1
|
ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು; |
2
|
ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು. |
3
|
ನೀನು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕಾದದ್ದೇ ನಂದರೆ--ಪಾಪದ ಬಲಿಗಾಗಿ ಮೇಕೆಗಳಲ್ಲಿ ಮರಿ ಯನ್ನೂ ದಹನಬಲಿಗಾಗಿ ದೋಷವಿಲ್ಲದ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿ ಯನ್ನೂ ತೆಗೆದುಕೊಳ್ಳಬೇಕು. |
4
|
ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು. |
5
|
ಮೋಶೆಯು ಆಜ್ಞಾಪಿಸಿದವುಗಳನ್ನು ಅವರು ಸಭೆಯ ಗುಡಾರದ ಮುಂದೆ ತಂದರು; ಸಭೆಯೆಲ್ಲವೂ ಹತ್ತಿರ ಬಂದು ಕರ್ತನ ಮುಂದೆ ನಿಂತಿತು. |
6
|
ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು. |
7
|
ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು. |
8
|
ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು. |
9
|
ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು. |
10
|
ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು. |
11
|
ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು. |
12
|
ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು. |
13
|
ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು. |
14
|
ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು. |
15
|
ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು. |
16
|
ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು. |
17
|
ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು. |
18
|
ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು. |
19
|
ಹೋರಿ ಟಗರಿನ ಕೊಬ್ಬನ್ನೂ ಹಿಂಭಾಗವನ್ನೂ ಕರುಳುಗಳನ್ನು ಮುಚ್ಚುವ ಮೂತ್ರಜನಕಾಂಗಗಳನ್ನೂ ಕಲಿಜದ ಮೇಲಿರುವ ಪೊರೆಯನ್ನೂ |
20
|
ಅವರು ಎದೆ ಭಾಗಗಳ ಮೇಲೆ ಕೊಬ್ಬನ್ನು ಇಟ್ಟಾಗ ಅವನು ಯಜ್ಞ ವೇದಿಯ ಮೇಲೆ ಸುಟ್ಟನು. |
21
|
ಮೋಶೆಯು ಆಜ್ಞಾಪಿಸಿ ದಂತೆ ಆರೋನನು ಎದೆಯ ಭಾಗಗಳನ್ನು ಬಲಭುಜ ವನ್ನು ಆಡಿಸಿ ಕರ್ತನ ಮುಂದೆ ಸಮರ್ಪಣೆಗಾಗಿ ಆಡಿಸಿದನು. |
22
|
ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು. |
23
|
ಮೋಶೆಯೂ ಆರೋನನೂ ಸಭೆಯ ಗುಡಾರದ ಒಳಗೆ ಹೋಗಿ ಹೊರಗೆ ಬಂದು ಜನರನ್ನು ಆಶೀರ್ವ ದಿಸಿದರು; ಆಗ ಕರ್ತನ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು. |
24
|
ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು. |
Leviticus 9:16 Telugu Language Bible Words basic statistical display
COMING SOON ...