Indian Language Bible Word Collections
Proverbs 4:13
Proverbs Chapters
Proverbs 4 Verses
Books
Old Testament
New Testament
Bible Versions
English
Tamil
Hebrew
Greek
Malayalam
Hindi
Telugu
Kannada
Gujarati
Punjabi
Urdu
Bengali
Oriya
Marathi
Books
Old Testament
New Testament
Proverbs Chapters
Proverbs 4 Verses
1
|
ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ. |
2
|
ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ. |
3
|
ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ. |
4
|
ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು. |
5
|
ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ. |
6
|
ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು. |
7
|
ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ. |
8
|
ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು. |
9
|
ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು. |
10
|
ಓ ನನ್ನ ಮಗನೇ, ಆಲಿಸಿ ನನ್ನ ಮಾತುಗಳನ್ನು ಅಂಗೀಕರಿಸು; ಆಗ ನಿನ್ನ ಜೀವಿತದ ವರುಷಗಳು ಹೆಚ್ಚಾಗುವವು. |
11
|
ಜ್ಞಾನದ ಮಾರ್ಗದಲ್ಲಿ ನಾನು ನಿನಗೆ ಬೋಧಿಸಿದೆನು; ಸರಿಯಾದ ದಾರಿಗಳಲ್ಲಿ ನಾನು ನಿನ್ನನ್ನು ನಡಿಸಿದೆನು. |
12
|
ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು; ನೀನು ಓಡುವಾಗ ಮುಗ್ಗರಿಸುವದಿಲ್ಲ. |
13
|
ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ. ಅದನ್ನು ಕಾಪಾಡು. ಅದು ನಿನ್ನ ಜೀವವಾಗಿದೆ. |
14
|
ದುಷ್ಟರ ದಾರಿಯೊಳಗೆ ಪ್ರವೇಶಿಸದಿರು, ಕೆಟ್ಟವರ ಮಾರ್ಗದಲ್ಲಿ ಹೋಗಬೇಡ. |
15
|
ಅದನ್ನು ತಪ್ಪಿಸು, ಅದರ ಪಕ್ಕದಲ್ಲಿ ಹಾದು ಹೋಗ ಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ. |
16
|
ಕೇಡು ಮಾಡದಿದ್ದರೆ ಅವರು ನಿದ್ರೆಹೋಗುವದಿಲ್ಲ; ಯಾರ ನ್ನಾದರೂ ಬೀಳಿಸದೆ ಇದ್ದರೆ ಅವರ ನಿದ್ರೆಗೆ ಭಂಗ ವಾಗುವದು. |
17
|
ಅವರು ದುಷ್ಟತನದ ರೊಟ್ಟಿಯನ್ನು ತಿಂದು ಬಲಾತ್ಕಾರದ ದ್ರಾಕ್ಷಾರಸವನ್ನು ಕುಡಿಯು ತ್ತಾರೆ. |
18
|
ಆದರೆ ಸಂಪೂರ್ಣವಾದ ದಿನಕ್ಕೆ ಹೆಚ್ಚೆಚ್ಚಾಗಿ ಹೊಳೆಯುವ ದೀಪದಂತೆ ನ್ಯಾಯವಂತರ ದಾರಿಯು ಹೊಳೆಯುವದು. |
19
|
ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು. |
20
|
ನನ್ನ ಮಗನೇ, ನನ್ನ ಮಾತುಗಳನ್ನು ಆಲಿಸು; ನನ್ನ ನುಡಿಗಳಿಗೆ ಕಿವಿಗೊಡು. |
21
|
ಅವುಗಳು ನಿನ್ನ ಕಣ್ಣುಗಳಿಗೆ ತಪ್ಪಿಹೋಗದೆ ಇರಲಿ; ಅವುಗಳನ್ನು ನಿನ್ನ ಹೃದಯದ ಮಧ್ಯದಲ್ಲಿ ಇಟ್ಟುಕೋ. |
22
|
ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ. |
23
|
ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು. |
24
|
ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು. |
25
|
ನಿನ್ನ ಕಣ್ಣುಗಳು ಮುಂದೆಯೇ ನೋಡಲಿ. ನಿನ್ನ ಕಣ್ಣು ರೆಪ್ಪೆಗಳು ನೆಟ್ಟಗೆ ನಿನ್ನ ಮುಂದೆಯೇ ನೋಡಲಿ. |
26
|
ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು; ನಿನ್ನ ಎಲ್ಲಾ ಮಾರ್ಗ ಗಳು ಸ್ಥಿರವಾಗಿರಲಿ. |
27
|
ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು. |