ಆದರೆ ನೀರು ಭೂಮುಖದಲ್ಲೆಲ್ಲಾ ಇದ್ದದ್ದರಿಂದ ಪಾರಿವಾಳದ ಅಂಗಾಲಿಗೆ ವಿಶ್ರಮಿಸುವದಕ್ಕೆ ಸ್ಥಳವು ಸಿಕ್ಕದೆ ಅದು ತಿರಿಗಿ ಅವನ ಬಳಿಗೆ ನಾವೆಗೆ ಬಂತು. ಅವನು ಕೈಚಾಚಿ ಅದನ್ನು ಹಿಡಿದು ನಾವೆಯೊಳಗೆ ಸೇರಿಸಿ ಕೊಂಡನು.
ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆದದ್ದೇನಂದರೆ, ನೀರು ಭೂಮಿಯ ಮೇಲಿನಿಂದ ಒಣಗಿಹೋಗಿತ್ತು. ನೋಹನು ನಾವೆಯ ಮುಚ್ಚಳವನ್ನು ತೆಗೆದು ನೋಡಲಾಗಿ, ಇಗೋ, ಭೂಮಿಯು ಒಣಗಿಹೋಗಿತ್ತು.
ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.
ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.