English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

1 Chronicles Chapters

1 Chronicles 9 Verses

1 ಇಸ್ರೇಲ್ ಜನರ ಎಲ್ಲಾ ಹೆಸರುಗಳು ಅವರವರ ವಂಶಾವಳಿ ಪಟ್ಟಿಯಲ್ಲಿ ಬರೆಯಲ್ಪಟ್ಟಿದೆ. ಈ ವಂಶಾವಳಿಗಳು ಇಸ್ರೇಲ್ ರಾಜರ ಇತಿಹಾಸದಲ್ಲಿ ಸೇರಿಸಲ್ಪಟ್ಟಿದೆ. ಯೆಹೂದ ಪ್ರಾಂತ್ಯದ ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ಯಲಾಯಿತು. ಅವರು ದೇವರಿಗೆ ಅವಿಧೇಯರಾದ್ದರಿಂದ ಅವರಿಗೆ ಇಂಥ ಸ್ಥಿತಿ ಬಂದೊದಗಿತು.
2 ಅಲ್ಲಿಂದ ಹಿಂತಿರುಗಿಬಂದು ತಮ್ಮ ಸ್ವನಾಡಿನಲ್ಲಿ ನೆಲೆಸಿದವರಲ್ಲಿ ಮೊದಲನೆಯವರು ಯಾರೆಂದರೆ: ಕೆಲವು ಇಸ್ರೇಲರು, ಯಾಜಕರು, ಲೇವಿಯರು ಮತ್ತು ದೇವಾಲಯದ ಸೇವಕರು.
3 ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಗೋತ್ರದವರಾದ ಇವರು ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರು ಯಾರೆಂದರೆ:
4 ಊತ್ಯೆ ಅಮ್ಮೀಹೂದನ ಮಗ, ಅಮ್ಮೀಹೂದನು ಒಮ್ರಿಯ ಮಗ, ಒಮ್ರಿಯು ಇಮ್ರಿಯ ಮಗ, ಇಮ್ರಿಯು ಬಾನೀಯ ಮಗ, ಬಾನೀಯು ಪೆರೆಚನ ಸಂತತಿಯವನು, ಪೆರೆಚನು ಯೆಹೂದನ ಮಗ.
5 ಜೆರುಸಲೇಮಿನಲ್ಲಿ ವಾಸಿಸಿದ ಶೇಲಾಹದವರು ಯಾರೆಂದರೆ: ಚೊಚ್ಚಲಮಗನಾದ ಅಸಾಯನು. ಅಸಾಯನಿಗೂ ಗಂಡುಮಕ್ಕಳಿದ್ದರು.
6 ಜೆರಹಳ ಸಂತತಿಯ ಯೆಯೂವೇಲ್ ಮತ್ತು ಅವನ ಆರು ನೂರ ತೊಂಭತ್ತು ಮಂದಿ ಸಂಬಂಧಿಕರು ಜೆರುಸಲೇಮಿನಲ್ಲಿ ವಾಸಿಸಿದರು.
7 ಜೆರುಸಲೇಮಿನಲ್ಲಿ ವಾಸಿಸಿದ ಬೆನ್ಯಾಮೀನನ ಗೋತ್ರದವರು ಯಾರೆಂದರೆ: ಮೆಷುಲ್ಲಾಮನ ಮಗನಾದ ಸಲ್ಲೂ. ಮೆಷುಲ್ಲಾಮನು ಹೋದವ್ಯನ ಮಗ. ಹೋದವ್ಯನು ಹಸ್ಸೆನುವಾಹನ ಮಗ.
8 ಇಬ್ನೆಯಾಹನು ಯೆರೋಹಾಮನ ಮಗ. ಏಲಾನು ಉಜ್ಜೀಯ ಮಗ. ಉಜ್ಜೀಯನು ಮಿಕ್ರೀಯ ಮಗ ಮತ್ತು ಮೆಷುಲ್ಲಾಮನು ಶೆಫಟ್ಯನ ಮಗ. ಶೆಫಟ್ಯನು ರೆಯೂವೇಲನ ಮಗ. ರೆಯೂವೇಲನು ಇಬ್ನಿಯಾಹನ ಮಗ.
9 ಬೆನ್ಯಾಮೀನನ ಕುಲಚರಿತ್ರೆಯ ಪ್ರಕಾರ ಒಂಭೈನೂರ ಐವತ್ತಾರು ಮಂದಿ ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳ ನಾಯಕರಾಗಿದ್ದರು.
10 ಜೆರುಸಲೇಮಿನಲ್ಲಿ ವಾಸಿಸಿದ ಯಾಜಕರು ಯಾರೆಂದರೆ: ಯೆದಾಯ, ಯೆಹೋಯಾರೀಬ್, ಯಾಕೀನ್ ಮತ್ತು
11 ಅಜರ್ಯ. ಅಜರ್ಯನು ಹಿಲ್ಕೀಯನ ಮಗ; ಹಿಲ್ಕೀಯನು ಮೆಷುಲ್ಲಾಮನ ಮಗ; ಮೆಷುಲ್ಲಾಮನು ಚಾದೋಕನ ಮಗ; ಚಾದೋಕನು ಮೆರಾಯೋತನ ಮಗ; ಮೆರಾಯೋತನು ಅಹೀಟೂಬನ ಮಗ. ಅಹೀಟೂಬನು ದೇವಾಲಯದ ಒಬ್ಬ ವಿಶೇಷ ಅಧಿಕಾರಿಯಾಗಿದ್ದನು.
12 ಇವರಲ್ಲದೆ, ಯೆರೋಹಾಮನ ಮಗನಾದ ಅದಾಯನು ಸಹ ಇದ್ದನು. ಯೆರೋಹಾಮನು ಪಶ್ಹೂರನ ಮಗ; ಪಶ್ಹೂರನು ಮಲ್ಕೀಯನ ಮಗ; ಇವರಲ್ಲದೆ, ಅದೀಯೇಲನ ಮಗನಾದ ಮಾಸೈ ಸಹ ಇದ್ದನು. ಅದೀಯೇಲನು ಯಹ್ಜೇರನ ಮಗ. ಯಹ್ಜೇರನು ಮೆಷುಲ್ಲಾಮನ ಮಗ. ಮೆಷುಲ್ಲಾಮನು ಮೆಷಿಲ್ಲೇಮೋತನ ಮಗ. ಮೆಷಿಲ್ಲೇಮೋತನು ಇಮ್ಮೇರನ ಮಗ.
13 ಒಟ್ಟು ಒಂದು ಸಾವಿರದ ಏಳುನೂರ ಅರವತ್ತು ಮಂದಿ ಯಾಜಕರಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ದೇವಾಲಯದ ಕೆಲಸಕಾರ್ಯಗಳ ಜವಾಬ್ದಾರಿಕೆಯನ್ನು ಇವರು ಹೊತ್ತು ಕೊಂಡಿದ್ದರು.
14 ಜೆರುಸಲೇಮಿನಲ್ಲಿ ವಾಸಿಸಿದ ಲೇವಿ ಕುಲದ ಜನರು ಯಾರೆಂದರೆ: ಹಷ್ಷೂಬನ ಮಗನಾದ ಶೆಮಾಯ. ಹಷ್ಷೂಬನು ಅಜ್ರೀಕಾಮನ ಮಗ. ಅಜ್ರೀಕಾಮನು ಹಷಬ್ಯನ ಮಗ. ಹಷಬ್ಯನು ಮೆರಾರೀಯ ಸಂತತಿಯವನು.
15 ಜೆರುಸಲೇಮಿನಲ್ಲಿ ವಾಸಿಸಿದ ಇತರರು ಯಾರೆಂದರೆ: ಬಕ್ಬಕ್ಕರ್, ಹೆರೆಷ್, ಗಾಲಾಲ್ ಮತ್ತು ಮತ್ತನ್ಯ. ಮತ್ತನ್ಯನು ಮೀಕನ ಮಗ. ಮೀಕನು ಜಿಕ್ರೀಯ ಮಗ. ಜಿಕ್ರೀಯು ಆಸಾಫನ ಮಗ.
16 ಓಬದ್ಯನು ಶೆಮಾಯನ ಮಗ. ಶೆಮಾಯನು ಗಾಲಾಲನ ಮಗ. ಗಾಲಾಲನು ಯೆದೂತೂನನ ಮಗ. ಆಸನ ಮಗನಾದ ಬೆರೆಕ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಆಸನು ಎಲ್ಕಾನನ ಮಗ. ಎಲ್ಕಾನನು ನೆಟೋಫ ಜನರ ಸಮೀಪದ ಗ್ರಾಮದಲ್ಲಿ ವಾಸಿಸುತ್ತಿದ್ದನು.
17 ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ದ್ವಾರಪಾಲಕರು ಯಾರೆಂದರೆ: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಮತ್ತು ಅವರ ಕುಟುಂಬದವರು. ಶಲ್ಲೂಮನು ಅವರ ನಾಯಕನಾಗಿದ್ದನು.
18 ಇವರೆಲ್ಲರೂ ಪೂರ್ವದಿಕ್ಕಿನಲ್ಲಿರುವ ರಾಜನ ಹೆಬ್ಬಾಗಿಲನ್ನು ಕಾಯುತ್ತಿರುತ್ತಾರೆ. ಇವರೆಲ್ಲಾ ಲೇವಿ ಕುಲಕ್ಕೆ ಸೇರಿದವರು.
19 ಶಲ್ಲೂಮನು ಕೋರೇಯ ಮಗನು. ಕೋರೇಯ ಎಬ್ಯಾಸಾಫನ ಮಗನು. ಎಬ್ಯಾಸಾಫನು ಕೋರಹನ ಮಗನು. ಶಲ್ಲೂಮನೂ ಅವನ ಸಹೋದರರೂ ದ್ವಾರಪಾಲಕರಾಗಿದ್ದರು. ಅವರೆಲ್ಲರೂ ಕೋರಹನ ಸಂತತಿಯವರು. ಪವಿತ್ರಗುಡಾರದ ಬಾಗಿಲುಗಳನ್ನು ಕಾಯುವ ಜವಾಬ್ದಾರಿಕೆ ಇವರದಾಗಿತ್ತು. ತಮ್ಮ ಪೂರ್ವಿಕರು ಮಾಡಿದ್ದಂತೆಯೇ ಅವರು ಈ ಕೆಲಸವನ್ನು ಮಾಡಿದರು. ಯೆಹೋವನ ಪಾಳೆಯದ ಪ್ರವೇಶದ್ವಾರವನ್ನು ಕಾಯುವುದು ಅವರ ಪೂರ್ವಿಕರ ಉದ್ಯೋಗವಾಗಿತ್ತು.
20 ಹಿಂದೆ ಫೀನೆಹಾಸನು ದ್ವಾರಪಾಲಕರ ನಾಯಕನಾಗಿದ್ದನು. ಫೀನೆಹಾಸನು ಎಲ್ಲಾಜಾರನ ಮಗ. ದೇವರು ಫೀನೆಹಾಸನೊಂದಿಗಿದ್ದನು.
21 ಮೆಷಲೆಮ್ಯೆನ ಮಗನಾದ ಜೆಕರ್ಯನು ಪವಿತ್ರಗುಡಾರದ ಪ್ರವೇಶದ್ವಾರಕ್ಕೆ ಪಾಲಕನಾಗಿದ್ದನು.
22 ಒಟ್ಟು ಇನ್ನೂರ ಹನ್ನೆರಡು ಮಂದಿ ಪವಿತ್ರಗುಡಾರದ ಬಾಗಿಲನ್ನು ಕಾಯುವುದಕ್ಕೆ ಆರಿಸಲ್ಪಟ್ಟಿದ್ದರು. ಅವರ ಹೆಸರುಗಳು ವಂಶದ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತವೆ. ದಾವೀದನೂ ದೇವರ ಮನುಷ್ಯನಾದ ಸಮುವೇಲನೂ ಇವರನ್ನು ಆರಿಸಿಕೊಂಡರು. ಯಾಕೆಂದರೆ ಇವರೆಲ್ಲರೂ ನಂಬಿಗಸ್ತರಾಗಿದ್ದರು.
23 ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲರಾಗಿದ್ದರು.
24 ಅದಕ್ಕೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿದ್ದವು.
25 ಗ್ರಾಮಗಳಲ್ಲಿ ನೆಲೆಸಿದ ದ್ವಾರಪಾಲಕರ ಕುಟುಂಬದವರು ತಮ್ಮ ಸರದಿಗನುಗುಣವಾಗಿ ಏಳು ದಿವಸದ ಕರ್ತವ್ಯ ಮುಗಿಸಿಹೋಗುತ್ತಿದ್ದರು.
26 ಲೇವಿಕುಲದ ನಾಲ್ಕು ಮಂದಿ ಎಲ್ಲಾ ದ್ವಾರಪಾಲಕರಿಗೆ ನಾಯಕರಾಗಿದ್ದರು. ದೇವಾಲಯದ ಕೋಣೆಗಳನ್ನೂ ಅಲ್ಲಿಟ್ಟಿರುವ ಹಣದ ಪೆಟ್ಟಿಗೆಗಳನ್ನೂ ಅವರು ಕಾಯುತ್ತಿದ್ದರು.
27 ಅವರು ರಾತ್ರಿಯಲ್ಲಿ ಕಾವಲು ಕಾಯುತ್ತಿದ್ದರು ಮತ್ತು ಪ್ರತಿಮುಂಜಾನೆ ದೇವಾಲಯದ ಬಾಗಿಲನ್ನು ತೆರೆಯುತ್ತಿದ್ದರು.
28 ಅವರಲ್ಲಿ ಕೆಲವರು ದೇವಾಲಯದ ಪಾತ್ರೆಗಳಿಗೆ ಮೇಲ್ವಿಚಾರಕರಾಗಿದ್ದು ಅವುಗಳನ್ನು ಒಳಗೆ ತರುವಾಗಲೂ ಹೊರಗೆ ತೆಗೆದುಕೊಂಡು ಹೋಗುವಾಗಲೂ ಲೆಕ್ಕಮಾಡುತ್ತಿದ್ದರು.
29 ಇನ್ನು ಕೆಲವರು ಮರದ ಸಾಮಾನುಗಳಿಗೂ ವಿಶೇಷವಾದ ಪಾತ್ರೆಗಳಿಗೂ ಮೇಲ್ವಿಚಾರಕರಾಗಿದ್ದು ಗೋಧಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ ಮತ್ತು ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರಾಗಿದ್ದರು.
30 ಯಾಜಕರ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲಮಾಡುತ್ತಿದ್ದರು.
31 ಮತ್ತಿತ್ಯ ಎಂಬ ಲೇವಿಯು ದೇವರಿಗೆ ಸಮರ್ಪಿಸುವ ರೊಟ್ಟಿಯನ್ನು ತಯಾರು ಮಾಡುತ್ತಿದ್ದನು. ಇವನು ಶಲ್ಲೂಮನ ಚೊಚ್ಚಲಮಗ. ಶಲ್ಲೂಮನು ಕೋರಹನ ಕುಲದವನಾಗಿದ್ದನು.
32 ಕೋರಹನ ಕುಲದ ಕೆಲವರಿಗೆ, ಪ್ರತಿ ಸಬ್ಬತ್‌ದಿವಸ ದೇವರ ಸನ್ನಿಧಾನದಲ್ಲಿ ಇಡುವ ನೈವೇದ್ಯದ ರೊಟ್ಟಿಯನ್ನು ತಯಾರಿಸುವ ಕೆಲಸವಿತ್ತು.
33 ಗಾಯಕರು ಮತ್ತು ತಮ್ಮ ಕುಟುಂಬಗಳಿಗೆ ನಾಯಕರಾಗಿದ್ದ ಲೇವಿಯರು ದೇವಾಲಯದ ಕೋಣೆಗಳಲ್ಲಿ ಇರುತ್ತಿದ್ದರು. ಅವರು ಇತರ ಕೆಲಸಗಳನ್ನು ಮಾಡಬೇಕಾಗಿರಲಿಲ್ಲ; ಯಾಕೆಂದರೆ ದೇವಾಲಯದ ಹಗಲಿರುಳಿನ ಕೆಲಸಕಾರ್ಯಗಳ ಜವಾಬ್ದಾರಿಕೆ ಇವರದಾಗಿತ್ತು.
34 ಈ ಲೇವಿಯರೆಲ್ಲಾ ತಮ್ಮತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ಇವರ ಹೆಸರುಗಳು ಅವರ ಕುಟುಂಬ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವರು ಜೆರುಸಲೇಮಿನಲ್ಲಿ ವಾಸಿಸಿದರು.
35 ಯೆಯೂವೇಲನು ಗಿಬ್ಯೋನನ ತಂದೆ. ಯೆಯೂವೇಲನು ಗಿಬ್ಯೋನ್ ಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಯೆಯೂವೇಲನ ಹೆಂಡತಿಯ ಹೆಸರು ಮಾಕ.
36 ಯೆಯೂವೇಲನ ಚೊಚ್ಚಲ ಮಗನು ಅಬ್ದೋನ. ಅವನ ಇತರ ಗಂಡುಮಕ್ಕಳು ಯಾರೆಂದರೆ:
37 ಚೂರ್, ಕೀಷ್, ಬಾಳ್, ನೇರ್, ನಾದ್ವಾ್, ಗೆದೋರ್, ಅಹ್ಯೊ, ಜಕರ್ಯ ಮತ್ತು ಮಿಕ್ಲೋತ್.
38 ಮಿಕ್ಲೋತನು ಶಿಮಾಮನ ತಂದೆ. ಯೆಯೂವೇಲನ ಕುಟುಂಬದವರೆಲ್ಲಾ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು.
39 ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಮಲ್ಕೀಷೂವ, ಅಬೀನಾದ್ವಾ್ ಮತ್ತು ಎಷ್ಬಾಳ್.
40 ಯೋನಾತಾನನ ಮಗನಾದ ಮೆರೀಬ್ಬಾಳನು ಮೀಕನ ತಂದೆ.
41 ಮೀಕನ ಗಂಡುಮಕ್ಕಳು ಯಾರೆಂದರೆ: ಪೀತೋನ್, ಮೆಲೆಕ್, ತಹ್ರೇಯ ಮತ್ತು ಆಹಾಜ್.
42 ಆಹಾಜನು ಯಗ್ರಾಹನ ತಂದೆ. ಯಗ್ರಾಹನು ಜಾರಹನ ತಂದೆ. ಜಾರಹನು ಆಲೆಮೆತ್, ಅಜ್ಮಾವೆತ್ ಮತ್ತು ಜಿಮ್ರೀ ಇವರ ತಂದೆ. ಜಿಮ್ರೀಯು ಮೋಚನ ತಂದೆ.
43 ಮೋಚನು ಬಿನ್ನನ ತಂದೆ. ರೆಫಾಯನು ಬಿನ್ನನ ಮಗ. ಎಲ್ಲಾಸನು ರೆಫಾಯನ ಮಗ. ಆಚೇಲನು ಎಲ್ಲಾಸನ ಮಗ.
44 ಆಚೇಲನಿಗೆ ಆರು ಮಂದಿ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.
×

Alert

×