Bible Languages

Indian Language Bible Word Collections

Bible Versions

Books

1 Chronicles Chapters

1 Chronicles 15 Verses

Bible Versions

Books

1 Chronicles Chapters

1 Chronicles 15 Verses

1 ದಾವೀದನಗರದಲ್ಲಿ ದಾವೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಒಂದು ಸ್ಥಳವನ್ನು ಏರ್ಪಡಿಸಿ ಗುಡಾರವನ್ನು ನಿರ್ಮಿಸಿದನು.
2 “ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೆಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ದಾವೀದನು ಹೇಳಿದನು.
3 ಎಲ್ಲಾ ಇಸ್ರೇಲರು ಜೆರುಸಲೇಮಿಗೆ ಬರಬೇಕೆಂದು ದಾವೀದನು ಪ್ರಕಟಿಸಿದನು. ಲೇವಿಯರು ಒಡಬಂಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ದಾವೀದನು ಸಿದ್ಧಪಡಿಸಿದ್ದ ಸ್ಥಳಕ್ಕೆ ತಂದರು.
4 ದಾವೀದನು ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆದನು.
5 ಕೆಹಾತ್ಯನ ಕುಲದವರಲ್ಲಿ ನೂರಿಪ್ಪತ್ತು ಮಂದಿ; ಊರಿಯೇಲ್ ಇವರ ಮುಖ್ಯಸ್ಥನು.
6 ಮೆರಾರೀಯ ಕುಲದವರಲ್ಲಿ ಇನ್ನೂರಿಪ್ಪತ್ತು ಮಂದಿ; ಇವರ ಮುಖ್ಯಸ್ಥನು ಅಸಾಯನು.
7 ಗೇರ್ಷೋಮನ ಕುಲದವರಲ್ಲಿ ನೂರಮೂವತ್ತು ಮಂದಿ; ಅವರ ನಾಯಕನು ಯೋವೇಲ್.
8 ಎಲೀಚಾಫಾನನ ಕುಲದವರಲ್ಲಿ ಇನ್ನೂರು ಮಂದಿ; ಅವರ ನಾಯಕನು ಶೆಮಾಯ.
9 ಹೆಬ್ರೋನಿನ ಕುಲದವರಲ್ಲಿ ಎಂಭತ್ತು ಮಂದಿ; ಎಲೀಯೇಲನು ಅವರ ನಾಯಕನು.
10 ಉಜ್ಜೀಯೇಲನ ಕುಲದವರಲ್ಲಿ ನೂರಹನ್ನೆರಡು ಮಂದಿ; ಅಮ್ಮೀನಾದಾಬನು ಅವರ ನಾಯಕ.
11 ನಂತರ ದಾವೀದನು ಯಾಜಕರಾದ ಚಾದೋಕನನ್ನು ಮತ್ತು ಎಬ್ಯಾತಾರನನ್ನು ಮತ್ತು ಕೆಳಕಂಡ ಲೇವಿಯರನ್ನು ಸಹ ಕರೆಸಿದನು: ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್.
12 ದಾವೀದನು ಅವರಿಗೆ, “ನೀವು ಲೇವಿಕುಲದ ನಾಯಕರು. ನೀವೂ ಉಳಿದ ಲೇವಿಯರೂ ನಿಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು.
13 ಕಳೆದ ಸಲ, ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೆಂದು ಯೆಹೋವನಲ್ಲಿ ವಿಚಾರಿಸಲಿಲ್ಲ. ಲೇವಿಯರಾದ ನೀವು ಅದನ್ನು ಹೊರಲಿಲ್ಲ. ಆದುದರಿಂದಲೇ ನಮ್ಮ ದೇವರಾದ ಯೆಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.
14 ಆಗ ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಮಾಡಿಕೊಂಡರು. ಇಸ್ರೇಲರ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ತಮ್ಮನ್ನು ಸಿದ್ಧಪಡಿಸಿಕೊಂಡರು.
15 ಮೋಶೆಯು ಆಜ್ಞಾಪಿಸಿದ್ದ ಪ್ರಕಾರವೇ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೇವಿಯರು ಸಿದ್ಧಪಡಿಸಿದರು. ಯೆಹೋವನು ಹೇಳಿದಂತೆಯೇ ಅವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋದರು.
16 ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.
17 ಲೇವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಆಸಾಫನನ್ನೂ ಏತಾನನನ್ನೂ ಕರೆತಂದರು. ಹೇಮಾನನು ಯೋವೇಲನ ಮಗ. ಆಸಾಫನು ಬೆರೆಕ್ಯನ ಮಗ. ಏತಾನನು ಕೂಷಾಯನ ಮಗ. ಇವರೆಲ್ಲಾ ಮೆರಾರೀಯ ಸಂತತಿಯವರು.
18 ಲೇವಿಯರ ಇನ್ನೊಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರೆಲ್ಲಾ ಲೇವಿಯರ ಕಾವಲುಗಾರರಾಗಿದ್ದರು.
19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನ್ ಕಂಚಿನ ತಾಳವನ್ನು ಬಾರಿಸಿದರು.
20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಇವರುಗಳು ಅಲಾಮೋತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು.
21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್ ಮತ್ತು ಅಜಜ್ಯ ಇವರುಗಳು ಶೆಮೀನೀತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಇದು ಇವರ ಖಾಯಂ ಕೆಲಸವಾಗಿತ್ತು.
22 ಲೇವಿಯರ ನಾಯಕನಾದ ಕೆನನ್ಯನು ಗಾಯಕರ ಮುಖಂಡನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.
23 ಬೆರಕ್ಯನು ಮತ್ತು ಎಲ್ಕಾನನು ಒಡಂಬಡಿಕೆ ಪೆಟ್ಟಿಗೆಯ ಕಾವಲುಗಾರರಾಗಿದ್ದರು.
24 ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಇವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವಾಗ ತುತ್ತೂರಿ ಊದುವ ಕೆಲಸವನ್ನು ಕೊಟ್ಟನು. ಓಬೇದೆದೋಮ್ ಮತ್ತು ಯೆಹೀಯ ಒಡಂಬಡಿಕೆಯ ಪೆಟ್ಟಿಗೆಗೆ ಕಾವಲುಗಾರರಾದರು.
25 ದಾವೀದನೂ ಇಸ್ರೇಲಿನ ಹಿರಿಯರೂ ಮುಖಂಡರೂ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ಹೋದರು. ಅವರು ಅದನ್ನು ಓಬೇದೆದೋಮನ ಮನೆಯಿಂದ ಹೊರತಂದರು. ಎಲ್ಲರಿಗೂ ಸಂತೋಷವಾಯಿತು.
26 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದನು. ಅಲ್ಲಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞ ಮಾಡಿದರು.
27 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತ ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನನ್ಯನೂ ಅವನ ಜೊತೆಯಲ್ಲಿದ್ದ ಗಾಯಕರೆಲ್ಲರೂ ಉತ್ತಮವಾದ ನಾರಿನ ಬಟ್ಟೆಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಬಟ್ಟೆ ಧರಿಸಿ, ಉತ್ತಮವಾದ ನಾರಿನಿಂದ ಮಾಡಿದ ಏಫೋದನ್ನು ಅದರ ಮೇಲೆ ಧರಿಸಿಕೊಂಡಿದ್ದನು.
28 ಹೀಗೆ ಎಲ್ಲಾ ಇಸ್ರೇಲರು ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದರು. ಅವರು ಕೊಂಬುಗಳನ್ನೂ ತುತ್ತೂರಿಗಳನ್ನೂ ಊದಿದರು; ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸಿದರು; ಆನಂದದಿಂದ ಆರ್ಭಟಿಸಿದರು.
29 ದಾವೀದನ ನಗರದಲ್ಲಿ ಮೆರವಣಿಗೆಯು ಬಂದಾಗ ದಾವೀದನ ಹೆಂಡತಿಯಾದ ಮೀಕಲಳು ಕಿಟಿಕಿಯಿಂದ ನೋಡಿದಳು. (ಇವಳು ಸೌಲನ ಮಗಳು.) ದಾವೀದನು ಕುಣಿಯುತ್ತಾ ಹಾಡುವದನ್ನು ಆಕೆ ಕಂಡಳು. ತನ್ನ ಗಂಡನ ಮೇಲೆ ಆಕೆಗಿದ್ದ ಗೌರವವು ಕಡಿಮೆಯಾಯಿತು. ಯಾಕೆಂದರೆ ದಾವೀದನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವನೆಂದು ಆಕೆಯು ಅಂದುಕೊಂಡಳು.

1-Chronicles 15:1 Kannada Language Bible Words basic statistical display

COMING SOON ...

×

Alert

×