ಆಗ ಪೇತ್ರನು ಯೇಸುವಿಗೆ--ಕರ್ತನೇ, ಇಲ್ಲಿಯೇ ಇರುವದು ನಮಗೆ ಒಳ್ಳೇದು. ನಿನಗೆ ಮನಸ್ಸಿದ್ದರೆ ನಾವು ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆವು ಎಂದು ಹೇಳಿದನು.
ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ ಇಗೋ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ; ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು.
ಆದರೆ ಎಲೀಯನು ಆಗಲೇ ಬಂದನು. ಮತ್ತು ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಕುಮಾರ ನು ಸಹ ಅವರಿಂದ ಶ್ರಮೆಯನ್ನು ಅನುಭವಿಸುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
ಆಗ ಯೇಸು ಪ್ರತ್ಯುತ್ತರ ವಾಗಿ--ನಂಬಿಕೆಯಿಲ್ಲದ ಓ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.
ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.
ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.
ಅವನು ಮನೆ ಯೊಳಕ್ಕೆ ಬಂದಾಗ ಯೇಸು ಮುಂದಾಗಿ ಅವನಿಗೆ--ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋ ಕದ ರಾಜರು ಯಾರಿಂದ ಕಪ್ಪವನ್ನು ಇಲ್ಲವೆ ತೆರಿಗೆ ಯನ್ನು ತಕ್ಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಇಲ್ಲವೆ ಅನ್ಯರಿಂದಲೋ ಎಂದು ಕೇಳಿದನು.
ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ