ಅರಸನ ಸೈನ್ಯದಲ್ಲಿ ಸೇವೆಮಾಡಿದವರ ಪಟ್ಟಿ. ಒಂದೊಂದು ತಂಡದವರು, ಇಸ್ರೇಲಿನ ಸೈನ್ಯಾಧಿಕಾರಿಗಳು, ಸಹಸ್ರಾಧಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ಷದ ಆಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇಪ್ಪತ್ನಾಲ್ಕು ಸಾವಿರ ಪುರುಷರಿದ್ದರು.
ಮೊದಲನೆಯ ತಿಂಗಳಲ್ಲಿ ಕಾರ್ಯಾಚರಣೆಯಲ್ಲಿರಬೇಕಾದ ತಂಡಕ್ಕೆ ಯಾಷೊಬ್ಬಾಮನು ಮುಖ್ಯಸ್ತನಾಗಿದ್ದನು. ಇವನು ಜಬ್ದೀಯೇಲನ ಮಗನಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
ನಾಲ್ಕನೆಯ ಸೇನಾಪತಿಯು ಅಸಾಹೇಲ. ಇವನು ವರ್ಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಯದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅಸಾಹೇಲನ ಮಗನಾದ ಜೆಬದ್ಯನು ಸೈನ್ಯಾಧಿಕಾರಿಯಾದನು. ಅಸಾಹೇಲನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
ಐದನೆಯ ಸೈನ್ಯಾಧಿಕಾರಿಯು ಶಮ್ಹೂತ. ಇವನು ಇಜ್ರಾಹ್ಯನ ಸಂತತಿಯವನಾಗಿದ್ದನು. ವರ್ಷದ ಐದನೆಯ ತಿಂಗಳಿನ ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
ಆರನೆಯ ಸೈನ್ಯಾಧಿಪತಿಯು ಐರನು. ಇವನು ವರ್ಷದ ಆರನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನು ತೆಕೋವನದ ಇಕ್ಕೇಷನ ಮಗ. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
ಹೆಲೆಚನು ಏಳನೆಯ ಸೈನ್ಯಾಧಿಕಾರಿ. ವರ್ಷದ ಏಳನೆಯ ತಿಂಗಳಲ್ಲಿ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನು ಎಫ್ರಾಯೀಮ್ ಸಂತತಿಯ ಪೆಲೋನ್ಯನಾಗಿದ್ದನು. ಇವನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
ಒಂಭತ್ತನೆಯ ಸೇನಾಪತಿ ಅಬೀಯೆಜೆರ್. ಇವನು ಅನತೋತ್ ಊರಿನ ಬೆನ್ಯಾಮೀನ್ ಕುಲದವನು. ವರ್ಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
ಹತ್ತನೆಯ ಸೇನಾಪತಿ ಮಹರೈ. ಇವನು ನೆಟೋಫದ ಜೆರಹನ ಸಂತತಿಯವನು. ವರ್ಷದ ಹತ್ತನೆಯ ತಿಂಗಳಿಗೆ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
ಹನ್ನೊಂದನೆಯ ಸೇನಾಪತಿ ಪಿರ್ರಾತೋನ್ಯನಾದ ಬೆನಾಯ. ಇವನು ಎಫ್ರಾಯೀಮ್ ಕುಲದ ಪಿರ್ರಾತೋನ್ ಎಂಬಲ್ಲಿಂದ ಬಂದವನು. ವರ್ಷದ ಹನ್ನೊಂದನೆಯ ತಿಂಗಳಿಗೆ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
ಹನ್ನೆರಡನೆಯ ಸೇನಾಪತಿ ಹೆಲ್ದೈ. ಇವನು ನೆಟೋಫ ಊರಿನ ಒತ್ನೀಯೇಲನ ಸಂತತಿಯವನು. ವರ್ಷದ ಹನ್ನೆರಡನೆಯ ತಿಂಗಳಿನಲ್ಲಿ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
ದೇವರು ಇಸ್ರೇಲರನ್ನು ಆಕಾಶದ ನಕ್ಷತ್ರದಷ್ಟು ಹೆಚ್ಚಿಸುವೆನೆಂದು ವಾಗ್ದಾನ ಮಾಡಿದ್ದ ಪ್ರಕಾರ ಇಸ್ರೇಲರ ಸಂಖ್ಯೆ ಅಪರಿಮಿತವಾಗಿತ್ತು. ಆದ್ದರಿಂದ ದಾವೀದನು ಇಪ್ಪತ್ತು ವರ್ಷ ಪ್ರಾಯದ ಮೇಲ್ಪಟ್ಟ ಗಂಡಸರನ್ನು ಮಾತ್ರ ಲೆಕ್ಕಿಸುವ ಆಲೋಚನೆ ಮಾಡಿದನು.
ಚೆರೂಯಳ ಮಗನಾದ ಯೋವಾಬನು ಲೆಕ್ಕಿಸುವ ಕಾರ್ಯ ಪ್ರಾರಂಭಿಸಿದನು. ಆದರೆ ಅವನು ಪೂರ್ಣಗೊಳಿಸಲಿಲ್ಲ. ದೇವರು ಇಸ್ರೇಲರ ಮೇಲೆ ಕೋಪಗೊಂಡನು. ಇದರಿಂದಾಗಿ ಇಸ್ರೇಲರ ಜನಸಂಖ್ಯೆಯನ್ನು ದಾವೀದನ ಚರಿತ್ರಾ ಪುಸ್ತಕದಲ್ಲಿ ದಾಖಲೆ ಮಾಡಲಿಲ್ಲ.
ಅರಸನ ಆಸ್ತಿಗೆ ಜವಾಬ್ದಾರರಾಗಿದ್ದವರ ಪಟ್ಟಿ: ಅದೀಯೇಲನ ಮಗನಾದ ಅಜ್ಮಾವೆತ್ ರಾಜನ ಉಗ್ರಾಣಗಳ ಅಧಿಕಾರಿಯಾಗಿದ್ದನು. ಉಜ್ಜೀಯನ ಮಗನಾದ ಯೋನಾತಾನ್ ಚಿಕ್ಕ ಊರುಗಳಲ್ಲಿ, ಹಳ್ಳಿಗಳಲ್ಲಿ, ಹೊಲಗಳಲ್ಲಿ ಮತ್ತು ಗೋಪುರಗಳಲ್ಲಿ ಇದ್ದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
ಗೆದೆರಿನ ಬಾಳ್ಹಾನಾನ್ ಪಶ್ಚಿಮದ ಬೆಟ್ಟಪ್ರದೇಶದಲ್ಲಿ ಆಲಿವ್ ಮರಗಳ ಮತ್ತು ಸಿಖಮೊರ್ ಮರಗಳ ತೋಪುಗಳಿಗೆ ಅಧಿಕಾರಿಯಾಗಿದ್ದನು. ಯೋವಾಷನು ಆಲಿವ್ ಎಣ್ಣೆಯ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.