1
|
ಇಸ್ರೇಲನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, |
2
|
ದಾನ್, ಯೋಸೇಫ್, ಬೆನ್ಯಾಮಾನ್, ನಫ್ತಾಲಿ, ಗಾದ್ ಮತ್ತು ಅಶೇರ್. |
3
|
ಯೆಹೂದನ ಗಂಡುಮಕ್ಕಳು ಯಾರೆಂದರೆ: ಏರ್, ಓನಾನ್ ಮತ್ತು ಶೆಲಾಹ. ಬತ್ಷೂವಳು ಇವರ ತಾಯಿ. ಈಕೆ ಕಾನಾನ್ಯಳು. ಯೆಹೂದನ ಚೊಚ್ಚಲಮಗ ಏರ್. ಯೆಹೋವನ ದೃಷ್ಟಿಯಲ್ಲಿ ಇವನು ಕೆಟ್ಟವನಾಗಿದ್ದ ಕಾರಣ ಕೊಲ್ಲಲ್ಪಟ್ಟನು. |
4
|
ಯೆಹೂದನ ಸೊಸೆಯಾಗಿದ್ದ ತಾಮಾರಳು ಯೆಹೂದನಿಂದ ಪೆರೆಚ್ ಮತ್ತು ಜೆರಹ ಎಂಬ ಇಬ್ಬರು ಗಂಡುಮಕ್ಕಳನ್ನು ಹೆತ್ತಳು. ಹೀಗೆ ಯೆಹೂದನಿಗೆ ಐದು ಗಂಡುಮಕ್ಕಳಾದವು. |
5
|
ಪೆರೆಚನ ಗಂಡುಮಕ್ಕಳು ಯಾರೆಂದರೆ: ಹೆಚ್ರೋನ್ ಮತ್ತು ಹಾಮೂಲ್. |
6
|
ಜೆರಹನಿಗೆ ಐದು ಗಂಡುಮಕ್ಕಳು. ಅವರು ಯಾರೆಂದರೆ: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರ. |
7
|
(ಕರ್ಮೀಯು ಜಿಮ್ರಿಯ ಮಗನು.) ಜಿಮ್ರಿಯು ಆಕಾನನ ಮಗನು. ಈ ಆಕಾನನು ಯುದ್ಧದಲ್ಲಿ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರೇಲರಿಗೆ ದೊಡ್ಡ ಆಪತ್ತನ್ನು ತಂದವನು. |
9
|
ಹೆಚ್ರೋನನ ಗಂಡುಮಕ್ಕಳು ಯಾರೆಂದರೆ: ಯೆರಹ್ಮೇಲ್, ರಾಮ್ ಮತ್ತು ಕಾಲೇಬ್. |
10
|
ರಾಮನು ಅಮ್ಮೀನಾದಾಬನ ತಂದೆ. ಇವನು ನಹಶೋನನ ತಂದೆ. ನಹಶೋನನು ಯೆಹೂದ ಕುಲದ ನಾಯಕನಾಗಿದ್ದನು. |
11
|
ನಹಶೋನನು ಸಲ್ಮೋನನ ತಂದೆ. ಸಲ್ಮೋನನು ಬೋವಜನ ತಂದೆ. |
12
|
[This verse may not be a part of this translation] |
13
|
[This verse may not be a part of this translation] |
14
|
ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ |
15
|
ಆರನೆಯವನು ಓಚೆಮ್, ಏಳನೆಯವನು ದಾವೀದ. |
16
|
ಅವರ ತಂಗಿಯಂದಿರು ಯಾರೆಂದರೆ, ಚೆರೂಯ ಮತ್ತು ಅಬೀಗೈಲ್, ಚೆರೂಯಳ ಮೂರುಮಕ್ಕಳು ಯಾರೆಂದರೆ, ಅಬ್ಷೈ, ಯೋವಾಬ್ ಮತ್ತು ಅಸಾಹೇಲ್. |
17
|
ಅಬೀಗೈಲಳು ಅಮಾಸನ ತಾಯಿ. ಅಮಾಸನ ತಂದೆ ಯೆತೆರ್, ಇವನು ಇಷ್ಮಾಯೇಲ್ಯನು. |
18
|
ಕಾಲೇಬನು ಹೆಚ್ರೋನನ ಮಗನು. ಅವನ ಹೆಂಡತಿಯಾದ ಅಜೂಬಳಲ್ಲಿ ಅವನಿಗೆ ಹುಟ್ಟಿದ ಗಂಡುಮಕ್ಕಳು ಯಾರೆಂದರೆ, ಯೇಷೆರ್, ಶೋಬಾಬ್ ಮತ್ತು ಅರ್ದೋನ್. |
19
|
ಅಜೂಬಳು ಸತ್ತಮೇಲೆ ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವರಿಗೆ ಹೂರ್ ಎಂಬ ಮಗನು ಹುಟ್ಟಿದನು. |
20
|
ಹೂರನು ಊರಿಯನ ತಂದೆ. ಊರಿಯು ಬೆಚಲೇಲನ ತಂದೆ. |
21
|
ಹೆಚ್ರೋನನು ಅರವತ್ತು ವರ್ಷ ಪ್ರಾಯದವನಾದಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಆಕೆಯಲ್ಲಿ ಹೆಚ್ರೋನನು ಸೆಗೂಬನನ್ನು ಪಡೆದಳು. |
22
|
ಸೆಗೂಬನು ಯಾಯೀರನ ತಂದೆ. ಇವನಿಗೆ ಗಿಲ್ಯಾದ್ ಪ್ರಾಂತ್ಯದಲ್ಲಿ ಇಪ್ಪತ್ತಮೂರು ಪಟ್ಟಣಗಳಿದ್ದವು. |
23
|
ಆದರೆ ಗೆಷೂರ್ ಮತ್ತು ಅರಾಮನು ಯಾಯೀರನ ಊರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವೆಲ್ಲವೂ ಗಿಲ್ಯಾದನ ತಂದೆಯಾದ ಮಾಕೀರನಿಗೆ ಸೇರಿದವುಗಳಾಗಿದ್ದವು. |
24
|
(ಹೆಚ್ರೋನನ ಹೆಂಡತಿ ಅಬೀಯ.) ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಹೂರ್ ಎಂಬ ಮಗನನ್ನು ಹೆತ್ತಳು. ಅಷ್ಹೂರನು ತೆಕೋವನ ತಂದೆ. |
25
|
ಹೆಚ್ರೋನನ ಚೊಚ್ಚಲಮಗನು ಯೆರಹ್ಮೇಲ. ಇವನ ಗಂಡುಮಕ್ಕಳು ಯಾರೆಂದರೆ: ರಾಮ್, ಬೂನ, ಓರೆನ್, ಓಚೆಮ್ ಮತ್ತು ಅಹೀಯ. ರಾಮನು ಯೆರಹ್ಮೇಲನ ಚೊಚ್ಚಲಮಗನು. |
26
|
ಯೆರಹ್ಮೇಲನ ಎರಡನೆಯ ಹೆಂಡತಿಯಾಗಿದ್ದ ಅಟಾರಳಲ್ಲಿ ಓನಾಮ್ ಹುಟ್ಟಿದನು. |
27
|
ಯೆರಹ್ಮೇಲನ ಚೊಚ್ಚಲಮಗನಾದ ರಾಮನಿಗೆ ಮಾಚ್, ಯಾಮೀನ್ ಮತ್ತು ಏಕೆರ್ ಎಂಬ ಮಕ್ಕಳಿದ್ದರು. |
28
|
ಓನಾಮನ ಗಂಡುಮಕ್ಕಳು ಯಾರೆಂದರೆ: ಶಮ್ಮೈ ಮತ್ತು ಯಾದ. ಶಮ್ಮೈಯ ಮಕ್ಕಳು: ನಾದಾಬ್ ಮತ್ತು ಅಬೀಷೂರ್. |
29
|
ಅಬೀಷೂರನ ಹೆಂಡತಿಯ ಹೆಸರು ಅಬೀಹೈಲ್. ಇವರಿಗೆ ಅಹ್ಬಾನ್ ಮತ್ತು ಮೋಲೀದ್ ಎಂಬ ಗಂಡುಮಕ್ಕಳು ಇದ್ದರು. |
30
|
ನಾದಾಬನ ಮಕ್ಕಳು ಯಾರೆಂದರೆ: ಸೆಲೆದ್ ಮತ್ತು ಅಪ್ಪಯಿಮ್. ಸೆಲೆದನು ಮಕ್ಕಳಿಲ್ಲದೆ ಸತ್ತನು. |
31
|
ಅಪ್ಪಯಿಮನ ಮಗ ಇಷ್ಷೀ; ಇಷ್ಷೀಯ ಮಗನು ಶೇಷಾನ್; ಶೇಷಾನನ ಮಗ ಅಹ್ಲೈ. |
32
|
ಶಮ್ಮ್ಯೆಯ ತಮ್ಮನ ಹೆಸರು ಯಾದ. ಇವನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಯೆತೆರನು ಮಕ್ಕಳಿಲ್ಲದೆ ಸತ್ತನು. |
33
|
ಯೋನಾತಾನನ ಗಂಡುಮಕ್ಕಳು: ಪೆಲೆತ್ ಮತ್ತು ಜಾಜ. ಇದು ಯೆರಹ್ಮೇಲನ ಮಕ್ಕಳಪಟ್ಟಿ. |
34
|
ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ. ಹೆಣ್ಣುಮಕ್ಕಳೇ ಇದ್ದರು. ಇವನಿಗೆ ಈಜಿಪ್ಟಿನ ಯರ್ಹ ಎಂಬ ಸೇವಕನು ಇದ್ದನು. |
35
|
ಶೇಷಾನ ತನ್ನ ಮಗಳನ್ನು ಯರ್ಹನಿಗೆ ಕೊಟ್ಟು ಮದುವೆ ಮಾಡಿಸಿದನು. ಇವರಿಗೆ ಅತ್ತ್ಯೆ ಎಂಬ ಮಗನು ಹುಟ್ಟಿದನು. |
36
|
ಅತ್ತ್ಯೆ ನಾತಾನನ ತಂದೆ. ನಾತಾನನು ಜಾಬಾದನ ತಂದೆ. |
37
|
ಜಾಬಾದನು ಎಫ್ಲಾಲನ ತಂದೆ. ಎಫ್ಲಾಲನು ಓಬೇದನ ತಂದೆ. |
38
|
ಓಬೇದನು ಯೇಹೂವಿನ ತಂದೆ; ಯೇಹೂವು ಅಜರ್ಯನ ತಂದೆ. |
39
|
ಅಜರ್ಯನು ಹೆಲೆಚನ ತಂದೆ; ಹೆಲೆಚನು ಎಲ್ಲಾಸನ ತಂದೆ. |
40
|
ಎಲ್ಲಾಸನು ಸಿಸ್ಮೈನ ತಂದೆ; ಸಿಸ್ಮೈನು ಶಲ್ಲೂಮನ ತಂದೆ. |
41
|
ಶಲ್ಲೂಮನು ಯೆಕಮ್ಯಾಹನ ತಂದೆ. ಯೆಕಮ್ಯಾಹನು ಎಲೀಷಾಮನ ತಂದೆ. |
42
|
ಕಾಲೇಬನು ಯೆರಹ್ಮೇಲನ ತಮ್ಮ. ಅವನಿಗೆ ಕೆಲವು ಗಂಡುಮಕ್ಕಳಿದ್ದರು. ಚೊಚ್ಚಲಮಗನು ಮೇಷ. ಮೇಷನು ಜೀಫ್ಯನ ತಂದೆ. ಮಾರೇಷನು ಸಹ ಕಾಲೇಬನ ಮಗ. ಮಾರೇಷನು ಹೆಬ್ರೋನನ ತಂದೆ. |
43
|
ಹೆಬ್ರೋನನ ಗಂಡುಮಕ್ಕಳು ಯಾರೆಂದರೆ: ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ. |
44
|
ಶೆಮನ ಮಗನು ರಹಮ್ಯ. ರಹಮ್ಯನು ಯೊರ್ಕೆಯಾಮ್ಯನ ತಂದೆ. ರೆಕೆಮನು ಶಮ್ಮೈಯನ ತಂದೆ. |
45
|
ಶಮ್ಮೈಯನ ಮಗ ಮಾವೋನ್, ಇವನ ಮಗನು ಬೇತ್ಸೂರ್. |
46
|
ಕಾಲೇಬನ ದಾಸಿಯ ಹೆಸರು ಏಫ. ಈಕೆಯು ಹಾರಾನ್, ಮೋಚ ಮತ್ತು ಗಾಜೇಜನ ತಾಯಿ. |
47
|
ಯಾದೈಯಳ ಗಂಡುಮಕ್ಕಳು ಯಾರೆಂದರೆ: ರೆಗೆಮ್, ಯೋತಾವ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್. |
48
|
ಮಾಕಳು ಕಾಲೇಬನ ಇನ್ನೊಬ್ಬ ದಾಸಿ. ಈಕೆ ಶೆಬೆರ್ ಮತ್ತು ತಿರ್ಹನ ಎಂಬವರ ತಾಯಿ. |
49
|
ಈಕೆಯು ಶಾಫ್ ಮತ್ತು ಶೆವನ ತಾಯಿಯೂ ಆಗಿದ್ದಳು. ಶಾಫನ ಮಗ ಮದ್ಮನ್ನ. ಶೆವನು ಮಕ್ಬೇನ ಮತ್ತು ಗಿಬ್ಯನ ತಂದೆ. ಕಾಲೇಬನ ಮಗಳ ಹೆಸರು ಅಕ್ಸಾಹ. |
50
|
ಇದು ಕಾಲೇಬನ ಸಂತತಿಯವರ ಪಟ್ಟಿ; ಕಾಲೇಬನ ಚೊಚ್ಚಲಮಗನು ಹೂರ. ಇವನು ಎಫ್ರಾತಳಿಗೆ ಹುಟ್ಟಿದವನು. ಹೂರನ ಗಂಡುಮಕ್ಕಳು ಯಾರೆಂದರೆ, ಕಿರ್ಯತ್ಯಾರೀಮ್ ಕಟ್ಟಿದವನಾದ ಶೋಬಾಲ್ ಮತ್ತು |
51
|
ಬೇತ್ಲೆಹೇಮನ್ನು ಕಟ್ಟಿದವನಾದ ಸಲ್ಮ ಮತ್ತು ಬೇತ್ಗಾದೇರ್ ಕಟ್ಟಿದವನಾದ ಹಾರೇಫ್. |
52
|
ಶೋಬಾಲನು ಕಿರ್ಯತ್ಯಾರೀಮನ್ನು ಕಟ್ಟಿದನು. ಇದು ಶೋಬಾಲನ ಸಂತತಿಯವರ ಪಟ್ಟಿ: ಹಾರೋಯೆ ಮತ್ತು ಮಾನಹತಿ ಊರಿನ ಅರ್ಧಜನರು; |
53
|
ಮತ್ತು ಕಿರ್ಯತ್ಯಾರೀಮಿನ ಕುಟುಂಬದವರು. ಇವರು ಯೆತೆರಿಯರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು. ಇವರಿಂದ ಚೊರ್ರಾತ್ಯರು ಮತ್ತು ಎಷ್ಟಾವೋಲ್ಯರು ಬಂದರು. |
54
|
ಸಲ್ಮನ ಸಂತತಿಯವರ ಪಟ್ಟಿ; ಬೇತ್ಲೆಹೇಮಿನ ನಿವಾಸಿಗಳು, ನೆಟೋಫಾ, ಅಟರೋತ್, ಬೇತ್ಯೋವಾಬ್, ಮಾನಹತಿಯ ಅರ್ಧಜನರು, ಚೊರ್ಗಯಿತರು, 55ಶಾಸ್ತ್ರಿಗಳ ಸಂತಾನ ಯಾಬೇಚ್, ತಿರ್ರಾತ್ಯ, ಶಿಮ್ಗಾತ್ಯ ಮತ್ತು ಸೂಕಾತ್ಯ ಎಂಬ ಸ್ಥಳಗಳಲ್ಲಿ ವಾಸಿಸುವರು. ಇವರು ಹಮಾತಿನಿಂದ ಬಂದ ಕೇನ್ಯರು. ಬೆತ್ರೇಕಾಬನ್ನು ಹಮಾತನು ಸ್ಥಾಪಿಸಿದನು. |
55
|
[This verse may not be a part of this translation] |
1-Chronicles 2:48 Kannada Language Bible Words basic statistical display
COMING SOON ...