ಆಗ ಜನರು ನೆಲದ ಮೇಲೆ ಕೂತುಕೊಳ್ಳುವಂತೆ ಆತನು ಅಪ್ಪಣೆ ಕೊಟ್ಟು ಆ ಏಳು ರೊಟ್ಟಿಗಳನ್ನು ತಕ್ಕೊಂಡು ಸ್ತೋತ್ರ ಮಾಡಿ ಮುರಿದು ಜನರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಅವರು ಜನರಿಗೆ ಹಂಚಿದರು.
ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
ಯೇಸು ಅದನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನಂದರೆನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಯಾಕೆ ತರ್ಕಿಸಿಕೊಳ್ಳುತ್ತೀರಿ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣಮಾಡಿಕೊಂಡಿದ್ದಿರೋ?
ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.
ಆದರೆ ಆತನು ತಿರುಗಿಕೊಂಡು ತನ್ನ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ--ಸೈತಾನನೇ ನನ್ನ ಹಿಂದೆ ಹೋಗು; ಯಾಕಂದರೆ ನೀನು ಯೋಚಿಸುವಂಥದ್ದು ದೇವರವುಗಳಲ್ಲ, ಆದರೆ ಮನುಷ್ಯರವುಗಳೇ ಎಂದು ಹೇಳಿದನು.
ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ.
ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು.
ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.