Indian Language Bible Word Collections
Psalms 89:35
Psalms Chapters
Psalms 89 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Assamese
Books
Old Testament
New Testament
Psalms Chapters
Psalms 89 Verses
1
|
ಕರ್ತನ ಕರುಣೆಗಳನ್ನು ಯುಗಯುಗಕ್ಕೂ ಹಾಡುವೆನು; ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿಂದ ತಿಳಿಯಪಡಿ ಸುವೆನು. |
2
|
ಎಂದೆಂದಿಗೂ ಕರುಣೆಯು ಸ್ಥಾಪಿಸಲ್ಪಡು ವದು; ಆಕಾಶಗಳಲ್ಲಿಯೂ ನಿನ್ನ ನಂಬಿಗಸ್ತಿಕೆಯನ್ನು ಸ್ಥಿರಪಡಿಸುವಿ ಎಂದು ಹೇಳಿದ್ದೇನೆ. |
3
|
ನಾನು ಆದು ಕೊಂಡವನೊಂದಿಗೆ ಒಡಂಬಡಿಕೆ ಮಾಡಿದ್ದೇನೆ; ನನ್ನ ಸೇವಕನಾದ ದಾವೀದನಿಗೆ ಆಣೆ ಇಟ್ಟು ಹೇಳಿದ್ದೇ ನಂದರೆ-- |
4
|
ಎಂದೆಂದಿಗೂ ನಿನ್ನ ಸಂತತಿಯನ್ನು ಸ್ಥಿರ ಪಡಿಸುವೆನು; ತಲತಲಾಂತರಕ್ಕೂ ನಿನ್ನ ಸಿಂಹಾಸನವನ್ನು ಕಟ್ಟುವೆನು ಸೆಲಾ. |
5
|
ಇದಲ್ಲದೆ, ಆಕಾಶಗಳು ಓ ಕರ್ತನೇ, ನಿನ್ನ ಅದ್ಭುತಗಳನ್ನು ಪರಿಶುದ್ಧರ ಸಭೆಯಲ್ಲಿ ನಿನ್ನ ನಂಬಿಗಸ್ತಿಕೆಯನ್ನು ಸಹ ಕೊಂಡಾಡುವವು. |
6
|
ಪರ ಲೋಕದಲ್ಲಿ ಕರ್ತನಿಗೆ ಸಮಾನವಾದವನು ಯಾರು? ಪರಾಕ್ರಮಶಾಲಿಗಳ ಮಕ್ಕಳಲ್ಲಿ ಕರ್ತನಿಗೆ ಸಮಾನನಾದವನು ಯಾರು? |
7
|
ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ. |
8
|
ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹಾಗೆ ಶಕ್ತನಾದ ಕರ್ತನು ಯಾರು? ಇಲ್ಲವೆ ನಿನ್ನ ನಂಬಿಗಸ್ತಿಕೆಯು ನಿನ್ನ ಸುತ್ತಲೂ ಅದೆ. |
9
|
ನೀನು ಸಮುದ್ರದ ಉಬ್ಬರವನ್ನು ಆಳುತ್ತೀ; ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀ. |
10
|
ಕೊಲ್ಲ ಲ್ಪಟ್ಟ ಒಬ್ಬನಂತೆ ನೀನು ರಾಹಬನ್ನು ತುಂಡಾಗುವಂತೆ ಒಡೆದಿದ್ದೀ. ನಿನ್ನ ಬಲದ ತೋಳಿನಿಂದ ನಿನ್ನ ಶತ್ರು ಗಳನ್ನು ಚದರಿಸಿ ಬಿಟ್ಟಿದ್ದೀ. |
11
|
ಆಕಾಶಗಳು ನಿನ್ನವು; ಭೂಮಿಯು ಸಹ ನಿನ್ನದು; ಲೋಕವನ್ನೂ ಅದರ ಪೂರ್ಣತೆಯನ್ನೂ ನೀನು ಉಂಟುಮಾಡಿದ್ದೀ. |
12
|
ಉತ್ತರವನ್ನೂ ದಕ್ಷಿಣವನ್ನೂ ನೀನೇ ನಿರ್ಮಿಸಿದ್ದೀ; ತಾಬೋರೂ ಹೆರ್ಮೋನೂ ನಿನ್ನ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ. |
13
|
ನಿನಗೆ ಪರಾಕ್ರಮವುಳ್ಳ ತೋಳು ಉಂಟು; ಕೈ ಬಲವುಳ್ಳದ್ದು. ನಿನ್ನ ಬಲಗೈ ಉನ್ನತವಾ ದದ್ದು. |
14
|
ನೀತಿಯೂ ನ್ಯಾಯವೂ ನಿನ್ನ ಸಿಂಹಾಸನದ ಸ್ಥಳವಾಗಿದೆ ಕೃಪೆಯೂ ಸತ್ಯವೂ ನಿನ್ನ ಮುಂದೆ ಹೋಗುತ್ತವೆ; |
15
|
ಉತ್ಸಾಹ ಧ್ವನಿಯನ್ನು ತಿಳಿದ ಜನರು ಧನ್ಯರು; ಕರ್ತನೇ, ನಿನ್ನ ಮುಖದ ಬೆಳಕಿನಲ್ಲಿ ಅವರು ನಡೆದುಕೊಳ್ಳುವರು. |
16
|
ನಿನ್ನ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು ನಿನ್ನ ನೀತಿಯಲ್ಲಿ ಅವರು ಉನ್ನತಕ್ಕೇರು ವರು. |
17
|
ಅವರ ಬಲದ ಮಹಿಮೆಯು ನೀನೇ ಮತ್ತು ನಿನ್ನ ಕಟಾಕ್ಷದಿಂದ ನಮ್ಮ ಕೊಂಬು ಉನ್ನತವಾಗುವದು. |
18
|
ನಮ್ಮ ಗುರಾಣಿಯು ಕರ್ತನೇ; ನಮ್ಮ ಅರಸನು ಇಸ್ರಾಯೇಲಿನ ಪರಿಶುದ್ಧನೇ. |
19
|
ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ. |
20
|
ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ. |
21
|
ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು. |
22
|
ಶತ್ರುವು ಅವನನ್ನು ಬಲಾತ್ಕಾರ ಮಾಡನು; ಯಾವ ದುಷ್ಟನೂ ಅವನನ್ನು ಹಿಂಸೆ ಪಡಿಸನು. |
23
|
ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು. |
24
|
ಆದರೆ ನನ್ನ ನಂಬಿಗಸ್ತಿಕೆಯೂ ಕರುಣೆಯೂ ಅವನ ಸಂಗಡ ಇರುವವು. ನನ್ನ ಹೆಸರಿನಲ್ಲಿ ಅವನ ಕೊಂಬು ಉನ್ನತವಾಗುವದು. |
25
|
ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು. |
26
|
ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು. |
27
|
ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು. |
28
|
ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು. |
29
|
ಅವನ ಸಂತತಿ ಯನ್ನು ಸಹ ಎಂದೆಂದಿಗೂ ಅವನ ಸಿಂಹಾಸನವನ್ನು ಆಕಾಶದ ದಿವಸಗಳ ಹಾಗೆಯೂ ಮಾಡುವೆನು. |
30
|
ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ, |
31
|
ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, |
32
|
ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು. |
33
|
ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು. |
34
|
ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು. |
35
|
ಒಂದು ಸಾರಿ ನನ್ನ ಪರಿಶುದ್ಧತ್ವ ದಿಂದ ಆಣೆಯಿಟ್ಟು ಹೇಳಿದ್ದೇನೆ; ದಾವೀದನಿಗೆ ಸುಳ್ಳಾ ಡೆನು. |
36
|
ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು. |
37
|
ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ. |
38
|
ಆದರೆ ನೀನು ಅಸಹ್ಯಿಸಿಬಿಟ್ಟು ತಿರಸ್ಕರಿಸಿ ನಿನ್ನ ಅಭಿಷಕ್ತನ ಮೇಲೆ ಉಗ್ರನಾದಿ; |
39
|
ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ. |
40
|
ಅವನ ಬೇಲಿಗಳ ನ್ನೆಲ್ಲಾ ಮುರಿದು ಅವನ ಕೋಟೆಗಳನ್ನು ಹಾಳು ಮಾಡಿದ್ದೀ. |
41
|
ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ. |
42
|
ಅವನ ವೈರಿಗಳ ಬಲಗೈಯನ್ನು ಉನ್ನತ ಮಾಡಿದ್ದೀ; ಶತ್ರುಗಳೆಲ್ಲರನ್ನು ಸಂತೋಷಪಡಿಸಿದ್ದೀ. |
43
|
ಅವನ ಕತ್ತಿಯ ಬಾಯನ್ನು ಹಿಂದಿರುಗಿಸಿ, ಯುದ್ಧ ದಲ್ಲಿ ಅವನನ್ನು ನಿಲ್ಲುವಂತೆ ಮಾಡಲಿಲ್ಲ. |
44
|
ಅವನ ಪ್ರಭೆಯನ್ನು ತಡೆದಿ; ಅವನ ಸಿಂಹಾಸನವನ್ನು ನೆಲಕ್ಕೆ ಹಾಕಿದ್ದೀ. |
45
|
ಅವನ ಯೌವನದ ದಿವಸಗಳನ್ನು ಕಡಿಮೆಮಾಡಿ, ನಾಚಿಕೆಯಿಂದ ಅವನನ್ನು ಮುಚ್ಚಿದ್ದೀ ಸೆಲಾ. |
46
|
ಕರ್ತನೇ, ಎಷ್ಟರ ವರೆಗೆ? ಸದಾಕಾಲಕ್ಕೆ ನೀನು ಮರೆಯಾಗಿರುವಿ? ನಿನ್ನ ಸಿಟ್ಟು ಬೆಂಕಿಯ ಹಾಗೆ ಉರಿಯುವದೋ? |
47
|
ನನ್ನ ಆಯುಸ್ಸು ಎಷ್ಟು ಕಡಿಮೆ ಯೆಂದು ಜ್ಞಾಪಕಮಾಡಿಕೋ; ಎಲ್ಲಾ ಮನುಷ್ಯರನ್ನು ಯಾಕೆ ವ್ಯರ್ಥವಾಗಿ ನಿರ್ಮಿಸಿದ್ದೀ? |
48
|
ಮರಣವನ್ನು ನೋಡದೆ ಬದುಕುವಂಥ, ಸಮಾಧಿಯ ವಶದಿಂದ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಂಥ, ಪುರುಷನು ಯಾರು ಸೆಲಾ. |
49
|
ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ? |
50
|
ಕರ್ತನೇ, ನಿನ್ನ ಸೇವಕರ ನಿಂದೆ ಯನ್ನು, ಎಲ್ಲಾ ಪರಾಕ್ರಮಿಗಳ ನಿಂದೆಯನ್ನು ನಾನು ಹೇಗೆ ನನ್ನ ಎದೆಯಲ್ಲಿ ಹೊತ್ತೆನೆಂದೂ ಜ್ಞಾಪಕ ಮಾಡಿಕೋ. |
51
|
ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ? |
52
|
ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್. |