English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Isaiah Chapters

Isaiah 47 Verses

1 “ಕನ್ನಿಕೆಯೇ, ಬಾಬಿಲೋನಿನ ಕುಮಾರಿಯೇ ಕೆಳಕ್ಕಿಳಿದು ಧೂಳಿನ ಮೇಲೆ ಕುಳಿತಿಕೊ. ಕಸ್ದೀಯರ ಕುಮಾರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೊ! ಈಗ ನೀನು ಯಜಮಾನಿಯಲ್ಲ. ನೀನು ಕೋಮಲವಾದ ತರುಣಿ ಎಂದು ಜನರು ನಿನ್ನ ಬಗ್ಗೆ ಹೇಳುವದಿಲ್ಲ.
2 ಈಗ ನೀನು ದಾಸಿಯಾಗಿ ಕೆಲಸ ಮಾಡಬೇಕು. ನಿನ್ನ ಮನೋಹರವಾದ ಉಡುಪನ್ನು ತೆಗೆದುಹಾಕು. ಬೀಸುವ ಕಲ್ಲನ್ನು ತೆಗೆದುಕೊಂಡು ಧಾನ್ಯವನ್ನು ಬೀಸು. ಜನರು ನಿನ್ನ ತೊಡೆಗಳನ್ನು ನೋಡುವ ತನಕ ನಿನ್ನ ಉಡುಪನ್ನು ಎತ್ತಿ ಹೊಳೆಯನ್ನು ದಾಟು. ನಿನ್ನ ದೇಶವನ್ನು ಬಿಟ್ಟುಹೋಗು.
3 ಪುರುಷರು ನಿನ್ನ ಶರೀರವನ್ನು ನೋಡಿ ನಿನ್ನೊಂದಿಗೆ ಸಂಭೋಗಿಸುವರು. ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನೀನು ಶಿಕ್ಷಿಸಲ್ಪಡುವೆ. ಯಾರೂ ನಿನಗೆ ಸಹಾಯಮಾಡಲು ಬರುವದಿಲ್ಲ.
4 “ ‘ದೇವರು ನಮ್ಮನ್ನು ರಕ್ಷಿಸುವನು. ಆತನ ಹೆಸರು ಸರ್ವಶಕ್ತನಾದ ಯೆಹೋವನು; ಇಸ್ರೇಲರ ಪರಿಶುದ್ಧನೆಂಬುದೇ ಆತನ ಹೆಸರು’ ಎಂದು ನನ್ನ ಜನರು ಹೇಳುವರು.”
5 “ಆದ್ದರಿಂದ ಬಾಬಿಲೋನೇ, ಅಲ್ಲಿ ಸುಮ್ಮನೆ ಕುಳಿತಿರು. ಕಸ್ದೀಯರ ಕುಮಾರಿಯೇ ಕತ್ತಲೆಯೊಳಗೆ ಹೋಗಿ ಇರು, ಯಾಕೆಂದರೆ ನೀನು ‘ಜನಾಂಗಗಳ ರಾಣಿ’ ಎಂದು ಇನ್ನು ಮುಂದೆ ಕರೆಯಲ್ಪಡುವದಿಲ್ಲ.
6 “ನನ್ನ ಜನರ ಮೇಲೆ ನಾನು ಸಿಟ್ಟಿಗೆದ್ದಿದ್ದೆನು. ಅವರು ನನಗೆ ಸೇರಿದವರಾಗಿದ್ದಾರೆ. ಆದರೆ ನಾನು ಅವರ ಮೇಲೆ ಸಿಟ್ಟಾದೆನು. ಆದ್ದರಿಂದ ನಾನು ಅವರನ್ನು ತಳ್ಳಿಬಿಟ್ಟೆನು. ಅವರನ್ನು ನಿನಗೆ ಕೊಟ್ಟೆನು; ನೀನು ಅವರನ್ನು ಶಿಕ್ಷಿಸಿದೆ. ಅವರ ಮೇಲೆ ಕರುಣೆ ತೋರಿಸಲಿಲ್ಲ. ವೃದ್ಧರೂ ಕಷ್ಟದ ಕೆಲಸ ಮಾಡುವಂತೆ ಮಾಡಿದೆ.
7 ‘ನಾನು ನಿತ್ಯಕಾಲಕ್ಕೂ ವಾಸಿಸುತ್ತೇನೆ. ನಾನು ಯಾವಾಗಲೂ ರಾಣಿಯಾಗಿಯೇ ಇರುವೆನು’ ಎಂದು ನೀನು ಹೇಳುವೆ. ಅವರಿಗೆ ನೀನು ಮಾಡಿದ ದುಷ್ಟಕ್ರಿಯೆಗಳನ್ನು ನೀನು ಗಮನಿಸಲೇ ಇಲ್ಲ. ಅದರ ಪರಿಣಾಮವನ್ನು ನೀನು ಆಲೋಚಿಸಲೇ ಇಲ್ಲ.
8 ಆದ್ದರಿಂದ ‘ಕೋಮಲ ಸ್ತ್ರೀಯೇ,’ ನನ್ನ ಮಾತನ್ನು ಕೇಳು. ಸುರಕ್ಷಿತಳಾಗಿರುವೆ ಎಂದು ನೆನಸಿಕೊಂಡು ಹೀಗೆ ನಿನ್ನೊಳಗೆ, ‘ನಾನೇ ಮಹಾವ್ಯಕ್ತಿ. ನನ್ನಂಥ ಮಹಾವ್ಯಕ್ತಿ ಯಾರೂ ಇಲ್ಲ. ನಾನೆಂದಿಗೂ ವಿಧವೆಯಾಗುವದಿಲ್ಲ. ಯಾವಾಗಲೂ ನನಗೆ ಮಕ್ಕಳಿರುವರು’ ಎಂದುಕೊಳ್ಳುವೆ.
9 ಒಂದೇ ದಿನದೊಳಗೆ, ಒಂದೇ ಕ್ಷಣದಲ್ಲಿ ನಿನಗೆ ಎರಡು ಸಂಗತಿಗಳು ಸಂಭವಿಸುತ್ತವೆ. ನೀನು ನಿನ್ನ ಮಕ್ಕಳನ್ನು ಕಳೆದುಕೊಳ್ಳುವೆ, ಆ ಬಳಿಕ ನೀನು ನಿನ್ನ ಗಂಡನನ್ನು ಕಳಕೊಳ್ಳುವೆ. ಹೌದು, ಈ ವಿಷಯಗಳು ನಿನಗೆ ಖಂಡಿತವಾಗಿ ಸಂಭವಿಸುವವು. ನಿನ್ನಲ್ಲಿರುವ ಎಲ್ಲಾ ಮಾಟಮಂತ್ರಗಳು ನಿನ್ನನ್ನು ಕಾಪಾಡಲಾರವು.
10 ನೀನು ದುಷ್ಕೃತ್ಯಗಳನ್ನು ಮಾಡುತ್ತಿರುವೆ, ಆದರೂ ನೀನು ಸುರಕ್ಷಿತಳಾಗಿದ್ದೇನೆ ಎಂದುಕೊಂಡಿರುವೆ. ‘ನಾನು ಮಾಡಿದ ದುಷ್ಕೃತ್ಯಗಳನ್ನು ಯಾರೂ ನೋಡುವದಿಲ್ಲ’ ಎಂದು ನೀನು ಭಾವಿಸಿಕೊಂಡಿರುವೆ. ನಿನ್ನ ಜ್ಞಾನ, ನಿನ್ನ ತಿಳುವಳಿಕೆ ನಿನ್ನನ್ನು ಕಾಪಾಡುತ್ತವೆ ಎಂದು ತಿಳಿದುಕೊಂಡಿರುವೆ. ‘ನಾನೇ ಮಹಾವ್ಯಕ್ತಿ, ನನ್ನಂಥ ಮಹಾವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದು ನೀನು ಅಂದುಕೊಳ್ಳುವೆ.
11 “ಆದರೆ ವಿಪತ್ತು ನಿನಗೆ ಪ್ರಾಪ್ತವಾಗುವದು. ಅವು ಯಾವಾಗ ಸಂಭವಿಸುತ್ತದೋ ನಿನಗೆ ತಿಳಿಯದು. ಆದರೆ ವಿಪತ್ತು ಸಂಭವಿಸುವದು. ನೀನು ಏನೇ ಮಾಡಿದರೂ ಆ ವಿಪತ್ತನ್ನು ತಡೆಯಲಾಗದು.
12 ಮಾಟಮಂತ್ರಗಳನ್ನು ಕಲಿತುಕೊಳ್ಳುವುದರಲ್ಲೇ ನಿನ್ನ ಜೀವಮಾನವನ್ನು ಕಳೆದಿರುವೆ. ಸರಿ, ತಂತ್ರಮಂತ್ರಗಳನ್ನು ಮಾಡಲು ಪ್ರಾರಂಭಿಸು. ಒಂದುವೇಳೆ ಅವು ನಿನಗೆ ಸಹಾಯ ಮಾಡಬಹುದು. ಒಂದುವೇಳೆ ಕೆಲವರನ್ನು ನೀನು ಭಯಪಡಿಸಬಹುದು.
13 ನಿನಗೆ ಅನೇಕಾನೇಕ ಸಲಹೆಗಾರರಿದ್ದಾರೆ. ಅವರು ನಿನಗೆ ಕೊಡುವ ಸಲಹೆಗಳಿಂದ ನೀನು ಬೇಸರಗೊಂಡಿರುವಿಯಾ? ಹಾಗಾದರೆ ನಿನ್ನಲ್ಲಿರುವ ಖಗೋಳಶಾಸ್ತ್ರಜ್ಞರನ್ನು ಕರೆಯಿಸು. ತಿಂಗಳು ಯಾವಾಗ ಪ್ರಾರಂಭವಾಗುತ್ತದೆಯೆಂದು ಅವರು ಹೇಳಬಲ್ಲರು. ನಿನ್ನ ಸಂಕಟಗಳು ಯಾವಾಗ ಪ್ರಾಪ್ತವಾಗುತ್ತವೆಯೆಂದು ಅವರು ನಿನಗೆ ತಿಳಿಸಬಲ್ಲರು.
14 ಆದರೆ ಆ ಮನುಷ್ಯರಿಗೆ ತಮ್ಮನ್ನೇ ರಕ್ಷಿಸಲು ಅಸಾಧ್ಯವಾಗುವದು. ಅವರು ಹುಲ್ಲಿನಂತೆ ಸುಟ್ಟುಹೋಗುವರು. ರೊಟ್ಟಿಸುಡಲು ಕೆಂಡಗಳು ಕಾಣಿಸದಂತೆಯೂ ಚಳಿ ಕಾಯಿಸಿಕೊಳ್ಳಲು ಬೆಂಕಿ ಇರದಂತೆಯೂ ಅವರು ಕ್ಷಣಕಾಲದಲ್ಲಿ ಸುಟ್ಟುಹೋಗುವರು.
15 ನೀನು ಕಷ್ಟಪಟ್ಟು ಗಳಿಸಿದ ಸಂಪತ್ತಿಗೆಲ್ಲಾ ಹಾಗೆಯೇ ಆಗುವದು. ನಿನ್ನ ಜೀವಮಾನ ಕಾಲವೆಲ್ಲಾ ವ್ಯವಹಾರ ನಡಿಸಿದ್ದ ಜನರೆಲ್ಲಾ ನಿನ್ನನ್ನು ತೊರೆದುಬಿಡುವರು. ಪ್ರತಿಯೊಬ್ಬನು ತನ್ನ ಸ್ವಂತದಾರಿ ಹಿಡಿಯುವನು. ಆಗ ನಿನ್ನನ್ನು ರಕ್ಷಿಸಲು ಯಾರೂ ಇರುವದಿಲ್ಲ.”
×

Alert

×