ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು.
ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ.
ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.