾಂಡ 10:35-36 ನೆಯ ವಚನಗಳನ್ನು ನೋಡಿರಿ.] ವೈರಿಗಳ ಬಳಿಗೆ ಹೋಗು. ಅವರನ್ನು ಶರಣಾಗತರನ್ನಾಗಿ ಮಾಡು. ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ ನನ್ನನ್ನು ತಪ್ಪಿಸಿ ಕಾಪಾಡು. ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ. ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು. ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.